ಗುಹೆಯಲ್ಲಿ ತಾಮ್ರ, ಹಿತ್ತಾಳೆ ಪೂಜಾ ಸಾಮಗ್ರಿ ಪತ್ತೆ
Team Udayavani, Aug 9, 2021, 2:09 PM IST
ಕುದೂರು: ಕಣ್ಣೂರು ಮಕ್ಕಳ ದೇವರ ಮಠದ ಅವರಣದ ಅಡಿಕೆ ತೋಟದ ಜಮೀನಿನಲ್ಲಿ ಸುಮಾರು ಹತ್ತು ಅಡಿ ಭೂಮಿಯ ಕೆಳಗೆ ಕಲ್ಲಿನಿಂದ ನಿರ್ಮಿಸಿರುವ ಗುಹೆಯಲ್ಲಿ ಪುರಾತನ ತಾಮ್ರದ ಮತ್ತು ಹಿತ್ತಾಳೆ ಪೂಜಾ ಸಾಮಗ್ರಿಗಳು ಪತ್ತೆಯಾಗಿವೆ.
ಕಣ್ಣೂರು ಮಕ್ಕಳ ದೇವರ ಮಠದ ಜಮೀನಲ್ಲಿ ಅಡಿಕೆ ಸಸಿಗಳಿಗೆ ಹನಿ ನೀರಾವರಿ ಅಳವಡಿಸಲು ಜೆಸಿಬಿ ಮೂಲಕ ಗುಂಡಿ ತೆಗೆಯುವ
ಸಂದರ್ಭದಲ್ಲಿ ಜೆಸಿಬಿ ಯಂತ್ರಕ್ಕೆ ಕಲ್ಲಿನ ಚಪ್ಪಡಿ ಸ್ಕಿಕಿಹಾಕಿಕೊಂಡಿದೆ. ಅದನ್ನು ತೆಗೆದಾಗ ಅದರ ಕೆಳಗೆ ಹತ್ತು ಅಡಿ ಅಳದವರೆಗೆ ಗುಹೆಯಂತೆ ಅಚ್ಚುಕಟ್ಟಾದ ಸ್ಥಳದಲ್ಲಿ ತಾಮ್ರದ ತಟ್ಟೆಗಳು, ದೀಪಗಳು, ಉಯ್ಯಾಲೆ, ಚೈನ್, ವಿಭೂತಿ ಗಟ್ಟಿ, ಘಂಟೆ, ಮಂಗಳಾರತಿ ಉದಾಂಡ, ಕಮಂಡಲ, ಸರಪಳಿಗಳು, ನಾಗಭರಣ, ಜವಳಿಕುಣಿತಕ್ಕೆ ಬೇಕಾಗಿರುವ ಸಾಮಗ್ರಿಗಳು ಸಿಕ್ಕಿವೆ. ಒಟ್ಟು 100 ಕೆ.ಜಿ ತೂಕದ ಹಿತ್ತಾಳೆ, ಕಂಚು ಮುಟ್ಟಿನ ಸಾಮಗ್ರಿಗಳು ಪತ್ತೆಯಾಗಿವೆ ಎಂದು ಮಠಾಧ್ಯಕ್ಷ ಡಾ.ಶ್ರೀಮೃತ್ಯಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಭಕ್ತರಲ್ಲಿ ಕೂತೂಹಲ: ಶ್ರೀಮಠದ ಸ್ವಾಮೀಜಿಯೊಬ್ಬರು ಲೋಕ ಕಲ್ಯಾಣಕ್ಕಾಗಿ ತೆಪಗೈದು, ಜೀವಂತ ಸಮಾಧಿ ಹೊಂದಿರಬಹುದು ಎಂಬ ಮಾಹಿತಿ ಇದ್ದು, ಗುಹೆಯೊಳಗೆ ಆಗ ತಾನೆ ಹಾರಿಹೋದ ವಾಸನೆ ಬರುತ್ತಿದ್ದು, ದೀಪದ ಬತ್ತಿಯಲ್ಲಿ ಬೆಂಕಿ ಕಿಡಿಗಳನ್ನು ಕಂಡಿದ್ದಾರೆ. ಭೂಮಿಯಲ್ಲಿ ಸಿಕ್ಕ ಎರಡು ಪಾತ್ರೆಗಳ ತುಂಬಾ ನೀರು ತುಂಬಿತ್ತು. ಅದರಲ್ಲಿ ವಿಭೂತಿಗಟ್ಟಿಯಿದೆ. ವಿಭೂತಿಗಟ್ಟಿ ನೀರಿನಲ್ಲಿ ಕರಗದೆ ಹಾಗೆಯೇ ಉಳಿದಿರುವುದು ಅಚ್ಚರಿ ಮೂಡಿಸಿದೆ. ಈ ವಿಸ್ಮಯ ಭಕ್ತರಲ್ಲಿ ಕೂತೂಹಲ ಉಂಟಾಗಿ ತಂಡೋಪ ತಂಡವಾಗಿ ಗ್ರಾಮಸ್ಥರು ಜಮಾಯಿಸುತ್ತಿದ್ದಾರೆ.
ಇದನ್ನೂ ಓದಿ:ನಮ್ಮ ಪಾಲಿನ ನೀರು ಬಳಸಿಕೊಳ್ಳಲು ಯಾರಪ್ಪನ ಅಪ್ಪಣೆಯೂ ಬೇಕಾಗಿಲ್ಲ: ಕಾರಜೋಳ
ಪಾತ್ರೆಗಳ ಮೇಲೆ ಕನ್ನಡ ಬರಹ: ಈ ಪಾತ್ರೆಯ ಮೇಲೆ ದಳವಾಯಿ ನಂಜರಾಜಯ್ಯ ಎಂಬ ಕನ್ನಡ ಬರಹವಿದೆ. ಇದೇ ದಳವಾಯಿ
ನಂಜರಾಜಯ್ಯ ಮಠಕ್ಕೆ ಹೋನ್ನಾಪುರ ಗ್ರಾಮವನ್ನು ಬಳುವಳಿಯಾಗಿ ನೀಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಹೋನ್ನಾಪುರ ಗ್ರಾಮದ
ಮುಂಭಾಗದಲ್ಲಿರುವ ಕ್ರಿ.ಶ. 1730ರ ಶಿಲಾ ಶಾಸನದಲ್ಲಿ ಮೈಸೂರಿನ ದಳವಾಯಿ ನಂಜರಾಜಯ್ಯ ಶ್ರೀಮಠಕ್ಕೆ ದಾನ ಮಾಡಿ, ಮಠದ
ಬೆಳವಣಿಗೆಗೆ ಪ್ರೋತ್ಸಾಹ ನೀಡಿದ್ದಾರೆ ಎಂಬ ಉಲ್ಲೇಖವಿದೆ. ಅದಕ್ಕೆ ಸಂಬಂಧಿಸಿದಂತೆ ತಾಮ್ರ ಪತ್ರ ಚಿತ್ರದುರ್ಗದ ಮುರುಘ ಮಠದಲ್ಲಿ ಇಂದಿಗೂ ಶಾಸನದ ಪ್ರತಿ ಇದೆ ಎಂದು ತಿಳಿದುಬಂದಿದೆ.
ಕಣ್ಣೂರಿನ ಜಂಗಮ ಮಠದಲ್ಲಿ ಇಂದಿಗೂ ಆರು ಗದ್ದುಗೆಗಳಿವೆ.ಮಕ್ಕಳದೇವರಮಠ,ಬಸವಮಠಇತರೆಹೆಸರುಗಳಿಂದ ಕರೆಯಲಾಗುತ್ತಿದೆ. ಅಂದು ದಳವಾಯಿ ನಂಜರಾಜಯ್ಯ ಶ್ರೀಮಠಕ್ಕೆ ದಾನ ನೀಡಿದ ಜಮೀನಿನ ಸುತ್ತಲೂ ಅಂದಿನ ಜಂಗಮರು ಹಾಕಿಸಿದ್ದ ಲಿಂಗ ಮುದ್ರೆ ಕಲ್ಲುಗಳು ಇಂದಿಗೂ ಇವೆ. ಮಠದ ಇತಿಹಾಸಕ್ಕೆ ಮಹತ್ವದ ಸಾಕ್ಷಿ: ಇಂದಿಗೂ ಕಣ್ಣೂರಿನ ಮಕ್ಕಳ ದೇವರ ಮಠದ ಹೊಲದಲ್ಲಿ ಶರಣರು ತಪಗೈದಿದ್ದ ಗುಹೆ, ಯೋಗ
ಮಂಟಪ,ಲಿಂಗ ಮುದ್ರೆಕಲ್ಲುಗಳು ಮಠದ ಐತಿಹಾಸಿಕ ಸ್ಮಾರಕವಾಗಿವೆ. ಪುರಾತನ ಮಠಕ್ಕೆ ಹೊಸರೂಪ ನೀಡಲು ಸಿದ್ಧತೆ ನಡೆಸಿದ್ದೇವೆ. ಇದೇ
ಸಮಯದಲ್ಲಿ ಗುಹೆ ಮತ್ತು ಪೂಜಾ ಸಾಮಗ್ರಿಗಳು ಪತ್ತೆಯಾಗಿರುವುದು ನಮ್ಮ ಮಠದ ಇತಿಹಾಸಕ್ಕೆ ಮಹತ್ವದ ಸಾಕ್ಷಿಯಾಗಿವೆ. ಪತ್ತೆಯಾಗಿರುವ ಸಾಮಗ್ರಿಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಇತಿಹಾಸ ಸಂಶೋಧಕರನ್ನು ಕರೆಯಿಸಿ ಹೆಚ್ಚಿನ ಸಂಶೊಧನೆ ಮಾಡಿಸಲಾಗುವುದು, ಪತ್ತೆಯಾಗಿರುವ ಕಂಚು, ಹಿತ್ತಾಳೆ ಸಾಮಗ್ರಿಗಳನ್ನು ಸಂರಕ್ಷಿಸಲಾಗುವುದು ಎಂದು ಶ್ರೀಮಠದ ಮೃತ್ಯಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.