ಕೋವಿಡ್‌-19: ಸ್ಥೂಲಕಾಯದವರೇ, ಎಚ್ಚರ ಅವಶ್ಯ !

covid 19

Team Udayavani, May 1, 2020, 2:24 PM IST

ಕೋವಿಡ್‌-19: ಸ್ಥೂಲಕಾಯದವರೇ, ಎಚ್ಚರ ಅವಶ್ಯ !

ಮಣಿಪಾಲ: ಕೋವಿಡ್‌-19 ಸೋಂಕಿಗೆ ತುತ್ತಾಗಿ ಗುಣಮುಖರಾಗುತ್ತಿರುವವರ ಪ್ರಮಾಣ ಜಾಗತಿಕವಾಗಿ ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಆದರೆ, ಲಸಿಕೆ ಇಲ್ಲದ ಈ ಕಾಯಿಲೆಗೆ ಬಲಿಯಾಗುತ್ತಿರುವವರ ವಿವರಗಳನ್ನು ಗಮನಿಸಿದಾಗ ವಿಚಿತ್ರ ಎನಿಸತೊಡಗಿದೆ. ಇತ್ತೀಚಿನ ವರದಿಯೊಂದರ ಪ್ರಕಾರ ಬೊಜ್ಜು ಅಥವಾ ಸ್ಥೂಲಕಾಯದವರಿಗೂ ಇದು ಸಂಕಷ್ಟ ತರಲಿದೆ.

ಸ್ಥೂಲಕಾಯಿಗಳಿಗೂ ಅಪಾಯ
ಕೋವಿಡ್‌-19 ಕಾಣಿಸಿಕೊಂಡ ಪ್ರಾರಂಭದ ಹಂತದಲ್ಲಿ ಕೆಲ ಅಧ್ಯಯನಗಳು ವೃದ್ಧಾಪ್ಯ ಮತ್ತು ದೀರ್ಘ‌ಕಾಲದ ಆರೋಗ್ಯ ಸಮಸ್ಯೆ ಇರುವವರಿಗೆ ಸಂಕಷ್ಟ ಎಂದಿತ್ತು. ಅದಾದ ಬಳಿಕ ಡಯಾಬಿಟೀಸ್‌, ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದವರಿಗೆ ಕಷ್ಟ ಎನ್ನಲಾಗಿತ್ತು. ಆದರೆ ಇತ್ತೀಚಿನ ಹೊಸ ಸಂಶೋ ಧನೆಯ ಪ್ರಕಾರ ಯಾವುದೇ ಇತರೆ ಕಾಯಿಲೆಗಳಿಲ್ಲದೇ ಕೇವಲ ಅಧಿಕ ಮಟ್ಟದಲ್ಲಿ ಬೊಜ್ಜು ಹೊಂದಿದವರಿಗೂ ಸೋಂಕು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದಿದೆ. ಇಳಿವಯಸ್ಸಿನ ಸ್ಥೂಲಕಾಯದವರೂ ಸೋಂಕಿನಿಂದ ತೀವ್ರಮಟ್ಟದ ಸಮಸ್ಯೆ ಎದುರಿಸಬೇಕಾದೀತು ಎಂದು ಎಚ್ಚರಿಸಿದೆ.

ಸೋಂಕಿನಿಂದ ಮೃತಪಟ್ಟವರಲ್ಲಿ ಹೆಚ್ಚಿನವರು ಇಳಿವಯಸ್ಸಿನವರು ಎಂಬ ವಿಷಯದ ಮೇಲೆ ಬೆಳಕು ಚೆಲ್ಲಿರುವ ಸಂಶೋಧಕರು ಹೃದಯ, ಶ್ವಾಸಕೋಶ ಹಾಗೂ ಮಿದುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸೋಂಕು ಎದುರಿಸಲು ಕಷ್ಟವಾಗುತ್ತಿದೆ. ಆದರೆ ಇನ್ನೊಂದು ಅಂಶವನ್ನು ಪರಿಗಣಿಸುವುದಾದರೆ ಮೃತರಲ್ಲಿ ಹೆಚ್ಚಿನವರು ಅದರಲ್ಲೂ ಮುಕ್ಕಾಲು ಪಾಲು ಸ್ಥೂಲಕಾಯದವರೇ ಎಂದಿದೆ ಅಂಕಿ ಆಂಶಗಳು. ಹಾಗಾಗಿ ಸೋಂಕಿತರ ಸಾವಿಗೆ ಬೊಜ್ಜು ಎರಡನೇ ಕಾರಣವಾಗಿದೆ ಎನ್ನುತ್ತದೆ ಸಂಶೋಧನೆ.

ಚೀನದ ಅಧ್ಯಯನದ ಪ್ರಕಾರ ಸೋಂಕಿಗೆ ಬಲಿಯಾದ ಒಟ್ಟು ಜನಸಂಖ್ಯೆಯ ಪೈಕಿ ಅಧಿಕ ತೂಕ ಮತ್ತು ಸ್ಥೂಲ ಕಾಯ ಉಳ್ಳವರ ಪ್ರಮಾಣ ಶೇ.5 ರಷ್ಟು ಜಾಸ್ತಿ ಇದ್ದು, ಬದುಕುಳಿದವರ ಪ್ರಮಾಣಕ್ಕಿಂತ (ಶೇ.19) ಅಸು ನೀಗಿದವರ ಪ್ರಮಾಣವೇ(ಶೇ.88) ಜಾಸ್ತಿ ಇದೆ ಎಂದಿದೆ.

ಕೋವಿಡ್‌-19ನಿಂದ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾದ ಸುಮಾರು 124 ರೋಗಿಗಳಲ್ಲಿ ಅರ್ಧದಷ್ಟು ಜನರು ಅಧಿಕ ಬೊಜ್ಜನ್ನು ಹೊಂದಿದದರು ಎಂದಿದ್ದಾರೆ ಫ್ರಾನ್ಸ್‌ನ ಸಂಶೋಧಕರು.

ಸೋಂಕಿನಿಂದ ತೀವ್ರ ನಿಗಾ ಚಿಕಿತ್ಸೆಯಲ್ಲಿ ದಾಖಲಾದ 6,720 ರೋಗಿಗಳಲ್ಲಿ ಮುಕ್ಕಾಲು ಭಾಗದಷ್ಟು ಅಂದರೆ ಶೇ.75ರಷ್ಟು ಅಧಿಕ ತೂಕ ಅಥವಾ ಬೊಜ್ಜನ್ನು ಹೊಂದಿದ್ದಾರೆನ್ನಲಾಗಿದೆ.

ನ್ಯೂಯಾರ್ಕ್‌​ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಸಾವಿಗೆ ಇಳಿವಯಸ್ಸು ಮುಖ್ಯ ಕಾರಣವಾಗಿದ್ದರೆ, ಎರಡನೆಯದು ಬೊಜ್ಜು ಎಂದು ಉಲ್ಲೇಖೀಸಿದೆ. ಬ್ರಿಟನ್ನಿನ ಮೂರರಲ್ಲಿ ಎರಡು ಪಾಲು ಜನರು ಸ್ಥೂಲಕಾಯದವರಾಗಿದ್ದರು.

ಕೋವಿಡ್‌ಗೂ ಸ್ಥೂಲಕಾಯಕ್ಕೂ ಏನು ಸಂಬಂಧ ಎಂದು ಗಮನಿಸುವುದಾದರೆ, ಬೊಜ್ಜು ಅಥವಾ ಅತಿಯಾದ ದೇಹಭಾರ ಹೊಂದಿರುವವರಲ್ಲಿ ದೇಹದ ಪ್ರಮುಖ ಅಂಗಗಳಿಗೆ ಆಮ್ಲಜನಕ ಪೂರೈಕೆ ಕಷ್ಟಸಾಧ್ಯವಾಗುತ್ತದೆ. ಏಕೆಂದರೆ ಬೊಜ್ಜಿನಿಂದಾಗಿ ಡಯಾಫÅಮ್‌​ ಹಾಗೂ ಶ್ವಾಸಕೋಶಗಳ ಕಾರ್ಯ ಕುಗ್ಗುತ್ತದೆ. ಇದರಿಂದ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಇದಲ್ಲದೇ, ಶ್ವಾಸಕೋಶದಲ್ಲಿ ಸೋಂಕು ಅನಿಯಂತ್ರಿತವಾಗಿ ಹಬ್ಬಿ ನ್ಯೂಮೋನಿಯಾಗೆ ಕಾರಣವಾಗುತ್ತದೆ ಎನ್ನುತ್ತಾರೆ ಸಂಶೋಧಕರು.

ಟಾಪ್ ನ್ಯೂಸ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.