Court ಐವರ ಅಪರಾಧ ಸಾಬೀತು; ಮಂಗಳವಾರ ಶಿಕ್ಷೆಯ ಪ್ರಮಾಣ ಪ್ರಕಟ
ಲತೀಶ್ ನಾಯಕ್, ಇಂದ್ರಜಿತ್ ಕೊಲೆಯತ್ನ ಪ್ರಕರಣ
Team Udayavani, Oct 30, 2023, 11:28 PM IST
ಮಂಗಳೂರು: ನಗರದ ಅಳಕೆ ಮಾರ್ಕೆಟ್ ಎದುರು 2015ರಲ್ಲಿ ನಡೆದ ಕುದ್ರೋಳಿಯ ಲತೀಶ್ ನಾಯಕ್ ಮತ್ತು ಇಂದ್ರಜಿತ್ ಕೊಲೆಯತ್ನ ಪ್ರಕರಣದ 5 ಮಂದಿ ಆರೋಪಿಗಳ ಅಪರಾಧ ಸಾಬೀತಾಗಿದೆ ಎಂದು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು ತೀರ್ಪು ನೀಡಿದ್ದಾರೆ.
ಮೂಲ್ಕಿ ನಿವಾಸಿಗಳಾದ ರವಿಚಂದ್ರ ಆಲಿಯಾಸ್ ವಿಕ್ಕಿ ಪೂಜಾರಿ (ಸೈಕೊ ವಿಕ್ಕಿ) (32), ಆತನ ಸಹೋದರ ಶಶಿ ಪೂಜಾರಿ (30), ವಾಮಂಜೂರು ಪೆರ್ಮಂಕಿಯ ಧನರಾಜ್ ಪೂಜಾರಿ (31), ಬೋಳೂರಿನ ಮೋಕ್ಷಿತ್ ಸಾಲ್ಯಾನ್ (28) ಮತ್ತು ರಾಜೇಶ್ (30) ಶಿಕ್ಷೆಗೊಳಗಾದವರು. ಇನ್ನೋರ್ವ ಆರೋಪಿ ಗಣೇಶ್ (28) ತಲೆಮರೆಸಿಕೊಂಡಿದ್ದಾನೆ.
ಕಾರನ್ನು ಢಿಕ್ಕಿ ಹೊಡೆಸಿ ತಲವಾರಿನಿಂದ ದಾಳಿ
2015ರ ಜು. 27ರಂದು ಸಂಜೆ 6.30ರ ಸುಮಾರಿಗೆ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಅಳಕೆ ಮಾರ್ಕೆಟ್ ಎದುರು ಲತೀಶ್ ನಾಯಕ್ ಗೆಳೆಯರಾದ ಇಂದ್ರಜಿತ್, ಸಿದ್ಧಾರ್ಥ್, ಪ್ರತಾಪ್, ಮಿಥುನ್ ಮತ್ತು ಸುಶಾಂತ್ ಅವರೊಂದಿಗಿದ್ದರು. ಮನೆಯಿಂದ ಕರೆ ಬಂದ ಹಿನ್ನೆಲೆಯಲ್ಲಿ ಅಲ್ಲಿಂದ ಹೊರಟ ಲತೀಶ್ ನಾಯಕ್ ರಸ್ತೆ ದಾಟುತ್ತಿದ್ದಾಗ ಮಾರುತಿ 800 ಕಾರಿನಲ್ಲಿ ಬಂದ ಆರೋಪಿಗಳು ಲತೀಶ್‌ನಿಗೆ ಕಾರನ್ನು ಢಿಕ್ಕಿ ಹೊಡೆದಿದ್ದರು. ಅನಂತರ ಕಾರಿನಿಂದ ಇಳಿದು ತಲವಾರಿನಿಂದ ಹಲ್ಲೆ ನಡೆಸಿದ್ದರು. ಅವರನ್ನು ಬಿಡಿಸಲು ಬಂದ ಇಂದ್ರಜಿತ್‌ನ ಮೇಲೆ ಕೂಡ ದಾಳಿ ನಡೆಸಿದ್ದರು. ಇದರಿಂದ ಲತೀಶ್ ಮತ್ತು ಇಂದ್ರಜಿತ್ ಗಂಭೀರವಾಗಿ ಗಾಯಗೊಂಡಿದ್ದರು.
ಮೊಬೈಲ್ ದೋಚಿದ್ದರು
ಆರೋಪಿಗಳು ಲತೀಶ್‌ನ ಮೊಬೈಲ್ ದೋಚಿಕೊಂಡು ಹೋಗಿದ್ದರು. ಕೆಲವು ಮಂದಿ ಆರೋಪಿಗಳು ಕೈಯಿಂದಲೂ ಹಲ್ಲೆ ನಡೆಸಿದ್ದರು. ಈ ಬಗ್ಗೆ ಇನ್‌ಸ್ಪೆಕ್ಟರ್‌ಗಳಾದ ಟಿ.ಡಿ. ನಾಗರಾಜ್ ಮತ್ತು ಭಜಂತ್ರಿ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 148, 307 ಮತ್ತು 149 ಅಡಿ ದಾಖಲಾದ ಆರೋಪಗಳು ಸಾಬೀತಾಗಿರುವುದಾಗಿ ನ್ಯಾಯಾಧೀಶರು ಸೋಮವಾರ ತೀರ್ಪು ನೀಡಿದ್ದಾರೆ.
ಪ್ರಾಸಿಕ್ಯೂಷನ್ ಪರ ಸರಕಾರಿ ಅಭಿಯೋಜಕಿ ಜುಡಿತ್ ಓಲ್ಗ ಮಾರ್ಗರೆಟ್ ಕ್ರಾಸ್ತಾ ಅವರು ವಾದಿಸಿದ್ದರು. ಪ್ರಾಸಿಕ್ಯೂಷನ್ 17 ಮಂದಿ ಸಾಕ್ಷಿದಾರರನ್ನು ವಿಚಾರಣೆ ಮಾಡಿ 29 ದಾಖಲಾತಿಗಳನ್ನು ಗುರುತಿಸಿತ್ತು. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ಮಂಗಳವಾರ ಪ್ರಕಟಿಸಲಿದ್ದಾರೆ.
ಹಳೆದ್ವೇಷವೇ ಕಾರಣ
ಆರೋಪಿಗಳ ಪೈಕಿ ಶಶಿ ಪೂಜಾರಿ ವಿರುದ್ಧ ಕೋಕಾ ಕಾಯಿದೆಯಡಿಯೂ ಪ್ರಕರಣ ದಾಖಲಾಗಿದ್ದು, ಈತ ಮೈಸೂರು ಕಾರಾಗೃಹದಲ್ಲಿದ್ದಾನೆ. ಶಿಕ್ಷೆಗೀಡಾದ ಆರೋಪಿಗಳು ಅಪರಾಧ ಹಿನ್ನೆಲೆಯವರು. ಲತೀಶ್ ನಾಯಕ್ ವಿಕ್ಕಿ ಪೂಜಾರಿಗೆ ಹೊಡೆದಿದ್ದ ಎಂಬ ದ್ವೇಷದಿಂದ ವಿಕ್ಕಿ ಪೂಜಾರಿ ಮತ್ತು ಇತರ ಆರೋಪಿಗಳು ಲತೀಶ್‌ನ ಕೊಲೆಗೆ ಯತ್ನಿಸಿದ್ದರು.
5 ವರ್ಷಗಳ ಅನಂತರ ಇಂದ್ರಜಿತ್ ಕೊಲೆಯಾಗಿದ್ದ
2015ರಲ್ಲಿ ತನ್ನ ಗೆಳೆಯ ಲತೀಶ್ ನಾಯಕ್‌ನ ಮೇಲೆ ನಡೆದ ದಾಳಿಯನ್ನು ತಪ್ಪಿಸಲು ಹೋಗಿದ್ದ ಇಂದ್ರಜಿತ್‌ನ ಕೈಗಳಿಗೆ ಗಂಭೀರವಾದ ಗಾಯಗಳಾಗಿದ್ದವು. ಆದರೆ ಅನಂತರ 2020ರಲ್ಲಿ ಇಂದ್ರಜಿತ್ ಕೊಲೆಯಾಗಿದ್ದ. ಲತೀಶ್ ನಾಯಕ್ ಮೇಲಿನ ದಾಳಿ ಪ್ರಕರಣದಲ್ಲಿ ಇಂದ್ರಜಿತ್ ಕೂಡ ಸಾಕ್ಷಿದಾರನಾಗಿದ್ದ. 2019ರಲ್ಲಿ ಎರಡು ಬಾರಿ ನ್ಯಾಯಾಲಯಕ್ಕೆ ಬಂದು ಸಾಕ್ಷಿ ಹೇಳಿದ್ದ. ಆದರೆ 2020ರ ನ .26ರಂದು ತಾನೇ ಕೊಲೆಯಾಗಿದ್ದ.
ಇಂದ್ರಜಿತ್ ಬೊಕ್ಕಪಟ್ಣದಲ್ಲಿ ಗೆಳೆಯನ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿ ವಾಪಸಾಗುತ್ತಿದ್ದಾಗ ಮೋಕ್ಷಿತ್, ಜಗ್ಗ ಮತ್ತು ಇತರರು ಬೋಳೂರಿನ ಕರ್ನಲ್ ಗಾರ್ಡನ್ ಬಳಿ ತಲವಾರು ಬೀಸಿ ಕೊಲೆ ಮಾಡಿದ್ದರು. ಜಗ್ಗ ಆಲಿಯಾಸ್ ಜಗದೀಶ್‌ನಿಗೆ ಇಂದ್ರಜಿತ್ ಮೇಲೆ ಇದ್ದ ಹಳೆಯ ದ್ವೇಷವೂ ಈ ಕೊಲೆಗೆ ಕಾರಣವಾಗಿತ್ತು. ಅಲ್ಲದೆ ಲತೀಶ್ ನಾಯಕ್ ಪ್ರಕರಣದಲ್ಲಿ ಇಂದ್ರಜಿತ್ ಸಾಕ್ಷಿ ಹೇಳಿದ್ದ ದ್ವೇಷವೂ ಮೋಕ್ಷಿತ್ ಮತ್ತು ಇತರರಿಗೆ ಇತ್ತು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.