ಇದು ಶ್ರೀಮಂತ ದೇಶದ ಬಡವರ ಪಾಡು
Team Udayavani, May 11, 2020, 2:57 PM IST
ಮಣಿಪಾಲ: ಜಿನೇವಾದಲ್ಲಿ ಕೋವಿಡ್ ಸಾಂಕ್ರಾಮಿಕ ವೈರಸ್ ತುಂಬಾ ಸಮಸ್ಯೆಯನ್ನುಂಟು ಮಾಡಿದೆ. ಹೆಚ್ಚು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಸ್ವಿಜರ್‌ಲ್ಯಾಂಡ್‌ನ ಬಡವವರ ಮೇಲೆ ಕೋವಿಡ್ ಉಂಟು ಮಾಡಿರುವ ಪರಿಣಾಮ ತುಸು ಜೋರಾಗಿಯೇ ಇದೆ. ಬೇರೆ ದೇಶದಿಂದ ಹೋಗಿ ಅಲ್ಲಿ ನೆಲೆಸಿರುವ ವಲಸಿಗರು ಮತ್ತು ಬಡವರು ಕೆಲಸದಿಂದ ವಂಚಿತರಾಗಿ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಪ್ರತಿನಿತ್ಯ ಉದ್ದದ ಸಾಲುಗಳಲ್ಲಿ ನಿಂತು ಜನರು ಉಚಿತ ಆಹಾರ ಸ್ವೀಕರಿಸುವ ದೃಶ್ಯ ದೇಶದ ಎಲ್ಲೆಡೆ ಕಂಡು ಬರುತ್ತಿದೆ. ಜಿನೇವಾದಲ್ಲಿ ಪ್ರತಿದಿನ ಬೆಳಗ್ಗೆ 1,500 ಆಹಾರದ ಪ್ಯಾಕೇಟ್‌ಗಳನ್ನು ಅಲ್ಲಿನ ಸ್ವಯಂ ಸೇವಕರು ಮುಂಜಾನೆ 5 ಗಂಟೆಯ ಹೊತ್ತಿಗೆ ವಿತರಿಸಲು ಆಗಮಿಸುತ್ತಾರೆ. ಇದಕ್ಕಾಗಿ ಜನರು ಕಿ.ಮೀ. ಉದ್ದದ ಸಾಲುಗಳಲ್ಲಿ ನಿಂತು ಕಾಯುತ್ತಿರುತ್ತಾರೆ.
ಲಾಕ್‌ಡೌನ್ ಆಗಿರುವ ಕಾರಣ ಹೊರ ದೇಶಗಳಿಂದ ಉದ್ಯೋಗದ ನಿಮಿತ್ತ ತೆರಳಿದ್ದ ಜನರು ಕೆಲಸವಿಲ್ಲದೆ ಚಿಂತಿತರಾಗಿದ್ದಾರೆ. ಇವರ ಹಸಿವನ್ನು ನೀಗಿಸಲು ಸ್ಥಳೀಯ ಸರಕಾರ ಆಹಾರದ ವ್ಯವಸ್ಥೆಯನ್ನು ಮಾಡಿದೆ. 2018ರ ಅಂಕಿಅಂಶದ ಪ್ರಕಾರ ಸುಮಾರು 8.6 ಮಿಲಿಯನ್ (80.60 ಲಕ್ಷ) ಜನಸಂಖ್ಯೆಯಿರುವ ಸ್ವಿಜರ್‌ಲ್ಯಾಂಡ್‌ನಲ್ಲಿ 6.60 ದಶಲಕ್ಷ ಜನರು ಬಡವರಾಗಿದ್ದಾರೆ. ಅಲ್ಲಿನ ಸಾಮಾಜಿಕ ವ್ಯವಸ್ಥೆಯಲ್ಲಿ ವಿಶೇಷವಾಗಿ ಒಂಟಿ ಪೋಷಕರು ಮತ್ತು ಕಡಿಮೆ ಶಿಕ್ಷಣ ಹೊಂದಿರುವವರು ಒಮ್ಮೆ ಉದ್ಯೋಗ ಕಳೆದುಕೊಂಡ ಬಳಿಕ ಮರಳಿ ಕೆಲಸ ಸಂಪಾದಿಸಿಕೊಳ್ಳುವುದು ಸುಲಭವಲ್ಲ. ಈ ಕಾರಣಕ್ಕೆ ಮುಂಬರುವ ದಿನಗಳಲ್ಲಿ ಅವರ ಸಂಕಷ್ಟ ದ್ವಿಗುಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಇಲ್ಲಿನ 1.1 ದಶ ಲಕ್ಷಕ್ಕಿಂತಲೂ ಹೆಚ್ಚಿನ ಜನರು ಬಡತನಕ್ಕೆ ತುತ್ತಾಗುವ ಭೀತಿ ಯಲ್ಲಿದ್ದಾರೆ. ಜಗತ್ತಿನಲ್ಲಿ ಜಿನೀವಾ ಎರಡನೇ ಅತ್ಯಂತ ದುಬಾರಿ ನಗರ ಎಂದು ಸ್ವಿಸ್ ಬ್ಯಾಂಕ್ ಯುಬಿಎಸ್ ಹೇಳಿತ್ತು. ಇಲ್ಲಿ ವಾಸಿಸುವ ಜನರ ಸರಾಸರಿ ಆದಾಯವು ಅಧಿಕವಾಗಿದ್ದರೂ ಅದು ಅಲ್ಲಿನ ಜೀವನ ಮಟ್ಟಕ್ಕೆ ಹೋಲಿಸಿದರೆ ತುಂಬಾ ಕಡಿಮೆಯಾಗಿದೆ. ಇಂತಹ ನಗರದಲ್ಲಿ ಬಡವರು ಕೂಲಿ ಮಾಡಿಕೊಂಡು ಸಂಪಾದಿಸಿದ ಹಣದಲ್ಲಿ ಬದುಕುವುದು ಸುಲಭವಲ್ಲ. ವಿಶ್ವದ ಅತ್ಯಂತ ಶ್ರೀಮಂತ ನಗರಗಳಲ್ಲಿ ಒಂದಾದ ಜಿನೀವಾದಲ್ಲಿ ಜನ ಜೀವನ ಅಂದುಕೊಂಡಷ್ಟು ನಿರಾಯಾಸವಾಗಿಲ್ಲ. ವಿಶೇಷವಾಗಿ ಮನೆಕೆಲಸದವರು, ಕೃಷಿ ಕಾರ್ಮಿಕರು, ನಿರ್ಮಾಣ ಕಾರ್ಮಿಕರು, ಹೋಟೆಲ್ ಕಾರ್ಮಿಕರು ಈಗ ಮನೆಯಲ್ಲಿಯೇ ಕುಳಿತುಕೊಳ್ಳಬೇಕಾಗಿದ್ದು ಕೈಯಲ್ಲಿ ಹಣ ಇಲ್ಲವಾಗಿದೆ. ಇಂತಹ ಸಂಕಷ್ಟದ ಮಧ್ಯೆ ಜೀವಿಸಲು ಸ್ವಿಜ್ ಸರಕಾರ ಕೊಡುವ ಆಹಾರ ತುಂಬಾ ಮಹತ್ವದ್ದಾಗಿದೆ. ಇದನ್ನು ಪಡೆದುಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ದೇಶ ಶ್ರೀಮಂತವಾಗಿದ್ದರೂ ಅಲ್ಲಿನ ಬಡವರ ಪಾಡು ಎಲ್ಲ ಬಡವರಂತೆಯೇ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.