ಉಗ್ಗುವಿಕೆ ಎಂದರೇನು?


Team Udayavani, Jul 5, 2020, 5:30 AM IST

ಉಗ್ಗುವಿಕೆ ಎಂದರೇನು?

ಉಗ್ಗುವಿಕೆ (ಸಾಮಾನ್ಯವಾಗಿ ಬಿಕ್ಕು, ತೊದಲು ಎನ್ನಲಾಗುತ್ತದೆ) ಮಾತನಾಡಲು ಕಷ್ಟಪಡುವ ಒಂದು ಅಸ್ವಸ್ಥತೆಯಾಗಿದೆ. ಈ ಅಸ್ವಸ್ಥತೆಯಿರುವ ವ್ಯಕ್ತಿಗೆ ನಿರರ್ಗಳವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ. ಮಾತನಾಡುವಾಗ ಧ್ವನಿ ಅಥವಾ ಪದ ಮರುಕಳಿಸುವುದು (ಉದಾ: ನ ನ ನನ್ನ), ಧ್ವನಿ ಹೊರಡಿಸುವಾಗ ವಿಳಂಬಿಸುವುದು, (ಉದಾ: ಶ್‌ ಶ್‌ ಶ್‌ ಶ್‌ ಶ್‌ ಶ್‌ ಅಲೆ) ಅಥವಾ ಬಾಯಿಯಿಂದ ಸ್ವರವಾಗಲಿ / ಪದವಾಗಲಿ ಹೊರಬಾರದೆ ಮಾತನಾಡುವಾಗ ಸ್ತಬ್ಧಗೊಳ್ಳುವುದು (ಮಾತಿಗೆ ತಡೆಯಾಗುವುದು) ಅಥವಾ ಇವೆಲ್ಲವೂ ಒಟ್ಟಿಗೆ ಕಂಡುಬರುವುದು. ಈ ತರಹದ ಸಮಸ್ಯೆಗಳು ಉಗ್ಗಿನ ತೊಂದರೆಯಿರುವ ವ್ಯಕ್ತಿಗೆ ಕಾಡುತ್ತವೆ. ಮಾತು ಅಗತ್ಯವೆನಿಸುವ ಸಂದರ್ಭಗಳಲ್ಲಿ ಇವರಿಗೆ ಬಹುವಾದ ಆತಂಕ ಮತ್ತು ಭಯ ಹುಟ್ಟಿಕೊಳ್ಳುತ್ತದೆ. ಇದು ಅವರನ್ನು ಮಾತನಾಡಲು ಹಿಂದೇಟು ಹಾಕುವಂತೆ ಅಥವಾ ಮಾತನಾಡಬೇಕಾದ ಪರಿಸ್ಥಿತಿಗಳಿಂದ ತಪ್ಪಿಸಿಕೊಳ್ಳುವಂತೆ ಮಾಡುತ್ತದೆ. ತೊದಲುವಿಕೆ ಕೆಲವು ವ್ಯಕ್ತಿಗಳಲ್ಲಿ ಸೌಮ್ಯ ಸ್ವರೂಪದ್ದಾದರೆ ಇನ್ನು ಕೆಲವರಲ್ಲಿ ತೀವ್ರ ರೀತಿಯದ್ದಾಗಬಹುದು. ಜನಸಂಖ್ಯೆಯ ಸುಮಾರು ಶೇ.1 ಜನರಲ್ಲಿ ಮಾತನಾಡುವಾಗಿನ ಈ ಏರುಪೇರು ಸ್ಥಿತಿ ಉಂಟಾಗುವುದು, ಭಾರತದಲ್ಲಿ ಸುಮಾರು 1.37 ಕೋಟಿ ಜನ ಉಗ್ಗುವಿಕೆ ತೊಂದರೆಗೀಡಾಗಿದ್ದಾರೆ.

ವ್ಯಕ್ತಿಯ ಮೇಲೆ ಉಗ್ಗುವಿಕೆಯ ಪ್ರಭಾವವೇನು?
ಉಗ್ಗುವ ವ್ಯಕ್ತಿಗೆ ಸಂಭಾಷಣೆ ನಡೆಸುವುದೇ ಬಹಳ ಸವಾಲಿನದ್ದಾಗಿ ಕಾಣಬಹುದು. ಕಾಲ ಕಳೆದಂತೆಲ್ಲ ಉಗ್ಗುವ ತೊಂದರೆ ಮಾತಿನ ಅಗತ್ಯವಿರುವ ಪರಿಸ್ಥಿತಿಗಳಿಂದ ತಪ್ಪಿಸಿಕೊಳ್ಳಲು, ಶಾಲೆ – ಕಾಲೇಜು ಅಥವಾ ಗುಂಪು ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯಿಂದ ದೂರ ಉಳಿಯಲು ದಾರಿ ಮಾಡಿಕೊಡಬಹುದು. ಉಗ್ಗುವಿಕೆಯ ಜಟಿಲ ಪರಿಣಾಮಗಳಲ್ಲಿ ಸಾಮಾನ್ಯವಾಗಿ ಗಮನಕ್ಕೆ ಬರುವ ಮತ್ತೂಂದು ತೊಂದರೆಯೆಂದರೆ ಅವರನ್ನು ಬೆದರಿಸುವುದು ಮತ್ತು ಹಾಸ್ಯ ಮಾಡುವುದು. ಉಗ್ಗುವ ವ್ಯಕ್ತಿಗಳು ಮಾತನಾಡುವ ರೀತಿಯಲ್ಲಿಯೇ ಅನುಕರಣೆ ಮಾಡಿ ಅಥವಾ ಉಗ್ಗುವವರನ್ನು ಮಾತನಾಡಲಿಕ್ಕೂ ಬಿಡದೆ ಇತರರು ಇವರನ್ನು ಕುಚೋದ್ಯ (ತಮಾಷೆ) ಮಾಡಬಹುದು. ಇವೆಲ್ಲವೂ ಉಗ್ಗುವ ವ್ಯಕ್ತಿಗಳಲ್ಲಿ ಆತ್ಮಗೌರವ ಕುಂದುವ ಮತ್ತು ಆತ್ಮವಿಶ್ವಾಸದ ಕೊರತೆ ಕಂಡುಬರುವಂತಹ ಸಮಸ್ಯೆಗಳಾಗಿ ಪರಿಣಮಿಸಬಹುದು.

ಉಗ್ಗುವಿಕೆಗೆ ಕಾರಣಗಳೇನು?
ಉಗ್ಗುವಿಕೆಗೆ ಕಾರಣವಾಗಬಲ್ಲ ಅನೇಕ ಅಂಶಗಳಿವೆ. ಆನುವಂಶಿಕತೆ (ಕುಟುಂಬದಲ್ಲಿ ಯಾರಿಗಾದರೂ ಉಗ್ಗು ಇದ್ದರೆ, ಮುಂದಿನ ಪೀಳಿಗೆಗೆ ಅದು ರವಾನೆಗೊಳ್ಳಬಹುದು) ಅಥವಾ ಮಾತಿನ ಕ್ರಿಯಾವಾಹಿ ನಿಯಂತ್ರಣದಲ್ಲಿನ ಅಸಹಜತೆಗಳಂತಹ ನರಶರೀರ ಶಾಸ್ತ್ರ ಸಂಬಂಧಿತ ಅಂಶಗಳು ಸಾಮಾನ್ಯವಾಗಿ ವರದಿಗೊಂಡ ಕೆಲವು ಅಂಶಗಳಾಗಿವೆ. ಮುಖ್ಯವಾಗಿ ಮೂರು ವಿಧದ ಉಗ್ಗುವಿಕೆಗಳಿವೆ: ನರವಿಜ್ಞಾನ ಸಂಬಂಧಿತ (ಮೆದುಳಿಗೆ ಪೆಟ್ಟಾದರೆ ಕಂಡುಬರುವಂತಹುದು), ಮಾನಸಿಕ ಕಾರಣಗಳಿಂದ ಬರುವ ಮತ್ತು ಅತ್ಯಂತ ಸಾಧಾರಣ ವಿಧವೆಂದರೆ ಬೆಳವಣಿಗೆಯೊಂದಿಗೆ ಕಂಡುಬರುವ ಉಗ್ಗು. ಬೆಳವಣಿಗೆಯೊಂದಿಗಿನ ಉಗ್ಗು ಸಾಧಾರಣವಾಗಿ 2ರಿಂದ 5 ವರ್ಷಗಳ ನಡುವಿನ ಪ್ರಾಯದಲ್ಲಿ ಹೆಚ್ಚಾಗುವುದು ಬಹಳ ಸಾಮಾನ್ಯ. ಕೆಲವು ಮಕ್ಕಳು ಸ್ವಾಭಾವಿಕವಾಗಿಯೇ ಚೇತರಿಸಿಕೊಳ್ಳುತ್ತಾರಾದರೆ, ಉಳಿದವರಲ್ಲಿ ಉಗ್ಗು ಜೀವನದುದ್ದಕ್ಕೂ ಅವರ ಸಂವಹನವನ್ನು ಬಾಧಿಸುವ ದುರ್ಬಲ ಸ್ಥಿತಿಯಾಗಿ ಬಿಡುತ್ತದೆ.

ಉಗ್ಗುವಿಕೆಯ ಸಾಮಾನ್ಯ ಲಕ್ಷಣಗಳು
– ಮಾತಾಡಲು / ಪದಗಳನ್ನು ಹೇಳಲು ಕಷ್ಟಪಟ್ಟು ಆರಂಭಿಸುವುದು.
– ಮರುಕಳಿಸುವ ಧ್ವನಿ (ಸ್ವರದ ಪುನರಾವರ್ತನೆ).
– ಒಂದು ಶಬ್ದ ಉಚ್ಚರಿಸಲು ಪದಗಳನ್ನು ಅಥವಾ ಸ್ವರಗಳನ್ನು ಉದ್ದಕ್ಕೆ ಎಳೆದು ಹೇಳುವುದು.
– ಮಾತಾಡುವಾಗ ತಡೆದು ನಿಲ್ಲುವುದು, ಮಾತಿನ ಮಧ್ಯ ಪದಗಳು ತುಂಡರಿಸಲ್ಪಡುವುದು.
– ಮಾತನಾಡುವಾಗ ವಿಪರೀತ ಉದ್ವೇಗ ಮತ್ತು ಆತಂಕ.
ಉಗ್ಗು ಹೊಂದಿದ ಕೆಲವು ವ್ಯಕ್ತಿಗಳಲ್ಲಿ ಮೇಲೆ ತಿಳಿಸಿದ ವಾಕ್‌ -ಸಮಸ್ಯೆಗಳ ಜತೆಗೆ ವೇಗವಾಗಿ ಕಣ್ಣು ಮಿಟುಕಿಸುವುದು, ಮುಷ್ಟಿ ಬಿಗಿಹಿಡಿಯುವುದು, ತಲೆ ಅಲುಗಿಸುವುದು ಅಥವಾ ಮುಖ ಸೊಟ್ಟಗೆ ಮಾಡುವುದರಂತಹ ಹೆಚ್ಚುವರಿ ನಡುವಳಿಕೆಗಳು ಕೂಡ ಕಂಡುಬರಬಹುದು.

ಉಗ್ಗು ಪೂರ್ತಿಯಾಗಿ ವಾಸಿಯಾಗುತ್ತದೆಯೇ?
ಯಾವುದೇ ಔಷಧಿಯಿಂದ ಉಗ್ಗುವಿಕೆಗೆ ಚಿಕಿತ್ಸೆಗೆ ನೀಡಲು/ವಾಸಿಗೊಳಿಸಲು ಸಾಧ್ಯವಿಲ್ಲ. ಆದರೆ ಸ್ಪೀಚ್‌ ಥೆರಪಿ ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಲ್ಲುದು. ಬೇರೆ ಬೇರೆ ರೀತಿಯ ಥೆರಪಿ ಟೆಕ್ನಿಕ್‌ಗಳು ಲಭ್ಯವಿದ್ದು, ಒಬ್ಬ ವ್ಯಕ್ತಿಗೆ ಉಪಯೋಗವಾಗುವ ಥೆರಪಿ ಟೆಕ್ನಿಕ್‌ ಇನ್ನೊಬ್ಬರಿಗೆ ಪ್ರಯೋಜನಕ್ಕೆ ಬರದಿರಬಹುದು. ಉಗ್ಗು ನಿಯಂತ್ರಣದ ಅಥವಾ ನಿರ್ವಹಣೆಯ ಮೊದಲ ಹೆಜ್ಜೆ ನಿಮಗೆ ಉಗ್ಗು ಇರುವುದನ್ನು ನೀವು ಒಪ್ಪಿಕೊಳ್ಳುವುದು.

ನನಗೆ ಉಗ್ಗು ಇದ್ದರೆ ಅಥವಾ ಉಗ್ಗುವವರು ಪರಿಚಿತರಿದ್ದರೆ ನಾನೇನು ಮಾಡಬಹುದು?

ಮಕ್ಕಳಿಗೆ
ಮಕ್ಕಳಲ್ಲಿ ಬೇಗನೆ ಥೆರಪಿ ನೀಡುವುದು ನಿರರ್ಗಳ ಮಾತಿಗೆ ಪ್ರಧಾನ ಸಹಾಯವಾಗುತ್ತದೆ. ನಿಮ್ಮ ಮಗುವಿಗೆ ಮಾತನಾಡಲು ಕಷ್ಟವಾಗುವ ಸ್ಥಿತಿ ಆರು ತಿಂಗಳುಗಳಿಗೂ ಹೆಚ್ಚು ಕಾಲ ಮುಂದುವರಿದಿದ್ದರೆ, ಉಗ್ಗುವಿಕೆಯ ಜತೆಗೆ ಮಗುವಿಗೆ ಬೇರೇನಾದರೂ ಸ್ಪೀಚ್‌ ಲಾಂಗ್ವೇಜ್‌ ಸಮಸ್ಯೆಯಿದ್ದರೆ, ಪ್ರಯಾಸಪಟ್ಟು ಮಾತಾಡುವ ಅಥವಾ ಮಾತಾಡುವಾಗ ಮಾಂಸಪೇಶಿಗಳಲ್ಲಿ ವಿಪರೀತ ಆತಂಕ ವ್ಯಕ್ತವಾಗುವಂತಹ ಮೇಲೆ ತಿಳಿಸಿದ ಯಾವುದಾದರೂ ವರ್ತನೆ ಉಗ್ಗುವಿಕೆಯೊಂದಿಗೆ ಕಂಡುಬಂದರೆ ಅಥವಾ ಮಾತಿನ ಅಗತ್ಯ ಬೀಳುವ ಸಂದರ್ಭಗಳಲ್ಲಿ ತೊದಲುವಿಕೆಯ ಕಾರಣದಿಂದ ಮಾತಾಡಲು ಮಗು ಭಯಪಡುವುದನ್ನು ಬೆಳೆಸಿಕೊಂಡಿದೆಯಾದರೆ ನೀವು ಸ್ಪೀಚ್‌ ಲಾಂಗ್ವೇಜ್‌ ಪಾಥಾಲಜಿಸ್ಟ್‌ವನ್ನು (ಎಸ್‌ಎಲ್‌ಪಿ) ಭೇಟಿಯಾಗಬೇಕು.

ವಯಸ್ಕರಿಗೆ
ನೀವು ಉಗ್ಗು ಹೊಂದಿರುವ ವಯಸ್ಕರಾಗಿದ್ದರೆ ಅಥವಾ ಉಗ್ಗುವ ತೊಂದರೆಯಿರುವ ಹರೆಯದ ಇಲ್ಲವೆ ವಯಸ್ಕ ವ್ಯಕ್ತಿ ನಿಮಗೆ ಗೊತ್ತಿರುವವರಾಗಿದ್ದರೆ ಸ್ಪೀಚ್‌ ಲಾಂಗ್ವೇಜ್‌ ಪೆಥಾಲಜಿಸ್ಟ್‌ರನ್ನು ಭೇಟಿ ಮಾಡಿ ಅಥವಾ ಆ ವ್ಯಕ್ತಿಗೆ ಭೇಟಿ ಮಾಡುವಂತೆ ತಿಳಿಸಿ. ಎಸ್‌ಎಲ್‌ಪಿ ಕೆಲವು ಸ್ಪೀಚ್‌ ಟೆಸ್ಟ್‌ಗಳನ್ನು ನಡೆಸಿ ನಿಮ್ಮ ಸ್ಥಿತಿಯ ತೀವ್ರತೆಯನ್ನು ಮೌಲ್ಯ ಮಾಪನದ ಮೂಲಕ ಹಂಚಿಕೆ ಮಾಡುತ್ತಾರೆ. ಬಳಿಕ ನಿಮಗೆ ಸ್ಪೀಚ್‌ ಥೆರಪಿ ಬೇಕೇ ಬೇಡವೇ ಎಂಬುದನ್ನು ತಿಳಿಸುತ್ತಾರೆ. ನಿಮಗೆ ಸ್ಪೀಚ್‌ ಥೆರಪಿ ಅಗತ್ಯ ಬಿದ್ದರೆ ನಿಮ್ಮ ವಾಕ್‌ ಶಕ್ತಿ ಉತ್ತಮಗೊಳಿಸಲು ಅಷ್ಟೇ ಅಲ್ಲದೆ ಉಗ್ಗುವಿಕೆಯ ಪ್ರತಿಯಾಗಿ ನಕಾರಾತ್ಮಕ ಪ್ರತಿಕ್ರಿಯೆಗಳಿಗೆ ಅನನ್ಯ ಚಿಕಿತ್ಸಾ ಯೋಜನೆಯೊಂದನ್ನು ಥೆರಪಿಸ್ಟ್‌ ನಿಮ್ಮ ಕಂಡಿಷನ್‌/ಆವಶ್ಯಕತೆಗಳಿಗೆ ಸರಿ ಹೊಂದುವಂತೆ ರೂಪಿಸುತ್ತಾರೆ.

ನನ್ನ ಉಗ್ಗುವಿಕೆ ಸುಧಾರಣೆಗೆ ನಾನು
ಎಷ್ಟು ಕಾಲ ಥೆರಪಿ ಪಡೆಯಬೇಕು ?
ನನ್ನ ಉಗ್ಗುವಿಕೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದಾದ್ದರಿಂದ ಚಿಕಿತ್ಸಾ ಸಮಯವೂ ಭಿನ್ನವಾಗಿರುತ್ತದೆ. ಥೆರಪಿಯ ಪ್ರಗತಿಯು ಅಸ್ವಸ್ಥತೆಯ ತೀವ್ರತೆ, ಆರಂಭಗೊಂಡು ಎಷ್ಟು ಸಮಯವಾಯಿತು, ಕೌಟುಂಬಿಕ ಹಿನ್ನೆಲೆ ಮತ್ತು ಉಗ್ಗುವ ವ್ಯಕ್ತಿ ಥೆರಪಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ರೀತಿಗಳಂತಹ ಅನೇಕ ಅಂಶಗಳನ್ನವಲಂಬಿಸಿದೆ.

ಯಾರನ್ನು ಸಂಪರ್ಕಿಸಬೇಕು?
ನಿಮಗೆ ಉಗ್ಗು ಇದ್ದರೆ ಅಥವಾ ಉಗ್ಗು ಇರುವವರು ನಿಮಗೆ ತಿಳಿದವರಾಗಿದ್ದರೆ ಇಲ್ಲವೆ ಈ ವಾಕ್‌ ಅಸ್ವಸ್ಥತೆ ಕುರಿತು ಹೆಚ್ಚಿನ ಮಾಹಿತಿ ಬೇಕಾದರೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವಾಕ್‌ ಶ್ರವಣ ವಿಭಾಗಕ್ಕೆ ಭೇಟಿ ನೀಡುವಂತೆ ನಾವು ನಿಮ್ಮನ್ನು ಒತ್ತಾಯಪೂರ್ವಕವಾಗಿ ವಿನಂತಿಸುತ್ತೇವೆ.

ಡಾ| ಗೋಪೀಕೃಷ್ಣನ್‌
ಸೀನಿಯರ್‌ ಅಸೋಸಿಯೇಟ್‌ ಪ್ರೊಫೆಸರ್‌ಚಂಚಲ್‌, ರಿಸರ್ಚ್‌ ಸ್ಕಾಲರ್‌,ವಾಕ್‌ ಮತ್ತು ಶ್ರವಣ ವಿಭಾಗ
ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.