ರಾಜ್ಯಕ್ಕೆ “ಹೆದ್ದಾರಿಗಳ’ ಕೊಡುಗೆ: ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಘೋಷಣೆ
Team Udayavani, Feb 8, 2023, 11:42 PM IST
ಬೆಂಗಳೂರು: ಸದ್ಯದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯದ ವಿವಿಧ ಭಾಗಗಳಿಗೆ ಹಲವು ಹೆದ್ದಾರಿಗಳ ನಿರ್ಮಾಣಕ್ಕೆ ಕೇಂದ್ರ ಸಾರಿಗೆ ಸಚಿವಾಲಯ ಅನುಮೋದನೆ ನೀಡಿದೆ.
ಉತ್ತರ ಕರ್ನಾಟಕ ಮತ್ತು ಮೈಸೂರು ಭಾಗದ ಹೆದ್ದಾರಿಗಳು ಅಭಿವೃದ್ಧಿಯಾಗಲಿವೆ. ಸ್ವತಃ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೇ ಟ್ವಿಟರ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕನಮಾಡಿ-ಬಿಜ್ಜರಗಿ-ತಿಕೋಟಾ ಸಂಪರ್ಕ ಮಾಡುವ ಎನ್‌ಎಚ್166ಇ ಹೆದ್ದಾರಿ ಅಗಲಗೊಳಿಸಲು 196.05 ಕೋಟಿ ರೂ.ಗಳ ಅನುಮೋದನೆ ನೀಡಲಾಗಿದೆ. ಕಲಬುರಗಿ ಮತ್ತು ವಿಜಯಪುರ ಜಿಲ್ಲೆಯ ಎನ್‌ಎಚ್ 548ಬಿ ಯಲ್ಲಿರುವ ಮುರ್ರಮ್‌ನಿಂದ ವಿಜಯಪುರದ ಐಬಿ ವೃತ್ತದ ವರೆಗಿನ ರಸ್ತೆ ಅಗಲಗೊಳಿಸಲು 957.09 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ.
ಕೊಪ್ಪಳ-ಗದಗ ಜಿಲ್ಲೆಯಲ್ಲಿ ಬರುವ ಭಾನಾಪುರ ಗದ್ದನಕೇರಿ ವಲಯದ ಎನ್‌ಎಚ್ 367ರಲ್ಲಿ ಬರುವ ಕುಕುನೂರ್, ಯಲಬುರ್ಗಾ, ಗಜೇಂದ್ರಗಡದಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ 333.96 ಕೋಟಿ ರೂ. ಇದೇ ವಲಯದ ಸರ್ಜಾಪುರದಿಂದ ಪಟ್ಟದಕಲ್ಲಿಗೆ ತೆರಳುವ ರಸ್ತೆ ಅಗಲಗೊಳಿಸಲು 445.62 ಕೋಟಿ ರೂ. ನೀಡಲು ಒಪ್ಪಿಗೆ ನೀಡಿದೆ.
ಮೈಸೂರಿನಿಂದ ಕುಶಾಲನಗರದ ವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕಾಗಿ 1,649.25 ಕೋಟಿ ರೂ. ಅನುದಾನ ಒದಗಿಸಲು ನಿರ್ಧರಿಸಲಾಗಿದೆ. ಇದು ಕುಶಾಲನಗರ ಬಳಿ ಇರುವ ಗುಡ್ಡೆಹೊಸೂರಿನಿಂದ ಮೈಸೂರು ಬಳಿ ಇರುವ ಇಲವಾಲ-ಕೆ.ಆರ್.ನಗರ ಜಂಕ್ಷನ್‌ಗೆ ಸಂಪರ್ಕಿಸುತ್ತದೆ.
ಕರ್ನಾಟಕದ ಹೆದ್ದಾರಿ ಯೋಜನೆಗಳಿಗೆ ಒಪ್ಪಿಗೆ ನೀಡಿದ ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ವಿಶ್ವದರ್ಜೆಯ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
-ಬಸವರಾಜ ಬೊಮ್ಮಾಯಿ,ಸಿಎಂ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.