ಮಂಗಳೂರು, ಉಡುಪಿಯಲ್ಲಿ ಜೂ. 1ರಿಂದ ಕೋರ್ಟ್‌ ಕಲಾಪ ಆರಂಭ


Team Udayavani, May 28, 2020, 9:49 AM IST

ಜೂ. 1ರಿಂದ ಕೋರ್ಟ್‌ ಕಲಾಪ ಆರಂಭ

ಮಂಗಳೂರು/ಉಡುಪಿ: ಜಿಲ್ಲಾ ನ್ಯಾಯಾಲಯಗಳಲ್ಲಿ ಜೂ.1ರಿಂದ ಕೋರ್ಟ್‌ ಕಲಾಪ ಆರಂಭಿಸಬಹುದೆಂದು ಹೈಕೋರ್ಟ್‌ ತಿಳಿಸಿದ್ದರಿಂದ ಮಂಗಳೂರು ಮತ್ತು ಉಡುಪಿ ಜಿಲ್ಲಾ ನ್ಯಾಯಾಲಯಗಳಲ್ಲಿ ಜೂ. 1ರಿಂದ ಪುನರಾರಂಭ ಮಾಡುವ ಬಗ್ಗೆ ಸಿದ್ಧತೆಗಳು ನಡೆಯುತ್ತಿವೆ.

ಮಂಗಳೂರು ನ್ಯಾಯಾಲಯ ಕಟ್ಟಡ ಸಂಕೀರ್ಣದಲ್ಲಿ 27 ನ್ಯಾಯಾಲಯಗಳಿದ್ದು, ಕೋವಿಡ್ ವೈರಸ್‌ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಈಗಾಗಲೇ ಒಂದು ಬಾರಿ ಸ್ಯಾನಿಟೈಸೇಶನ್‌ ಮಾಡಿಸಲಾಗಿದೆ. ಜೂನ್‌ 1ರ ಮೊದಲು ಅಥವಾ ಆನಂತರ ಪುನಃ ಸ್ಯಾನಿಟೈಸೇಶನ್‌ ಮಾಡಲಾಗುತ್ತಿದೆ.

ಉಡುಪಿ ನ್ಯಾಯಾಲಯ ಸಂಕೀರ್ಣದಲ್ಲಿ ಹತ್ತು ನ್ಯಾಯಾಲಯಗಳಿದ್ದು ಈಗಾಗಲೇ ಒಂದು ಬಾರಿ ಸ್ಯಾನಿಟೈಸೇಶನ್‌ ಮಾಡಲಾಗಿದೆ. ಮುಂದೆ ವಾರಕ್ಕೊಮ್ಮೆ ನ್ಯಾಯಾಲಯ ಆವರಣದೊಳಗೆ ಸ್ಯಾನಿಟೈಸೇಶನ್‌ ಮಾಡಲಾಗುತ್ತದೆ.

ಜೂನ್‌ 1ರಿಂದ ಕಲಾಪ ಆರಂಭವಾಗಲಿದ್ದರೂ, ಮೊದಲ 2 ವಾರಗಳಲ್ಲಿ ವಿಚಾರಣೆಯ ವಿಷಯಗಳನ್ನು ಪಟ್ಟಿ ಮಾಡುವ ಕಲಾಪ ಮಾತ್ರ ನಡೆಯಲಿದೆ. ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಒಳಗೆ ಕಕ್ಷಿದಾರರ ಪ್ರತಿನಿಧಿಗಳಾಗಿ ವಕೀಲರು ಮಾತ್ರ ಹಾಜರಾಗಲು ಅವಕಾಶ. ಸಾರ್ವಜನಿಕರಿಗೆ ಪ್ರವೇಶಾವಕಾಶವಿಲ್ಲ.

2 ವಾರಗಳ ಬಳಿಕ ವಿಚಾರಣೆ ವಿಷಯಗಳ ಜತೆಗೆ ಸಾಕ್ಷ್ಯ ದಾಖಲೀಕರಣದ ಪ್ರಕರಣಗಳನ್ನು ಆದ್ಯತೆ ಮೇಲೆ ಸಂಬಂಧಪಟ್ಟ ವಕೀಲರ ಜತೆ ಮಾತನಾಡಿ ಪಟ್ಟಿ ಮಾಡಲು ಅವಕಾಶವಿದೆ. ಅಧಿಕೃತ ಸಾಕ್ಷಿಗಳನ್ನು ಹೊರತುಪಡಿಸಿ ಉಳಿದಂತೆ ಇತರ ಎಲ್ಲ ಸಾಕ್ಷಿಗಳ ಹೇಳಿಕೆಗಳನ್ನು ವೀಡಿಯೋ ಕಾನ್ಫರೆನ್ಸಿಂಗ್‌ ಮೂಲಕ ನಡೆಸಲಾಗುತ್ತದೆ. ಉಭಯ ಕಕ್ಷಿದಾರರ ವಕೀಲರು ಉಪಸ್ಥಿತರಿದ್ದು, ಸವಾಲು ಮತ್ತು ಪಾಟಿ ಸವಾಲು ಪ್ರಕ್ರಿಯೆಗಳಲ್ಲಿ ಭಾಗವಹಿಸಬಹುದು.ಆದರೆ, ಕೋರ್ಟ್‌ ಹಾಲ್‌ನಲ್ಲಿ ಯಾವುದೇ ಸಂದರ್ಭದಲ್ಲಿಯೂ ವ್ಯಕ್ತಿಗಳ ಉಪಸ್ಥಿತಿ 20 ಕ್ಕಿಂತ ಮೀರಬಾರದು ಎಂಬುದಾಗಿ ಹೈಕೋರ್ಟ್‌ ತಿಳಿಸಿದೆ.

ದಾವೆ ಸಲ್ಲಿಸುವವರು ಪೂರ್ವಾನುಮತಿ ಪಡೆದು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಬರುವುದು ಅಗತ್ಯ. ಸಾರ್ವಜನಿಕರಿಗೆ/ ಕಕ್ಷಿದಾರರಿಗೆ ಪ್ರವೇಶ ನಿಷೇಧಿಸಲಾಗಿದೆ. ಸಾಕ್ಷಿದಾರರು ಸಂಬಂಧ ಪಟ್ಟ ಸಮನ್ಸ್‌ ಹೊಂದಿದ್ದರೆ ಮಾತ್ರ ಪ್ರವೇಶ ನೀಡಲಾಗುತ್ತದೆ.

ಟಾಪ್ ನ್ಯೂಸ್

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

1-ani

Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Udupi: ಜಿಲ್ಲಾಧಿಕಾರಿ ಕಚೇರಿಯಲ್ಲೇ ನೆಟ್‌ವರ್ಕ್‌ ಸಮಸ್ಯೆ!

byndoor

Padubidri: ಮೃತ್ಯುವಿನ ಹೆದ್ದಾರಿಯಾಗುತ್ತಿದೆ ಪಡುಬಿದ್ರಿ ಪರಿಸರ!

9(1

Manipal: ಮಣ್ಣಪಳ್ಳ ಕೆರೆ 155 ಪಕ್ಷಿ ಪ್ರಭೇದಗಳ ತಾಣ!

7

Kundapura: ಗುಲ್ವಾಡಿ ಪರಿಸರದ ಬಾವಿ ನೀರೆಲ್ಲ ಜನವರಿಯಲ್ಲೇ ಉಪ್ಪು

6(1

Karkala: ಬೆನ್ನು ಹತ್ತುತ್ತಿರುವ ಎಂಡೋ ಪೀಡೆ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-wl

ಅಖಿಲ ಭಾರತ ಅಂತರ್‌ ವಿ.ವಿ.ವೇಟ್‌ಲಿಫ್ಟಿಂಗ್‌:ಮಂಗಳೂರು ವಿವಿ ರನ್ನರ್ ಅಪ್‌

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.