ಕೋವಿಡ್-19 ಸಂಕಷ್ಟಕ್ಕೆ “ಕರುಣಾ ಗೋಡೆ’ ಪ್ರಯೋಗ!
ಬಸವ ಸಮಿತಿಯಿಂದ ಬಡವರಿಗೆ ವಿನೂತನ ಪ್ರಯೋಗ
Team Udayavani, Apr 27, 2020, 5:19 AM IST
ಉಡುಪಿ: ಕಷ್ಟದಲ್ಲಿರುವ ಬಡವರಿಗೆ ನೆರವಾ ಗಲೆಂದು ಉಡುಪಿ ಜಿಲ್ಲೆ ಬಸವ ಸಮಿತಿಯು ದಾನಿಗಳ ಮತ್ತು ಬಡವರ ಸೇತುವಾಗಿ “ಕರುಣಾ ಗೋಡೆ’ ಎಂಬ ಯೋಜನೆಯನ್ನು ರೂಪಿಸಿದ್ದು, ನಗರದಲ್ಲಿ ರವಿವಾರದಿಂದ ಆರಂಭಗೊಂಡಿದೆ. ಬಸವ ಜಯಂತಿ ದಿನದಂದೆ ಈ ಯೋಜನೆಗೆ ನಗರದ ಸಿಟಿ ಬಸ್‌ನಿಲ್ದಾಣದ ಬಳಿ ಶಾಸಕ ಕೆ. ರಘುಪತಿ ಭಟ್ ಚಾಲನೆ ನೀಡಿದರು.
ಯೋಜನೆ ವಿಶೇಷತೆಯೇನು?
ಬಳಸದೆ ಮನೆಯಲ್ಲಿ ಹಾಳು ಮಾಡುತ್ತಿರುವ ಅಗತ್ಯವಿಲ್ಲದ ವಸ್ತುಗಳಿದ್ದರೆ ಅದನ್ನು ದಾನಿಗಳು ತಂದು ಇಲ್ಲಿ ನೀಡಬಹುದು. ಅದನ್ನು ಅಗತ್ಯವಿದ್ದ ಬಡವರು ಬಳಕೆಗೆ ಕೊಂಡು ಹೋಗಲು ಅವಕಾಶ ನೀಡಲಾಗುತ್ತದೆ. ದಾನಿಗಳ ಮತ್ತು ಬಡವರ ಮಧ್ಯೆ ಸೇತುವಾಗಿ ಫುಟ್‌ಪಾತ್ ಮೇಲೆ ಗೋಡೆಯಲ್ಲಿ ನಿರ್ಮಿಸಿರುವ ರ್ಯಾಪ್ ಕೆಲಸ ಮಾಡುತ್ತದೆ.
ದಾನಿಗಳು ವಸ್ತುಗಳನ್ನು ತಂದು ಈ ರ್ಯಾಪ್‌ನಲ್ಲಿರಿಸಿದರೆ ಅಗತ್ಯವಿರುವ ಬಡವರು ತಮಗೆ ಬೇಕಾದ ವಸ್ತುಗಳನ್ನು ರ್ಯಾಪ್‌ನಿಂದ ಪಡೆದುಕೊಂಡು ಹೋಗುವುದಕ್ಕೆ ಅವಕಾಶ ನೀಡುವ ಯೋಜನೆ ಇದಾಗಿದೆ.
ಮೊದಲ ದಿನ ಮುಗಿಬಿದ್ದರು!
ಈಗ ದಿನಸಿ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ದಿನಸಿ ವಸ್ತುಗಳು ಹಾಗೂ ತರಕಾರಿ, ಹಣ್ಣು-ಹಂಪಲುಗಳನ್ನು ಇಡುವುದಕ್ಕೆ ಅವಕಾಶವಿದೆ. ಮುಂದಿನ ದಿನಗಳಲ್ಲಿ ಬಟ್ಟೆ, ಇನ್ನಿತರ ದಿನ ಬಳಕೆಯ ವಸ್ತುಗಳನ್ನು ಜೋಡಿಸಿಟ್ಟು ರ್ಯಾಪ್ ಅನ್ನು ಶಾಶ್ವತವಾಗಿ ಬಡವರ ಅನುಕೂಲತೆಗೆ ತೆರೆದಿಡುವ ಚಿಂತನೆ ಬಸವ ಸಮಿತಿಯದ್ದಾಗಿದೆ. ಈಗ ಕೊರೊನಾ ಲಾಕ್‌ಡೌನ್‌ನಿಂದ ದಿನಸಿ, ಹಣ್ಣುಹಂಪಲು ಸಹಿತ ಅಗತ್ಯ ವಸ್ತುಗಳಿಗೆ ಜನ ಮುಗಿ ಬೀಳುತ್ತಿದ್ದಾರೆ. ರವಿವಾರ ಕರುಣಾ ಗೋಡೆ ಮುಂದೆ ನೂರಾರು ಕಾರ್ಮಿಕರು ಅಗತ್ಯ ವಸ್ತುಗಳಿಗೆ ಮುಗಿಬಿದ್ದರು. ಬೆಳಗ್ಗೆ 8ರಿಂದ 11ರ ತನಕ ಮಾತ್ರ ವಸ್ತು ನೀಡಲು ಮತ್ತು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಜನ ಮುಗಿಬಿದ್ದಿದ್ದರಿಂದ ಬಸವ ಸಮಿತಿ ಕಾರ್ಯಕರ್ತರು ವಸ್ತುಗಳನ್ನು ಹಂಚಿ ನಿಯಂತ್ರಿಸಿದರು. ಸಾಮಾಜಿಕ ಅಂತರ ಕಾಯ್ದುಕೊಂಡು ವಸ್ತುಗಳನ್ನು ನೀಡಿದರು.ಬಡವರಿಗೆ ನೆರವಾಗುವ ದೃಷ್ಟಿಯಿಂದ ಕರುಣಾ ಗೋಡೆ ಮಾದರಿಯ ಕಾರ್ಯಕ್ರಮ ಈ ಹಿಂದೆ ಪೇಜಾವರ ಮಠದ ಪರಿಸರದಲ್ಲಿ ಅನುಷ್ಠಾನಗೊಂಡಿದ್ದು ಬಹಳಷ್ಟು ಇದರ ಪ್ರಯೋಜನ ಪಡೆದುಕೊಂಡಿದ್ದರು. ಅನಂತರ ದಿನಗಳಲ್ಲಿ ಕಾರಣಾಂತರಗಳಿಂದ ಇದು ನಿಂತಿದೆ.
ಹಲವು ಮಂದಿಗೆ ಪ್ರಯೋಜನ
ಬಸವ ಸಮಿತಿಯ ಕಾರ್ಯಕರ್ತ ಜೆ.ಕೆ. ಪ್ಲಾಸ್ಟಿಕ್‌ನ ಜನಾರ್ದನ ವಿ. ಕೆಂಬಾವಿ ನೇತೃತ್ವದಲ್ಲಿ ಆರಂಭದ ದಿನ 5 ಮಂದಿ ದಾನಿಗಳು ಹಲವು ರೂಪದ ವಸ್ತುಗಳನ್ನು ನೀಡಿದರು. ರ್ಯಾಪ್‌ನಲ್ಲಿ ವಿವಿಧ ರೂಪಗಳ ವಸ್ತುಗಳನ್ನು ಜೋಡಿಸಿಡಲಾಗಿತ್ತು. ಸುಮಾರು 200ಕ್ಕೂ ಅಧಿಕ ಮಂದಿ ಬಡವರು ತಮಗೆ ಅಗತ್ಯವಿರುವ ದಿನಸಿ, ತರಕಾರಿ, ಹಣ್ಣು ಬಟ್ಟೆಗಳನ್ನು ಅಲ್ಲಿಂದ ಪಡೆದು ಕೊಂಡೊಯ್ದಿದ್ದಾರೆ. ಇದರಲ್ಲಿ ದಿನಸಿ, ತರಕಾರಿ, ಬಟ್ಟೆಗಳು ಸೇರಿದ್ದವು.
ಶಾಶ್ವತವಾಗಿ ಉಳಿಸುವ ಇರಾದೆ
ಮುಂದಿನ ದಿನಗಳಲ್ಲಿ ಬಟ್ಟೆ, ಮಕ್ಕಳ ಸ್ಕೂಲ್ ಬ್ಯಾಗ್, ಪುಸ್ತಕ, ಛತ್ರಿ(ಕೊಡೆ)ಗಳನ್ನು ರ್ಯಾಪ್‌ನಲ್ಲಿ ಇರಿಸಲು ದಾನಿಗಳಿಗೆ ಅವಕಾಶ ಮಾಡಿಕೊಡುತ್ತೇವೆ. ದುರುಪಯೋಗವಾಗದಂತೆ ಕ್ರಮ ವಹಿಸುತ್ತೇವೆ. ನಿಜಕ್ಕೂ ಅಗತ್ಯವಿರುವ ಬಡವರ ಕೈ ಸೇರಲು ಬೇಕಾದ ಯೋಜನೆಗಳನ್ನು ರೂಪಿಸಿಕೊಳ್ಳುತ್ತೇವೆ.
-ಜನಾರ್ದನ ವಿ. ಕೆಂಬಾವಿ, ಯೋಜನೆಯ ರೂವಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.