ಕೋವಿಡ್ ತಂದ ಆತಂಕ : ಶಸ್ತ್ರಚಿಕಿತ್ಸೆಯಿಂದ ಸಾವಿನ ಪ್ರಮಾಣ ಹೆಚ್ಚು?
Team Udayavani, May 31, 2020, 1:04 PM IST
ಲಂಡನ್: ಕೋವಿಡ್ ಸೋಂಕಿತರು ಮುಂದೆ ಶಸ್ತ್ರಚಿಕಿತ್ಸೆಗೆ ಒಳಪಡುವುದಾದರೆ ಅಥವಾ ತೀವ್ರತರವಾದ ಆರೋಗ್ಯ ಸಮಸ್ಯೆಗಳಿಗೆ ಒಳಗಾದರೆ ಅದು ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂಬ ಆತಂಕಕಾರಿ ಮಾಹಿತಿಯನ್ನು ಜಾಗತಿಕ ಅಧ್ಯಯನವೊಂದು ವರದಿ ಮಾಡಿದೆ. ಕೋವಿಡ್ 19 ಹೆಚ್ಚಾಗಿ ಬಾಧಿಸುವುದು ಆರೋಗ್ಯದಲ್ಲಿ ಏರುಪೇರು ಇರುವವರನ್ನು ಎಂಬ ಮಾಹಿತಿ ಈಗಾಗಲೇ ಸ್ಪಷ್ಟಗೊಂಡಿದೆ. ಆದರೆ ರೋಗ ಗುಣಮುಖವಾದರೂ ಅದರ ಅಪಾಯ ಮುಂದೆಯೂ ಕಾಡುತ್ತದೆ ಎಂದು ಅಧ್ಯಯನ ಹೇಳಿದೆ.
ಏಷ್ಯಾ, ಆಫ್ರಿಕಾ ಮತ್ತು ಉತ್ತರ ಅಮೆರಿಕ ಖಂಡಗಳ 238 ಆಸ್ಪತ್ರೆಗಳಿಂದ 1128 ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಿದ ರಾಷ್ಟ್ರೀಯ ಆರೋಗ್ಯ ಸಂಶೋಧನ ಸಂಸ್ಥೆ ಹಾಗೂ ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾನಿಲಯದ ಅಧ್ಯಯನ ತಂಡ ಈ ವಿಷಯವನ್ನು ಬಯಲಿಗೆಳೆದಿದೆ. ಮರಣದ ಪ್ರಮಾಣವೂ ಹಿಂದಿನ ಅಂಕಿ ಅಂಶಗಳಿಗೆ ಹೋಲಿಸಿದರೆ ಕೋವಿಡ್ ಅನಂತರದಲ್ಲಿ ಅಧಿಕವಾಗಿದೆ.
ಒಂದು ತಿಂಗಳು ನಡೆದ ಅಧ್ಯಯನದಲ್ಲಿ ಮರಣದ ಪ್ರಮಾಣವು ಶೇ. 23.8 ಎಂದು ದಾಖಲಾಗಿದೆ.
ಇದರಲ್ಲಿ ಆಯ್ಕೆಯ ಶಸ್ತ್ರ ಚಿಕಿತ್ಸೆ ಶೇ.18.9, ತುರ್ತುಶಸ್ತ್ರ ಚಿಕಿತ್ಸೆ ಶೇ.23.6, ಸಣ್ಣ ಶಸ್ತ್ರ ಚಿಕಿತ್ಸೆ ಶೇ. 16.3, ಹಾಗೂ ಕ್ಯಾನ್ಸರ್ ಶಸ್ತ್ರ ಚಿಕಿತ್ಸೆಗಳಲ್ಲಿ ಮರಣ ಹೊಂದಿದವರ ಸಂಖ್ಯೆ ಶೇ.26.9 ಆಗಿದೆ. ಇದು ಅಸಮತೋಲನ ಮರಣ ಪ್ರಮಾಣವೆಂದು ಅಧ್ಯಯನ ಸ್ಪಷ್ಟಪಡಿಸುತ್ತದೆ.
ಮರಣ ಪ್ರಮಾಣ ಪುರುಷರಲ್ಲೇ ಹೆಚ್ಚಿದೆ ಎಂದು ಅಧ್ಯಯನವು ಬೊಟ್ಟು ಮಾಡಿದೆ. ಮಹಿಳೆಯರ ಮರಣ ಪ್ರಮಾಣವು ಶೇ.18.2 ಹಾಗೂ ಪುರುಷರ ಮರಣ ಪ್ರಮಾಣವು ಶೇ.28.4 ಆಗಿದೆ. 70 ವರ್ಷಗಳ ಮೇಲ್ಪಟ್ಟವರಿಗೆ ನಡೆದ ಶಸ್ತ್ರ ಚಿಕಿತ್ಸೆಯಲ್ಲಿ ಶೇ. 33.7 ಹಾಗೂ 70 ವರ್ಷಕ್ಕಿಂತ ಕಡಿಮೆ ಹರೆಯದವರಿಗೆ ನಡೆದ ಶಸ್ತ್ರ ಚಿಕಿತ್ಸೆಯಲ್ಲಿ ಶೇ. 13.9 ಮರಣ ಪ್ರಮಾಣ ದಾಖಲಾಗಿದೆ.
ವಯಸ್ಸು, ಲಿಂಗವನ್ನು ಹೊರತು ಪಡಿಸಿ ಮೊದಲೇ ಅಸ್ತಿತ್ವದಲ್ಲಿರುವ ವೈದ್ಯಕೀಯ ಸಮಸ್ಯೆಗಳ ಜತೆಗೆ, ಕ್ಯಾನ್ಸರ್ ಶಸ್ತ್ರ ಚಿಕಿತ್ಸೆ ಹಾಗೂ ತೀವ್ರತರವಾದ ಆರೋಗ್ಯ ಸಮಸ್ಯೆಗಳು ಸಾವಿನ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂಬುದನ್ನು ಅಧ್ಯಯನ ದೃಢಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.