![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jul 19, 2020, 11:46 AM IST
ಹೊಸದಿಲ್ಲಿ: ಚೀನೀ ಆ್ಯಪ್ ಗಳನ್ನು ಬೆರಳ ತುದಿಯಲ್ಲೇ ಹೊಸಕಿ ಹಾಕಿದ ಮೇಲೆ ಕೇಂದ್ರ ಸರಕಾರ ಇದೀಗ
ಭಾರತದಲ್ಲಿ ಚೀನದ ಪಿಎಲ್‌ಎ ಜತೆಗೆ ನಿರಂತರ ಸಂಪರ್ಕ ಹೊಂದಿರುವ ಅಲ್ಲಿನ ಕಂಪೆನಿಗಳ ಮೇಲೆ ಹದ್ದಿನಗಣ್ಣು ನೆಟ್ಟಿದೆ.
ಈ ಚೀನೀ ಕಂಪೆನಿಗಳು ಭಾರತದಲ್ಲಿದ್ದು ಕೊಂಡೇ ಸಾಗರೋತ್ತರ ಗುಪ್ತಚರ ಕೆಲಸ ನಿರ್ವಹಿಸುತ್ತಿವೆ ಎಂದು ಸರಕಾರ ಅಭಿಪ್ರಾಯಪಟ್ಟಿದೆ.
ಗುಪ್ತಚರ ಕಾನೂನು: ಚೀನ ಕಮ್ಯೂನಿಸ್ಟ್ ಆಡಳಿತವು 2017ರಲ್ಲಿ ನೂತನ ಗುಪ್ತಚರ ಕಾನೂನು ಜಾರಿಗೆ ತಂದಿದೆ. ಈ ಕಾನೂನಿನ 7ನೇ ವಿಧಿ “ಚೀನದ ಯಾವುದೇ ಸಂಸ್ಥೆ ಅಥವಾ ನಾಗರಿಕರು ವಿಶ್ವದ ಎಲ್ಲಿಗೆ ಹೋದರೂ ರಾಷ್ಟ್ರೀಯ ಗುಪ್ತಚರ ಸಂಸ್ಥೆಗಳ ಕಾರ್ಯಕ್ಕೆ ಸಹಕರಿಸಬೇಕು. ಇದಕ್ಕೆ ಸ್ಪಂದಿಸುವ ವ್ಯಕ್ತಿ, ಸಂಸ್ಥೆಗಳನ್ನು ಚೀನ ಸದಾ ರಕ್ಷಿಸುತ್ತದೆ’ ಎಂದು ಹೇಳಿದೆ.
ಭಾರತದಲ್ಲಿ ಗೂಢಚಾರಿಕೆ: ಈ ಕಾನೂನಿಗೆ ಬೆಂಬಲವಾಗಿರುವ ಭಾರತದಲ್ಲಿನ ಚೀನೀ ಸಂಸ್ಥೆಗಳನ್ನು ಕೇಂದ್ರ ಸರಕಾರ ಗುರುತಿಸಿದೆ. ಹುವಾಯ್, ಕ್ಸಿಂಡಿಯಾ ಸ್ಟೀಲ್ ಲಿಮಿಟೆಡ್, ಕ್ಸಿನ್‌ಕ್ಸಿಂಗ್ ಕ್ಯಾಥೆ ಇಂಟರ್‌ನ್ಯಾಶನಲ್ ಗ್ರೂಪ್, ಚೀನ ಎಲೆಕ್ಟ್ರಾನಿಕ್ಸ್ ಟೆಕ್ನಾಲಜಿ ಗ್ರೂಪ್ ಕಾರ್ಪೊ ರೇಶನ್ (ಸಿಇಟಿಸಿ)- ಇವು ಭಾರತದಲ್ಲಿ ನೆಲದಲ್ಲೇ ಇದ್ದು ಗೂಢಚಾರಿಕೆ ನಡೆಸುತ್ತಿವೆ ಎಂಬ ಅನುಮಾನ ವ್ಯಕ್ತವಾಗಿದೆ.
ನೌಕಾಪಡೆ ಗರ್ಜನೆ: ಲಡಾಖ್ ಬಿಕ್ಕಟ್ಟಿನ ನಡುವೆ ಭಾರತದ ನೌಕಾಪಡೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನೌಕಾಭ್ಯಾಸ ನಡೆಸಲು ಮುಂದಾಗಿದೆ. ಡೆಸ್ಟ್ರಾಯರ್, ಫ್ರಿಗೇಟ್ಸ್, ಸಬ್‌ಮೆರೀನ್‌ಗಳು ಈ ಅಭ್ಯಾಸದಲ್ಲಿ ಪಾಲ್ಗೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ.
ಈ ಸಂಸ್ಥೆಗಳ ಮೇಲೆ ಕೇಂದ್ರ ಸರಕಾರದ ಹದ್ದಿನ ಕಣ್ಣು
1. ಕ್ಸಿಂಡಿಯಾ ಸ್ಟೀಲ್ ಲಿಮಿಟೆಡ್, ಕೊಪ್ಪಳ: ಭಾರತ- ಚೀನದ ಅತಿದೊಡ್ಡ ಜಂಟಿ ಉದ್ಯಮ ಕ್ಸಿಂಡಿಯಾ ಸ್ಟೀಲ್ ಲಿಮಿಟೆಡ್. ಈ ಕಂಪೆನಿ ಕೊಪ್ಪಳ ಜಿಲ್ಲೆಯಲ್ಲಿ 0.8 ಮಿಲಿಯನ್ ಟನ್ ಸಾಮರ್ಥ್ಯದ ಕಬ್ಬಿಣ ಅದಿರಿನ ಪೆಲಿಟ್ ಸ್ಥಾವರವನ್ನು 2011ರಲ್ಲಿ ಸ್ಥಾಪಿಸಿದೆ. ಕ್ಸಿನ್‌ಕ್ಸಿಂಗ್ ಕ್ಯಾಥೆ ಗ್ರೂಪ್ ಇದರಲ್ಲಿ 250 ಕೋಟಿ ರೂ.ಗೂ ಅಧಿಕ ಬಂಡವಾಳ ಹೂಡಿದೆ.
2. ಕ್ಸಿನ್‌ಕ್ಸಿಂಗ್ ಕ್ಯಾಥೆ, ಛತ್ತೀಸಗಢ: ಛತ್ತೀಸಗಢ ಸರಕಾರದ ಆಹ್ವಾನದ ಫಲವಾಗಿ ಕ್ಸಿನ್‌ಕ್ಸಿಂಗ್ ಕ್ಯಾಥೆ ಇಂಟರ್‌ನ್ಯಾಶನಲ್ ಗ್ರೂಪ್ ಇಲ್ಲಿ ಅತಿದೊಡ್ಡ ಉತ್ಪಾದನಾ ಘಟಕ ಸ್ಥಾಪಿಸಲು ಮುಂದಾಗಿದೆ. 3 ಸಾವಿರ ಕೋಟಿ ರೂ. ವಾರ್ಷಿಕ ವಹಿವಾಟು ಹೊಂದಿರುವ ಈ ಸಂಸ್ಥೆ ಈಗಾಗಲೇ 30 ಸಾವಿರ ಕಬ್ಬಿಣದ ಪೈಪ್‌ಗ್ಳನ್ನು ಭಾರತಕ್ಕೆ ಪೂರೈಸಿದೆ.
3. ಸಿಇಟಿಸಿ, ಆಂಧ್ರಪ್ರದೇಶ: ಇದು ಚೀನದ ಪ್ರಮುಖ ಮಿಲಿಟರಿ ಎಲೆಕ್ಟ್ರಾನಿಕ್ಸ್ ತಯಾರಕ ಸಂಸ್ಥೆ. ಸಿಸಿಟಿವಿ ಉತ್ಪಾದನೆಗೆ ಹೆಸರುವಾಸಿ. 2018ರಲ್ಲಿ ಆಂಧ್ರದ ಶ್ರೀ ಸಿಟಿಯ 200 ಮೆಗಾವ್ಯಾಟ್ ಪಿವಿ ಉತ್ಪಾದನಾ ಕೇಂದ್ರದಲ್ಲಿ 320 ಕೋಟಿ ರೂ. ಹೂಡಿಕೆ ಮಾಡಿದೆ.
4. ಹುವಾಯ್, ಹೊಸದಿಲ್ಲಿ: ಪಿಎಲ್‌ಎ ಎಂಜಿನಿಯರಿಂಗ್ ಕಾರ್ಪ್ಸ್ ನ ಮಾಜಿ ಅಧಿಕಾರಿ 1987ರಲ್ಲಿ ಈ ಸಂಸ್ಥೆ ಕಟ್ಟಿದ. ಭಾರತದ ಸ್ಮಾರ್ಟ್‌ಫೋನ್ ಮತ್ತು ಸಂವಹನ ಕ್ಷೇತ್ರದಲ್ಲಿ ಇದು ಜನಪ್ರಿಯ ಬ್ರ್ಯಾಂಡ್. ಕಳೆದವರ್ಷ 12,800 ಕೋಟಿ ರೂ. ಆದಾಯ ಕಂಡಿದೆ. ಈಗ ಭಾರತದಲ್ಲಿ 5ಜಿ ತಂತ್ರಜ್ಞಾನ ಅನುಷ್ಠಾನದ ಕನಸು ಕಾಣುತ್ತಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.