ಕೋವಿಡ್ -19ನಿಂದ ಆರ್ಥಿಕ ಸಂಕಷ್ಟ ಎದುರಾದರು ಇವರಿಗಿಲ್ಲ ನಷ್ಟ !
Team Udayavani, May 4, 2020, 5:49 PM IST
ಮಣಿಪಾಲ: ಈಗಿರುವ ಕೋವಿಡ್-19 ವೈರಸ್ ಬಿಕ್ಕಟ್ಟಿನಿಂದ ಇಡೀ ಜಗತ್ತು ಆರ್ಥಿಕ ಸಂಕಷ್ಟದಲ್ಲಿದೆ. ಎಲ್ಲ ವಲಯಗಳೂ ಆರ್ಥಿಕ ಕುಸಿತದ ಭೀತಿಯಲ್ಲಿದ್ದು, ಕೋಟ್ಯಂತರ ಉದ್ಯೋ ಗಗಳು ನಷ್ಟವಾಗಿವೆ. ಅಮೆರಿಕದಲ್ಲಿ ನಿರುದ್ಯೋಗದ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಇಂಥದ್ದರಲ್ಲಿ ಜಗತ್ತಿನ ಮೂರು ಕಂಪೆನಿಗಳು ಗಳಿಕೆಯಲ್ಲಿ ತಲ್ಲೀನವಾಗಿವೆ.
ಅಮೆರಿಕದ ಮೈಕ್ರೋಸಾಫ್ಟ್, ಆ್ಯಪಲ್ ಮತ್ತು ಅಮೆಜಾನ್ ಕಂಪೆನಿಗಳಿಗೆ ಲಾಕ್‌ಡೌನ್‌ನಿಂದ ಆಗಿರುವುದು ಲಾಭವೇ ಹೊರತು ನಷ್ಟವಲ್ಲ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು 100,000 ಗೋದಾಮಿನ ಕಾರ್ಮಿಕರ (ಪ್ಯಾಕಿಂಗ್ ಮತ್ತು ಮಾನಿಟರಿಂಗ್)ನ್ನು ನೇಮಿಸಿಕೊಳ್ಳಲು ಅಮೆಜಾನ್ ನಿರ್ಧರಿಸಿದೆ. ಫೇಸ್‌ಬುಕ್ ನಲ್ಲೂ ಆಶಾದಾಯಕ ಬದಲಾವಣೆಗಳು ಕಂಡುಬರುತ್ತಿದ್ದು ವೀಡಿಯೊ ಕರೆ ಮತ್ತು ಸಂದೇಶ ರವಾನೆಗೆ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಸ್ಫೋಟಗೊಂಡಿದೆ ಎಂದಿದ್ದಾರೆ ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಜುಕರರ್‌ಬರ್ಗ್. ಇವೆಲ್ಲದರ ಮಧ್ಯೆ ಆನ್‌ಲೈನ್ ಸಹಯೋಗಕ್ಕಾಗಿ ತನ್ನ ಸಾಫ್ಟ್ವೇರ್ ಬಳಸುವ ಸಂಖ್ಯೆಗಳು ಒಂದೇ ವಾರದಲ್ಲಿ ಸುಮಾರು ಶೇ. 40ರಷ್ಟು ಏರಿಕೆಯಾಗಿದೆ ಎಂದಿದೆ ಮೈಕ್ರೋಸಾಫ್ಟ್. ಈ ಕುರಿತು ದಿ ನ್ಯೂಯಾರ್ಕ್ ಟೈಮ್ಸ್ ವಿಶ್ಲೇಷಣಾ ವರದಿ ಪ್ರಕಟಿಸಿದೆ.
ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಲ ರಾಷ್ಟ್ರಗಳೂ ಜನರನ್ನು ಮನೆಯಲ್ಲೇ ಇರಿಸಿವೆ. ಇದರ ಪರಿಣಾಮವಾಗಿ ಜನರು ಮನೆಯಿಂದ ಕೆಲಸ ಮಾಡತೊಡಗಿದ್ದಾರೆ. ಇದು ತಂತ್ರಜ್ಞಾನ ಕಂಪನಿಗಳಿಗೆ ಅನುಕೂಲ ಕಲ್ಪಿಸಿದೆ. ಆನ್‌ಲೈನ್ ಉದ್ಯಮಗಳ ಮೇಲೆ ನಂಬಿಕೆ ಇಡದ ಜನರೂ ಈಗ ಅತ್ತ ಧಾವಿಸುತ್ತಿದ್ದಾರೆ. ಮನರಂಜನೆಯ ಕ್ಷೇತ್ರವನ್ನು ನೋಡುವುದಾದರೆ ನೆಟ್‌ಫ್ಲಿಕ್ಸ್‌ನಂತಹ ಒಟಿಟಿ ಸೇವೆಗಳು ಇತ್ತೀಚಿನ ವರ್ಷಗಳಲ್ಲಿ ಬಾಕ್ಸ್ ಆಫೀಸನ್ನು ತೀವ್ರ ನಷ್ಟದ ಹಾದಿಗೆ ಸಿಲುಕಿಸಿದ್ದವು. ಇದೀಗ ಚಿತ್ರಮಂದಿರಗಳು ಮುಚ್ಚಿದ ಪರಿಣಾಮ ನೆಟ್‌ಫ್ಲಿಕ್ಸ್ ಮತ್ತು ಯೂಟ್ಯೂಬ್ ಗೆ ಹೊಸ ಪ್ರೇಕ್ಷಕರ ವರ್ಗ ಗಳಿಸಲು ಸಾಧ್ಯವಾಗಿದೆ.
ಮುಂದಿನ ದಿನಗಳಲ್ಲಿ ಮಹತ್ವದ ಪಾತ್ರ
ಮೈಕ್ರೋಸಾಫ್ಟ್, ಆ್ಯಪಲ್ ಮತ್ತು ಅಮೆಜಾನ್‌ನಂತಹ ದೈತ್ಯ ಕಂಪೆನಿಗಳು ಅಮೆರಿಕದ ಆರ್ಥಿಕತೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಲಿವೆ. ಅಮೆರಿಕದಲ್ಲಿ ಈಗ ಭಾರೀ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗಿದ್ದು, ಅವುಗಳಿಗೆ ಶಕ್ತಿ ತುಂಬಲು ಈ ಸಂಸ್ಥೆಗಳು ಪ್ರಯತ್ನಿಸಬಹುದು. ಈಗಾಗಲೇ ಅಮೆಜಾನ್‌ಆನ್‌ಲೈನ್ ಮಾರುಕಟ್ಟೆ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳನ್ನು ತನ್ನ ಸಿಬಂದಿಗೆ ಮನೆಯಿಂದಲೇ ನಡೆಸುವಂತೆ ಹೇಳಿದೆ. ಆ್ಯಪಲ್ ಮೊಬೈಲ್ ಸಾಧನಗಳಿಗೆ ಮಾರ್ಕೆಟಿಂಗ್ ಕುಸಿತವಾಗಿದೆ ನಿಜ. ಆ್ಯಪಲ್ ಸ್ಟೋರ್‌ಗಳು ತೆರೆಯದೇ ಇದ್ದ ಕಾರಣ ಈ ವರ್ಷ ಐಫೋನ್ ಮಾರಾಟ ನಿಧಾನವಾಗಲಿದೆ. ವಿಶ್ಲೇಷಕರ ಪ್ರಕಾರ ಮುಂದಿನ ವರ್ಷ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆಯಂತೆ.
ಮೈಕ್ರೋಸಾಫ್ಟ್ ಕಾರ್ಪೊರೇಟ್ ಸಾಫ್ಟ್ವೇರ್‌ಗಳು, ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳು ಮತ್ತು ವಿಡಿಯೋ ಗೇಮಿಂಗ್ ಮೊದಲಾದವುಗಳಿಗೆ ಬೇಡಿಕೆ ಕುಸಿಯದು. ಮುಂದಿನ ದಿನಗಳಲ್ಲಿ ಎಲ್ಲವೂ ಮನೆಯಿಂದ ಕೆಲಸ ಮಾಡುವ ವಾತಾವರಣವನ್ನು ಬೆಳೆಯಬಹುದು ಅಥವಾ ಕೆಲವು ಸೇವಾ ವಲಯಗಳಲ್ಲಿ ಮನೆಯಿಂದ ಕೆಲಸ ಮಾಡುವುದೂ ಒಂದು ಪದ್ಧತಿಯಾಗಿಬ ಬಿಡುವ ಸಂಭವವೂ ಇದೆ. ಹಾಗಾದರೆ ಟೆಕ್ ಕಂಪೆನಿಗಳಿಗೆ ಒಳ್ಳೆಯ ಲಾಭ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
MUST WATCH
ಹೊಸ ಸೇರ್ಪಡೆ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.