ಕೋವಿಡ್ ರುದ್ರ ನರ್ತನ ಭ್ರಷ್ಟಾಚಾರ ತಾಂಡವ
Team Udayavani, Apr 29, 2020, 5:09 PM IST
ಮಣಿಪಾಲ: ಜಾಗತಿಕ ಮಟ್ಟದಲ್ಲಿ ಕೋವಿಡ್ 19 ಎಷ್ಟೋ ಮಾನವೀಯ ಮುಖಗಳನ್ನು ಸಮಾಜಕ್ಕೆ ಪರಿಚಯಿಸಿದೆ. ಇದರ ಜತೆಗೆ ಭ್ರಷ್ಟಾಚಾರದ ಮುಖವನ್ನೂ ಕಳಚುತ್ತಿದೆ.
ಕೊಲಂಬಿಯಾದಲ್ಲೂ ಲಾಕ್‌ಡೌನ್ ಘೋಷಿಸಲಾಗಿದೆ. ಸಂಕಷ್ಟದಲ್ಲಿರುವ ಜನರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಪ್ರಯತ್ನದಲ್ಲಿದ್ದ ಶಾಸಕ ರಿಕಾರ್ಡೊ ಕ್ವಿಂಟೆರೊ ಎಂಬವರು ಕೆಲವು ಅಗತ್ಯ ವಸ್ತುಗಳಿಗೆ ವ್ಯಾಪಾರಿಗಳು ದುಬಾರಿ ಬಿಲ್ ವಿಧಿಸುತ್ತಿರುವುದನ್ನು ಕಂಡು ದಂಗಾದರು. ಪರಿಶೀಲಿಸಲು ಬೇರೆ ಕೆಲವು ಅಂಗಡಿಗಳಿಗೆ ಹೋದಾಗ ಆಶ್ಚರ್ಯ ಕಾದಿತ್ತು. ಅಲ್ಲಿ ಅದೇ ವಸ್ತುಗಳು ಅರ್ಧ ಬೆಲೆಗೆ ಸಿಗುತ್ತಿದ್ದವು.
ಈಗ ಕೊಲಂಬಿಯಾದಲ್ಲಿ ಕೋವಿಡ್ ಸಂಬಂಧಿ ಹಲವು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗುತ್ತಿವೆ.
ಈ ಸಮಯದಲ್ಲಿ ಹೆಚ್ಚಿನ ಕಡೆ ಆರ್ಥಿಕ ಕುಸಿತವಾಗಿದೆ. ಈ ಸಂದರ್ಭವನ್ನೂ ಭ್ರಷ್ಟಾಚಾರಿಗಳು ಬಳಸಿಕೊಳ್ಳುತ್ತಿದ್ದಾರೆ. ಅಗತ್ಯ ವಸ್ತು ಹಾಗೂ ಆಹಾರ ಸಂಬಂಧಿ ವಿಷಯಗಳಲ್ಲಿ ತುರ್ತು ಖರೀದಿ ನೆಪದಲ್ಲಿ ಟೆಂಡರ್ ಕರೆಯದೇ ಖರೀದಿಸುತ್ತಿರುವುದೂ ಭ್ರಷ್ಟಾಚಾರ ಹೆಚ್ಚಲು ಕಾರಣ ಎನ್ನಲಾಗುತ್ತಿದೆ.
ಕೆಲವು ಸಣ್ಣ ದೇಶಗಳು ಕೋವಿಡ್ ಹೊಡೆತ ಮತ್ತು ಆರ್ಥಿಕ ಕುಸಿತದಿಂದ ತೀವ್ರ ಸಂಕಷ್ಟ ಎದುರಿಸುತ್ತಿವೆ. ಇದರೊಂದಿಗೆ ಈಗ ಭ್ರಷ್ಟಾಚಾರದ ಸಮಸ್ಯೆಯನ್ನೂ ಎದುರಿಸಬೇಕಿದೆ.
ಬಾಂಗ್ಲಾದೇಶದಲ್ಲೂ ಭ್ರಷ್ಟಾಚಾರ ಆಪಾದನೆ ಕೇಳಿ ಬಂದಿದೆ. ಅಲ್ಲಿನ ಸರಕಾರವು ಸಂಕಷ್ಟದಲ್ಲಿರುವ ತನ್ನ ಪ್ರಜೆಗಳಿಗೆ ಅಕ್ಕಿ ವಿತರಿಸಲೆಂದು ರೂಪಿಸಿದ ಯೋಜನೆಯಲ್ಲಿ ಸುಮಾರು 6 ಲಕ್ಷ ಡಾಲರ್ ಭ್ರಷ್ಟರ ಪಾಲಾದವು. ಅಧಿಕಾರಿಗಳು ಹಾಗೂ ಇತರ ಕೆಲವರು ಸೇರಿ ಅಕ್ಕಿ ಕದ್ದ ಪ್ರಕರಣಗಳೂ ಬೆಳಕಿಗೆ ಬಂದವು. ಬಳಿಕ ಬಾಂಗ್ಲಾ ಸರಕಾರ ಆ ಯೋಜನೆಯನ್ನೇ ಮರುಪರಿಶೀಲಿಸಲು ನಿರ್ಧರಿಸಿತು.
ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ಹಲವು ವ್ಯವಹಾರಗಳು ಶಂಕಾಸ್ಪದವಾಗಿದ್ದು, ಅವುಗಳಲ್ಲಿ ಭ್ರಷ್ಟಾಚಾರದ ವಾಸನೆ ಕಂಡು ಬಂದಿದೆ. ಒಂದರಲ್ಲಿ ಕೇವಲ 1, 500 ಡಾಲರ್ ನಿರ್ವಹಣಾ ಬಂಡವಾಳ ಹೊಂದಿರುವ ಕಂಪೆನಿಯಿಮದ ತಲಾ 40 ಡಾಲರ್‌ಗೆ ಒಂದರಂತೆ 15,000 ಮಾಸ್ಕ್ಗಳನ್ನು ಖರೀದಿಸಲಾಗಿದೆ. ಇನ್ನೊಂದರಲ್ಲಿ ಕೋವಿಡ್ 19 ರೋಗಿಗಳನ್ನು ಹೊಟೇಲಲ್ಲಿ ಇರಿಸಲು ಲಾಭದಾಯಕ ಒಪ್ಪಂದ ಮಾಡಿಕೊಂಡ ಆರೋಪ ಕೇಳಿಬಂದಿದೆ. ಇವೆಲ್ಲ ಈ ಸಂಕಷ್ಟ ಸಂದರ್ಭದಲ್ಲೂ ಬೆಳಕಿಗೆ ಬಂದ ಭ್ರಷ್ಟಾಚಾರದ ಕೆಲವು ಮುಖಗಳಷ್ಟೇ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕೋವಿಡ್ ಸಂದರ್ಭದಲ್ಲಿ ಕೆಲವು ಶಂಕಾಸ್ಪದ ಒಪ್ಪಂದಗಳನ್ನು ಹಲವು ರಾಷ್ಟ್ರಗಳು ಮಾಡಿಕೊಂಡಿದ್ದು, ಅವೆಲ್ಲದಕ್ಕೂ ಭ್ರಷ್ಟತೆಯ ನೆರಳಿದೆ. ಕೆಲವು ರಾಷ್ಟ್ರಗಳು ಇದನ್ನು ಅನಿವಾರ್ಯವಾಗಿ ಮಾಡಿಕೊಂಡಿದ್ದರೆ, ಇನ್ನು ಕೆಲವು ರಾಷ್ಟ್ರಗಳು ಉದ್ದೇಶಪೂರ್ವಕವಾಗಿ ಮಾಡಿಕೊಂಡಿವೆ ಎಂಬ ಆಪಾದನೆಗೂ ಗುರಿಯಾಗಿವೆ. ಇದು ಕೇವಲ ಸಣ್ಣ ರಾಷ್ಟ್ರಗಳಿಗೆ ಮಾತ್ರ ಮೀಸಲಾದ ವಿಷಯವಲ್ಲ. ಹಲವು ಪ್ರಮುಖ ಮತ್ತು ಆರ್ಥಿಕ ಸಶಕ್ತ ದೇಶಗಳು ಈ ಪಟ್ಟಿಯಲ್ಲಿವೆ ಎನ್ನುತ್ತಾರೆ ಜಾಗತಿಕ ವ್ಯವಹಾರ ತಜ್ಞರು.
ಆರೋಗ್ಯ ಕ್ಷೇತ್ರಗಳಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಮತ್ತು ಔಷಧ ಖರೀದಿಯಲ್ಲಿ ಸಾಮಾನ್ಯವಾಗಿ ಸಾಮಾನ್ಯವಾಗಿ ಭ್ರಷ್ಟಾಚಾರ ಆರೋಪ ಕೇಳಿಬರುತ್ತದೆ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಈ ಅವ್ಯವಹಾರ ಅವ್ಯಾಹತವಾಗಿ ನಡೆಯುತ್ತಿದೆ. ಅದು ಯಾವ ರಾಷ್ಟ್ರವನ್ನೂ ಬಿಟ್ಟಿಲ್ಲ. ಅದರಲ್ಲೂ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಇಂಥ ವ್ಯವಹಾರಗಳು ಬೆಳಕಿಗೆ ಬರುವುದೇ ಕಡಿಮೆ. ಒಂದು ಮಾಹಿತಿ ಪ್ರಕಾರ ಪ್ರತಿ ವರ್ಷ ಜಾಗತಿಕವಾಗಿ ಆರೋಗ್ಯ ಕ್ಷೇತ್ರದಲ್ಲಿ 500 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಅವ್ಯವಹಾರ ನಡೆಯುತ್ತದೆಂದು ಅಂದಾಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.