ಕೋವಿಡ್ -19 ಮತ್ತು ಹಿರಿಯರು
ಕೋವಿಡ್ -19 ವಯೋವೃದ್ಧರನ್ನು ರಕ್ಷಿಸಲು ಮಾಡಬೇಕಾದ್ದೇನು?
Team Udayavani, Apr 19, 2020, 5:15 AM IST
ಕೋವಿಡ್-19 ಅಪಾರ ಪ್ರಮಾಣದಲ್ಲಿ ಸಾವು ನೋವುಗಳನ್ನು ಉಂಟು ಮಾಡುವ ಒಂದು ಸಾಂಕ್ರಾಮಿಕ ಕಾಯಿಲೆ. ಕೋವಿಡ್-19 ತುತ್ತಾದವರು ಮತ್ತು ಅದರಿಂದ ಸಾವನ್ನಪ್ಪಿದವರ ಸಂಖ್ಯೆ ಭಾರತದಲ್ಲಿ ಹೆಚ್ಚುತ್ತಿದೆ. ಈ ಸೋಂಕಿಗೆ ತುತ್ತಾಗುವ ವಯೋವೃದ್ಧರ ಬಗ್ಗೆ ಕಳವಳವೂ ಹೆಚ್ಚುತ್ತಿದೆ. ಮಾರಕವಾದ ಈ ಸೋಂಕಿನಿಂದ ಹಿರಿಯರನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬುದು ಪ್ರಾಮುಖ್ಯವಾದ ವಿಚಾರ. ಈ ಸಂಬಂಧವಾಗಿ ಕೆಲವು ಪ್ರಶ್ನೆಗಳು ಮತ್ತು ಅವುಗಳಿಗೆ ಉತ್ತರದ ರೂಪದ ಉಪಯುಕ್ತ ಮಾಹಿತಿಗಳು ಇಲ್ಲಿವೆ.
ನಾನು 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕನಾಗಿದ್ದು, ನನಗೆ ಕೋವಿಡ್-19 ಸೋಂಕು ತಲೆದೋರುವ ಅಪಾಯ ಹೆಚ್ಚು ಇದೆಯೇ?
– ಇಲ್ಲ, ಹಿರಿಯ ವ್ಯಕ್ತಿಗಳಿಗೆ ಕೋವಿಡ್-19 ಸೋಂಕು ತಗಲುವ ಅಪಾಯ ಹೆಚ್ಚು ಎಂದೇನೂ ಇಲ್ಲ. ಇತರರಿಗೆ ಈ ಸೋಂಕಿಗೆ ತುತ್ತಾಗುವ ಅಪಾಯ ಎಷ್ಟಿದೆಯೋ ಅಷ್ಟೇ ಅಪಾಯ ಹಿರಿಯ ವಯಸ್ಕರಿಗೂ ಇದೆ.
ನನ್ನ ವಯಸ್ಸು 65ಕ್ಕಿಂತ ಹೆಚ್ಚು. ನನಗೆ ಕೋವಿಡ್-19 ದಿಂದ ಸಂಕೀರ್ಣ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು ಇದೆಯೇ?
– ಹೌದು, ವಯೋವೃದ್ಧರಲ್ಲಿ ಕೋವಿಡ್-19 ಉಂಟಾದರೆ ಸಂಕೀರ್ಣ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ದೀರ್ಘ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಅಗತ್ಯವಾಗುವುದು, ಮರಣ ಪ್ರಮಾಣವೂ ಹೆಚ್ಚು. ಕೋವಿಡ್ ರೋಗಿಗಳ ವಯಸ್ಸು ಹೆಚ್ಚಾದಂತೆ ಮರಣ ಪ್ರಮಾಣವೂ ಹೆಚ್ಚುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟ ಕೋವಿಡ್-19 ರೋಗಿಗಳಲ್ಲಿ ಮರಣ ಪ್ರಮಾಣವು ಶೇ.4ರಿಂದ ಶೇ.15ರ ವರೆಗೆ ಇರುತ್ತದೆ.
ನನಗೆ 50 ವರ್ಷ ವಯಸ್ಸಾಗಿದ್ದು, ಮಧುಮೇಹ ಇದೆ. ನನಗೆ ಕೂಡ ಕೋವಿಡ್-19 ತಗಲುವ ಮತ್ತು ಅದರಿಂದ ಸಂಕೀರ್ಣ ಸಮಸ್ಯೆಗಳು ಉಂಟಾಗುವ ಅಪಾಯ ಇದೆಯೇ?
-ಹೌದು. ದೀರ್ಘಕಾಲಿಕ ಶ್ವಾಸಕೋಶ ಕಾಯಿಲೆ, ಅಸ್ತಮಾ, ಪಿತ್ತಕೋಶ ಕಾಯಿಲೆಗಳು, ಮೂತ್ರಪಿಂಡ ಕಾಯಿಲೆಗಳು, ಹೃದ್ರೋಗಗಳು, ಅಂಗಾಂಗ ಕಸಿ ಮಾಡಿಸಿಕೊಂಡವರು, ಎಚ್‌ಐವಿ ರೋಗಿಗಳು ಮತ್ತು ಧೂಮಪಾನ ಅಭ್ಯಾಸವುಳ್ಳವರು ಕೋವಿಡ್-19ನಿಂದಾಗಿ ಸಂಕೀರ್ಣ ಸಮಸ್ಯೆಗಳಿಗೆ ತುತ್ತಾಗುವ ಅಪಾಯವನ್ನು ಹೆಚ್ಚು ಹೊಂದಿರುತ್ತಾರೆ. ಆದ್ದರಿಂದ ಇಂತಹ ವ್ಯಕ್ತಿಗಳು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು, ಜನಸಂದಣಿ, ಜನರು ಗುಂಪುಗೂಡಿರುವ ಸನ್ನಿವೇಶಗಳಿಂದ ದೂರ ಉಳಿಯಬೇಕು. ಇದರಿಂದ ಅವರು ಸೋಂಕು ತಗಲುವ ಅಪಾಯದಿಂದ ಪಾರಾಗಬಹುದು.
ಕೋವಿಡ್ -19 ಸೋಂಕು ತಗಲದಂತೆ ನಾನು ಯಾವೆಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?
ಅತ್ಯಂತ ಆವಶ್ಯಕವಾಗಿರುವ ಸಂದರ್ಭಗಳಲ್ಲಿ ಮಾತ್ರ ಮನೆಯಿಂದ ಹೊರಕ್ಕೆ ತೆರಳಿ, ಇಲ್ಲವಾದರೆ ಮನೆಯಲ್ಲಿಯೇ ಇದ್ದು ಲಾಕ್‌ಡೌನನ್ನು ಕಟ್ಟುನಿಟ್ಟಾಗಿ ಪಾಲಿಸಿ. ಮನೆಯಿಂದ ಹೊರಹೋಗುವ ಸಂದರ್ಭಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಸಾಬೂನು ಉಪಯೋಗಿಸಿ ಕೈಗಳನ್ನು ನಿಯಮಿತವಾಗಿ ತೊಳೆದುಕೊಳ್ಳಿ. ಮನೆಯ ಸದಸ್ಯರಲ್ಲಿ ಯಾರಾದರೂ ಜ್ವರ, ಕೆಮ್ಮು ಅಥವಾ ಇನ್ನಿತರ ಯಾವುದಾದರೂ ಶಂಕಿತ ಕೋವಿಡ್ -19 ಲಕ್ಷಣಗಳಿಂದ ಬಳಲುತ್ತಿದ್ದಲ್ಲಿ ಅವರಿಂದ ದೂರವಿದ್ದು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಎಲ್ಲರೂ ಉಪಯೋಗಿಸುವ ಸ್ಥಳಗಳನ್ನು ಸೋಂಕು ನಿವಾರಕ ಉಪಯೋಗಿಸಿ ಶುಚಿಗೊಳಿಸಬೇಕು.
ದೀರ್ಘಕಾಲಿಕ ಅನಾರೋಗ್ಯಗಳನ್ನು ಹೊಂದಿರುವ 65 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು ಕೋವಿಡ್-19 ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ನೀವು ಹಿರಿಯ ವ್ಯಕ್ತಿಯಾಗಿದ್ದು, ಕೋವಿಡ್-19 ಸೋಂಕು ತಗಲಿದ್ದರೂ ಗಾಬರಿಯಾಗಬೇಡಿ. ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಅವರು ನಿಮಗೆ ಸರಿಯಾದ ಮಾರ್ಗದರ್ಶನ ಮತ್ತು ಚಿಕಿತ್ಸೆಯನ್ನು ನೀಡುವ ಮೂಲಕ ನೀವು ಗುಣಮುಖರಾಗುವುದಕ್ಕೆ ಸಹಾಯ ಮಾಡುತ್ತಾರೆ.
ಡಾ| ಫರ್ಹಾನ್ ಫಝಲ್
ಡಿಎಂ ಇನ್‌ಫೆಕ್ಷಿಯಸ್ ಡಿಸೀಸಸ್
ಕೆಎಂಸಿ ಆಸ್ಪತ್ರೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snuff: ನಶ್ಯ ತಂದಿಟ್ಟ ಸಮಸ್ಯೆ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.