ಬಾಲಿ ಕೋವಿಡ್ 19ರಿಂದ ತಪ್ಪಿಸಿಕೊಂಡಿದ್ದೇ ಸೋಜಿಗ
Team Udayavani, May 4, 2020, 2:31 PM IST
ಮಣಿಪಾಲ: ಇಡೀ ವಿಶ್ವವನ್ನೇ ಕೋವಿಡ್-19 ಪೀಡಿಸುತ್ತಿದೆ ಎಂಬ ವರದಿಗಳು ಪ್ರತಿನಿತ್ಯ ಹೊರ ಬೀಳುತ್ತಲೇ ಇದೆ. ಕೆಲವೆಡೆ ಸೋಂಕು ನೆರಳು ಬೀಳುತ್ತಿದ್ದಂತೆಯೇ ಹತೋಟಿಗೆ ತರಲಾಗಿದೆ. ಅಂತಹ ಪ್ರದೇಶಗಳ ಪೈಕಿ ಇಂಡೋನೆಷ್ಯಾದ ಲಕ್ಷಗಟ್ಟಲೇ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುವ ಬಾಲಿ ಗುರುತಿಸಿಕೊಂಡಿದ್ದು, ಸೋಂಕು ನಿಯಂತ್ರಣಗೊಂಡಿದೆ. ಇಲ್ಲಿನ ದೈನಂದಿನ ಚಟುವಟಿಕೆಗಳು ಸಹಜ ಸ್ಥಿತಿಯಲ್ಲಿ ನಡೆಯುತ್ತಿವೆ ಎಂದು ಅಲ್‌ಜಜೀರಾ ವರದಿ ಮಾಡಿದೆ.
ಸೋಂಕು ನಿಯಂತ್ರಣ ಸಲುವಾಗಿ ಕಳೆದ ಮಾರ್ಚ್ 21ರಂದೇ ದ್ವೀಪದಲ್ಲಿ ಕಾರ್ಯಾಚರಿಸುತ್ತಿರುವ ರೆಸಾರ್ಟ್‌ಗಳೆಲ್ಲ ಸ್ಥಗಿತಗೊಂಡಿದ್ದವು. ಆದರೆ ಇಲ್ಲಿಯವರೆಗೂ ಕೇವಲ 235 ಸೋಂಕು ಪ್ರಕರಣಗಳು ದಾಖಲಾಗಿದ್ದು, ಈಗಾಗಲೇ 121 ಜನರ ಚೇತರಿಕೊಂಡು, 4 ಜನ ಮಾತ್ರ ಮೃತಪಟ್ಟಿದ್ದಾರೆ. ಲಕ್ಷಾಂತರ ಪ್ರವಾಸಿಗರನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿರುವ ಅಂತಾರಾಷ್ಟ್ರೀಯ ಪ್ರವಾಸಿ ಸ್ಥಳ ಹೇಗೆ ಸೋಂಕಿನಿಂದ ಪಾರಾಯಿತು? ಇದರ ಹಿಂದಿನ ಮರ್ಮವೇನು ಎಂಬಿತ್ಯಾದಿ ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿವೆ. ಈ ಬೆಳವಣಿಗೆ ಕಂಡ ಇಂಡೋನೇಷ್ಯಾದ ವೈದ್ಯಾಧಿಕಾರಿಗಳು ದೇಶದ ಮುಂದಿನ ಹಾಟ್‌ಸ್ಪಾಟ್ ಆಗಿ ಬಾಲಿ ಗುರುತಿಸಿಕೊಂಡೀತು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಬಾಲಿಯ ಆರೋಗ್ಯಕರ ಬೆಳವಣಿಗೆ ಕುರಿತು ವ್ಯಾಪಾಕವಾಗಿ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ದೇಶ ಸೋಂಕಿನ ವಿರುದ್ಧ ಹೋರಾಡಲು ರಹಸ್ಯವಾದ ಮಾರ್ಗ ಕಂಡುಕೊಂಡಿದೆ ಎಂದು ಹೇಳುತ್ತಿದ್ದು, ಅವರು ಸೇವಿಸುವ ಆಹಾರ ಪದಾರ್ಥಗಳಲ್ಲಿ ಔಷಧಿಯುಕ್ತ ಗಿಡಮೂಲಿಕೆಗಳ ಸತ್ವವನ್ನು ಒಳಗೊಂಡಿದೆ. ಆ ಮೂಲಕ ಅವರ ಆಹಾರ ಪದ್ಧತಿ ಶೈಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತಿದೆ.
ತಜ್ಞರ ಕಳವಳ
ಕೋವಿಡ್-19ನಿಂದಾಗಿ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವ ಇಂಡೋನೇಷ್ಯಾ ಕೂಡ ಒಂದು. ಆದರೆ ಬಾಲಿಯಲ್ಲಿ ಸೋಂಕು ಪ್ರಕರಣ ನಿರೀಕ್ಷೆಗಿಂತ ಕಡಿಮೆ ಮಟ್ಟದಲ್ಲಿದೆ. ಸದ್ಯ ದೊರಕುತ್ತಿರುವ ಅಂಶಗಳು ವಾಸ್ತವಿಕತೆಯಿಂದ ದೂರವಿದ್ದು, ನಿಗದಿತ ಅಂಕಿ-ಅಂಶ ಸಿಗುತ್ತಿಲ್ಲ . ಟ್ಯಾಲಿಂಗ್ ಸೈಟ್ ವರ್ಲ್ಡೋಮೀಟರ್ ಪ್ರಕಾರ, ಸುಮಾರು 40 ಲಕ್ಷ ಜನರಿರುವ ಬಾಲಿಯಲ್ಲಿ, ಇದುವರೆಗೆ ಕೇವಲ 1,300 ಪರೀಕ್ಷೆಗಳನ್ನು ಮಾತ್ರ ನಡೆಸಲಾಗಿದ್ದು, ಅದರಲ್ಲಿ ಕೇವಲ 374 ಮಾತ್ರ ಪ್ರಕರಣಗಳು ದಾಖಲಾಗಿದೆ.
ಆದರೆ ಇತರೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರತಿ ಮಿಲಿಯನ್‌ಗೆ 20,241 ಮತ್ತು ಸಿಂಗಾಪುರದಲ್ಲಿ 24,600ರಷ್ಟು ಪ್ರಕರಣಗಳು ವರದಿಯಾಗಿವೆ. ಈ ಬೆಳವಣಿಗೆ ಸಂತೋಷವನ್ನು ನೀಡುವ ಬದಲು ಕ್ಷಣ ಕ್ಷಣಕ್ಕೂ ಭಯವನ್ನು ಹೆಚ್ಚಿಸುತ್ತಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಅಂತರ್ಮುಖೀಯಾಗಿದೆಯೇ?
ಯಾವುದೇ ನಿಬಂಧನೆಗಳಿಲ್ಲದೇ ಸುರಕ್ಷಾ ಕ್ರಮಗಳ ಪಾಲನೆ ಮಾಡದೇ ಜೀವನ ನಡೆಸುತ್ತಿದ್ದಾರೆ. ಆದರೂ ಹೇಗೆ ಸೋಂಕು ನಿಯಂತ್ರಣಗೊಂಡಿತು ಎಂಬುದೇ ಸದ್ಯದ ಪ್ರಶ್ನೆಯಾಗಿದ್ದು, ಶಂಕಿತರ ಪರೀಕ್ಷಾ ಮಾದರಿಗಳ ಸಂಗ್ರಹಿಸುವಲ್ಲಿ ದೇಶ ಹಿಂದೆ ಬಿದ್ದಿರಬಹುದು ಎಂದು ಕೆಲವು
ವೈದ್ಯರು ಗುಮಾನಿ ವ್ಯಕ್ತಪಡಿಸುತ್ತಿದ್ದಾರೆ. ಪರೀಕ್ಷೆ ನಡೆಯದೇ ಇರುವುದರಿಂದ ಇನ್ನೂ ಬಹಿರಂಗ ಆಗದೆ ಇರಬಹುದು. ಮುಂದೆ ಸ್ಫೋಟಗೊಳ್ಳಲೂ ಬಹುದು. ಹೆಚ್ಚು ತಾಪಮಾನ ಇರುತ್ತದೆಯೋ ಅಲ್ಲಿ ಸೋಂಕು ಪ್ರಸರಣ ಮಟ್ಟ ಕಡಿಮೆ ಇರುತ್ತದೆ ಎಂಬ ಸಿದ್ಧಾಂತವನ್ನು ಕೆಲವರು ಉಲ್ಲೇಖ ಮಾಡಿದ್ದು, ಸದ್ಯ ಬಾಲಿಯಲ್ಲಿ ತಾಪಮಾನ ಹೆಚ್ಚಿದ್ದು, ನಗರಕ್ಕೆ ಇದು
ವರದಾನವಾಗಿರಬಹುದೆಂದು ಹೇಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀಲಿ ಚಿತ್ರ ತಾರೆಗೆ ಲಂಚ: ಅಧಿಕಾರಕ್ಕೆ ಮೊದಲೇ ಟ್ರಂಪ್ ಕೇಸಿನ ತೀರ್ಪು
House Of Representatives: ಈ ಬಾರಿ ಅಮೆರಿಕ ಸಂಸತ್ತಲ್ಲಿ ಗರಿಷ್ಠ ಸಂಖ್ಯೆ ಹಿಂದುಗಳು!
HMPV; ಚಳಿಗಾಲದಲ್ಲಿ ಸೋಂಕು ಸಾಮಾನ್ಯ: ಗಾಬರಿ ಬೇಡ ಎಂದ ಚೀನ
Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
PM Modi Gifts: 2023ರಲ್ಲಿ ಬೈಡನ್ ಪತ್ನಿ ಜಿಲ್ ಅವರಿಗೆ ಮೋದಿ 17 ಲಕ್ಷದ ಉಡುಗೊರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.