ಬೆಳಾಲು ದಂಪತಿಯ ಜೀವನಾಧರಿಸಿದ ಸಂಜೀವಿನಿ : ಸಾಲ ಪಡೆದು ಸಾವಯವ ಕೃಷಿಕ್ರಾಂತಿ
Team Udayavani, Feb 15, 2022, 10:00 AM IST
ಬೆಳ್ತಂಗಡಿ : ಆಧುನಿಕ ಜಗತ್ತಿನಲ್ಲಿ ಆಹಾರ ಪದಾರ್ಥಗಳು ವಿಷಪೂರಿತ ವಾಗುತ್ತಿರುವ ಮಧ್ಯೆ ಸಂಜೀವಿನಿ ಸ್ವಸಹಾಯ ಗುಂಪಿನಿಂದ ಸಾಲ ಪಡೆದು ಸಾವಯವ ಕೃಷಿ ಬೆಳೆದ ದಂಪತಿಯಿಲ್ಲಿದ್ದಾರೆ.
ಬೆಳಾಲು ಗ್ರಾಮದ ಎಂಜಿರಿಗೆ ವಿಮಲಾ ಸಂಜೀವಿನಿ ಸ್ವಸಹಾಯ ಗುಂಪಿನಿಂದ ಸಾಲವಾಗಿ ಪಡೆದ ಮೊತ್ತದಿಂದ ತಮ್ಮ ಒಂದು ಎಕ್ರೆಯಲ್ಲಿ ಸುಮಾರು 10 ಬಗೆಯ ತರಕಾರಿ ಬೆಳೆದು ಜೀವನ ನಿರ್ವಹಣೆಗೊಂದು ಮಾರ್ಗ ಕಂಡುಕೊಂಡಿದ್ದಾರೆ.
500 ಗಿಡ ಬೆಂಡೆ
ಹಾಲು ಬೆಂಡೆ ತಳಿಯ 500 ಗಿಡ ನಾಟಿ ಮಾಡಿದ್ದು ಉತ್ತಮ ಫಸಲು ಪಡೆದಿದ್ದಾರೆ. ಬಲಾ°ಡ್ ತಳಿಯ 500 ಬದನೆ ಗಿಡ, 65 ಊರಿನ ಬದನೆ ಗಿಡ ನಾಟಿ ಮಾಡಿದ್ದಾರೆ. 300 ಮುಳ್ಳು ಸೌತೆ ಗಿಡ, 500 ಅಲಸಂಡೆ ಬುಡ ಹಾಕಿದ್ದಾರೆ.
ವಾರಕ್ಕೆ 10 ಸಾವಿರ ರೂ. ಆದಾಯ
ಬಲಾ°ಡ್ ತಳಿಯ ಬದನೆಗೆ 40 ರೂ., ಹಾಲು ಬೆಂಡೆಕಾಯಿ 70 ರೂ., ಅಲಸಂಡೆ 40 ರೂ. ನಂತೆ ಮಾರುಕಟ್ಟೆಗೆ ನೀಡುತ್ತಾರೆ. ವಾರಕ್ಕೆ ಸರಿಸುಮಾರು 10,000 ರೂ. ನಂತೆ ಪಡೆಯುತ್ತಿದ್ದು, ಪ್ರಸಕ್ತ 2 ಲಕ್ಷ ರೂ. ಅಂದಾಜು ಲಾಭದ ಆದಾಯ ನಿರೀಕ್ಷಿಸಿದ್ದಾರೆ. ಸ್ನೇಹ ಸಂಜೀವಿನಿ ಎಂಬ ಗುಂಪಿನಡಿ ವಿಮಲಾ ಅವರು ಸಂಜೀವಿನಿ ಯೋಜನೆಯಡಿ ಸ್ನೇಹಸಂಜೀವಿನಿ ಎಂಬ 10 ಮಂದಿಯಿರುವ ಗುಂಪೊಂದಿದೆ. ಅದರಿಂದ 50 ಸಾವಿರ ರೂ. ಸಾಲ ಪಡೆದು ತಾವು ಬೆಳೆದ ತರಕಾರಿ ಬೆಳೆಯಿಂದ ವಾರಕ್ಕೆ 600 ರೂ. ನಂತೆ ಸಂದಾಯ ಮಾಡಿ ಉಳಿದ ಹಣದಿಂದ ಕುಟುಂಬ ನಿರ್ವಹಣೆ ನಡೆಸುತ್ತಿದ್ದಾರೆ.
ಹಾನಿಕಾರಕ ಕೀಟನಾಶಕಗಳನ್ನು ಬಳಸದೆ ಕೇವಲ ಜೀವಾಂಮೃತ ಹಾಗೂ ಜೈವಿಕ ಉತ್ಪನ್ನವನ್ನಷ್ಟೆ ಸಿಂಪಡೆಣೆ ಮಾಡುತ್ತಿದ್ದಾರೆ. ಜತೆಗೆ ಕೀಟಗಳ ಹತೋಟಿಗೆ ಕೀಟ ಬಲೆ ಅಳವಡಿಸಿದ್ದಾರೆ. ಮಂಗಗಳು, ಗಿಳಿಗಳ ಉಪಟಳವಿದೆ. ಇದಕ್ಕೆ ನೆಟ್ ಬಳಕೆ ಮಾಡುವುದರಿಂದ ಬೆಳೆ ಸಂರಕ್ಷಿಸಬಹುದು ಎನ್ನುತ್ತಾರೆ ವಿಮಲಾ, ಶೇಖರ ಪೂಜಾರಿ ದಂಪತಿ. ಜಿ.ಪಂ.ನ ಸಹಾಯಕ ಯೋಜ ನಾಧಿಕಾರಿ ಎಚ್.ಆರ್.ನಾಯಕ್, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿ ಪ್ರಸಾದ್, ಜಿಲ್ಲಾ ವ್ಯವಸ್ಥಾಪಕಿ (ಕೌಶಲ) ಪ್ರತಿಮಾ, ತಾ.ಪಂ. ಕಾರ್ಯಕ್ರಮ ವ್ಯವ ಸ್ಥಾಪಕ ಜಯಾನಂದ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
9 ಲಕ್ಷ ರೂ. ಸಾಲ
“ಸಂಜೀವಿನಿ’ ಮಹಿಳಾ ಸ್ವ ಸಹಾಯ ಗುಂಪುಗಳನ್ನು ಆಧಾರ ವಾಗಿಸಿ ಅನುಷ್ಠಾನಗೊಳ್ಳುತ್ತಿರುವ ಯೋಜನೆ. ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸುವುದೇ ಇದರ ಮೂಲ ಉದ್ದೇಶ. ಬೆಳ್ತಂಗಡಿ ತಾಲೂಕಿನಲ್ಲಿ 126 ಸಂಜೀವಿನಿ ಸ್ವಸಹಾಯ ಗುಂಪುಗಳಿವೆ. ಬೆಳಾಲು ಗ್ರಾಮವೊಂದಕ್ಕೆ ಈ ಬಾರಿ ತರಕಾರಿ ಬೆಳೆಗೆ 6 ಗುಂಪುಗಳಿಗೆ 9 ಲಕ್ಷ ರೂ.ಸಾಲ ಒದಗಿಸಲಾಗಿದೆ.
-ಎಚ್.ಆರ್.ನಾಯಕ್, ಸಹಾಯಕ ಯೋಜನಾಧಿಕಾರಿ, ಜಿ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.