ಅಫ್ಘಾನಿಸ್ಥಾನ: ಆರೋಗ್ಯ ದುರಂತ ಸಂಭವಿಸುವ ಸ್ಥಿತಿ
Team Udayavani, May 2, 2020, 1:56 PM IST
ದುರ್ಬಲ ಆರೋಗ್ಯ ರಕ್ಷಣೆ ವ್ಯವಸ್ಥೆ ಹಾಗೂ ಸಂಘರ್ಷದ ಫಲವಾಗಿ ಅಫ್ಘಾನಿಸ್ಥಾನವು ಕೋವಿಡ್ ವಿರುದ್ಧದ ಸಮರ ಸಾರಲು ಕಷ್ಟಪಡುತ್ತಿದೆ. ಈ ದೇಶದಲ್ಲಿ ಆರೋಗ್ಯ ದುರಂತವೇ ಸಂಭವಿಸಬಹುದು ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಸಿಗಾರ್ ತಿಳಿಸಿದೆ.
ಅಪೌಷ್ಟಿಕತೆ, ಕಳಪೆ ಗುಣಮಟ್ಟದ ಆರೋಗ್ಯ ಸೇವೆ, ಯುದ್ಧ ಹಾಗೂ ಇತರ ಕಾರಣಗಳಿಂದಾಗಿ ಅಫ್ಘಾನಿಸ್ಥಾನವು ತೀವ್ರ ಸಂಕಷ್ಟದಲ್ಲಿದೆ ಎಂದು ಅಮೆರಿಕದ ಕಾಂಗ್ರೆಸ್ ಸಹ ಎಚ್ಚರಿಸಿದೆ.
ಅಫ್ಘಾನಿಸ್ಥಾನ ಪುನರುತ್ಥಾನದ ವಿಶೇಷ ಮಹಾ ನಿರ್ದೇಶಕ (ಸಿಗಾರ್) ಜಾನ್ ಸೋಪ್ಕೋ ಗುರುವಾರ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅಮೆರಿಕ ನೇತೃತ್ವದಲ್ಲಿ ಅಫ್ಘಾನಿಸ್ಥಾನದಲ್ಲಿ ಶಾಂತಿ ಮರುಸ್ಥಾಪನೆ ಪ್ರಯತ್ನವೂ ವಿಳಂಬವಾಗಬಹುದು. ಕೋವಿಡ್ 19 ಹರಡುವಿಕೆ ಗಣನೀಯವಾಗಿದ್ದು, ವಾಣಿಜ್ಯ ಹಾಗೂ ಮಾನವೀಯ ಸೇವೆ ಒದಗಿಸುವುದಕ್ಕೂ ಅಡ್ಡಿಯಾಗಿದೆ.
ದುರ್ಬಲ ಆರೋಗ್ಯ ವ್ಯವಸ್ಥೆ, ವ್ಯಾಪಕವಾಗಿರುವ ಅಪೌಷ್ಟಿಕತೆ, ಗಡಿಯಲ್ಲಿನ ಭದ್ರತೆಯ ಕೊರತೆ, ಇರಾಕ್ ಜತೆಗಿನ ಸಂಘರ್ಷ, ಆಂತರಿಕ ತಿಕ್ಕಾಟ ಇತ್ಯಾದಿ ಎಲ್ಲವೂ ಆರೋಗ್ಯ ದುರಂತಕ್ಕೆ ಕಾರಣವಾಗಬಹುದು. ಆಹಾರ ವಸ್ತುಗಳ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆಯುವುದು ನಿಶ್ಚಿತ ಎಂದೂ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಸೋಂಕು ಹರಡುತ್ತಿದ್ದ ಸಂದರ್ಭದಲ್ಲೇ ಶಾಂತಿ ಮಾತುಕತೆಯ ಪೂರ್ವಭಾವಿಯಾಗಿ ಅಪಾಯದಲ್ಲಿರುವ ಸಾವಿರಾರು ಬಂಡುಕೋರರು ಹಾಗೂ ಕೈದಿಗಳನ್ನು ಬಿಡುಗಡೆ ಮಾಡುವಂತೆ ಅಮೆರಿಕವು ತಾಲಿಬಾನ್ ಹಾಗೂ ಅಫ್ಘಾನಿಸ್ಥಾನ ಅಧ್ಯಕ್ಷ ಅಶ್ರಫ್ ಘನಿ ಅವರಿಗೆ ಮನವಿ ಮಾಡಿತ್ತು. ಅಮೆರಿಕದ ಸೇನಾಪಡೆಗಳನ್ನು ವಾಪಸ್ ಪಡೆಯುವ ತಾಲಿಬಾನ್ ಜತೆಗಿನ ಒಪ್ಪಂದದಲ್ಲಿ ಅಫ್ಘಾನಿಸ್ಥಾನ ಪಾಲ್ಗೊಂಡಿರಲಿಲ್ಲ. ಎಷ್ಟು ಕೈದಿಗಳನ್ನು ಬಿಡುಗಡೆ ಮಾಡಬೇಕು ಎನ್ನುವ ವಿಷಯದಲ್ಲಿ ಭಿನ್ನಮತ ಉಂಟಾಗಿದ್ದು ಶಾಂತಿ ಮಾತುಕತೆಗೆ ಹಿನ್ನಡೆ ಎನಿಸಿದೆ. ಕೈದಿಗಳು ಸೋಂಕಿಗೊಳಗಾಗಿ ಸತ್ತರಂತೂ ಈ ಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ ಎಂದು ವರದಿ ಮಾಡಿದ ಅಲ್‌ಜಜೀರಾ.
ಈ ವರ್ಷದ ಮೊದಲ ಮೂರು ತಿಂಗಳಲ್ಲಿ ತಾಲಿಬಾನ್ ನಡೆಸುವ ದಾಳಿಗಳ ದತ್ತಾಂಶವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ನ್ಯಾಟೋ ನೇತೃತ್ವದ ಅಂತಾರಾಷ್ಟ್ರೀಯ ಮಿತ್ರ ಪಡೆಗಳು ನಿರಾಕರಿಸಿವೆ. ದತ್ತಾಂಶಗಳು ಪ್ರಮುಖ ಅಂಶಗಳಾದ ಕಾರಣ ತಾಲಿಬಾನ್ ಜತೆಗಿನ ಶಾಂತಿ ಮಾತುಕತೆಗಳು ಮುಗಿದ ಬಳಿಕವಷ್ಟೇ ಅವುಗಳ ನೀಡಿಕೆ ಆರಂಭವಾಗಲಿದೆ ಎಂದು ಪೆಂಟಗಾನ್ ಸ್ಪಷ್ಟಪಡಿಸಿದೆ. ಸದ್ಯ ಅಫಘಾನಿಸ್ಥಾನದಲ್ಲಿ 2,200 ಜನ ಕೊರೊನಾ ಸೋಂಕುಪೀಡಿತರಾಗಿದ್ದು, 64 ಮಂದಿ ಮೃತಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.