ಕೋವಿಡ್ 19 : ಕಚೇರಿಯಿಂದ ಮನೆಯವರೆಗಿನ ಸುರಕ್ಷಿತ ಪಯಣ!
Team Udayavani, Apr 27, 2020, 12:03 PM IST
ಕೆಲವು ಸರಕಾರಿ ಕಚೇರಿಗಳು ಕೆಲಸ ಆರಂಭಿಸಿವೆ. ಇದಷ್ಟೇ ಅಲ್ಲದೆ, ಮುಂಬರುವ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲೂ ಕೆಲಸ-ಕಾರ್ಯಗಳು ಮತ್ತೆ ಆರಂಭವಾಗಲಿರುವುದರಿಂದ, ಕಚೇರಿಯ ವ್ಯವಸ್ಥಾಪಕರು ಹಾಗೂ ಉದ್ಯೋಗಿಗಳು ಕೆಲವು ಕಟ್ಟುನಿಟ್ಟಾದ ಕ್ರಮಗಳನ್ನು ಪಾಲಿಸುವುದು ಮುಖ್ಯವಾಗುತ್ತದೆ. ಕಚೇರಿಗೆ ತೆರಳಿದಾಗ ಏನು ಮಾಡಬೇಕು, ಮನೆಗೆ ಹಿಂದಿರುಗಿದ ಅನಂತರ ಹೇಗೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎನ್ನುವ ಕುರಿತು ಸಲಹೆ ಇಲ್ಲಿದೆ…
ಬಳೆ, ಉಂಗುರ, ವಾಚ್ ಧರಿಸುವುದನ್ನು ತಪ್ಪಿಸಿ
ಬಳೆ, ಕಡಗ, ಉಂಗುರದ ಮೇಲೂ ಕೋವಿಡ್ ವೈರಾಣು ಕೂಡಬಹುದು. ಹೀಗಾಗಿ, ಅವುಗಳನ್ನು ಆಲ್ಕೋಹಾಲ್ ಇರುವ ಸ್ಯಾನಿಟೈಜರ್‌ಗಳಿಂದ ಒರೆಸಬೇಕು ಅಥವಾ ಸೋಪು ನೀರಿನಿಂದ ಚೆನ್ನಾಗಿ ತೊಳೆಯುವುದು ಮಖ್ಯ. ಆದರೂ ಕೋವಿಡ್
ಸಾಂಕ್ರಾಮಿಕ ಪೂರ್ಣವಾಗಿ ನಿಲ್ಲುವವರೆಗೆ ವಾಚ್, ಎಲೆಕ್ಟ್ರಾನಿಕ್ ಬ್ಯಾಂಡ್ ಗಳು, ಬಳೆ, ಕಡಗ, ಉಂಗುರವನ್ನು ಧರಿಸದಿರುವುದೇ ಒಳ್ಳೆಯದು.
ತಲೆಗೂದಲು, ಉಗುರಿನಲ್ಲೂ ವೈರಾಣು ಸೇರಿಕೊಳ್ಳುವುದೇ?
ತಲೆಗೂದಲಲ್ಲಿ ವೈರಾಣುವಿನ ಇರುವಿಕೆಯ ಬಗ್ಗೆ ಈಗಲೂ ಸ್ಪಷ್ಟ ಅಧ್ಯಯನವರದಿಗಳು ಬಂದಿಲ್ಲವಾದರೂ, ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ಹೀಗಾಗಿ, ಕಚೇರಿಯಿಂದ ಹಿಂದಿರುಗಿದ ನಂತರ ತಲೆಸ್ನಾನಕ್ಕೆ ಆದ್ಯತೆ ಕೊಡಿ. ಇನ್ನು ಉಗುರು ಬೆಳೆಯದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಉಗುರಿನ ಸಂದಿಯಲ್ಲಿ ಅನೇಕ ವೈರಾಣುಗಳು, ಬ್ಯಾಕ್ಟೀರಿಯಾಗಳು, ಕಲ್ಮಶಗಳು ಸೇರಿಕೊಂಡಿರುತ್ತವೆ. ಹೀಗಾಗಿ ನಿಯಮಿತವಾಗಿ ಉಗುರು ಕತ್ತರಿಸಿಕೊಳ್ಳಿ.
ಕಾರ್, ಬೈಕ್ ನಡೆಸುವ ಮುನ್ನ…
ಕಾರು ಹಾಗೂ ಬೈಕ್ ನಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಇಟ್ಟುಕೊಳ್ಳಿ. ಕೈ ಸ್ವತ್ಛ ಮಾಡಿಕೊಂಡು ಸ್ಟೀರಿಂಗ್ ವೀಲ್ ಹಾಗೂ ಎಕ್ಸಲರೇಟರ್ ಹಿಡಿಯಿರಿ. ಇನ್ನು ನಿಮ್ಮ ಹೆಲ್ಮೆಟ್ ಅನ್ನು ಎಲ್ಲಿ ಬೇಕೆಂದರಲ್ಲಿ ಇಡಬೇಡಿ. ಅದು ಯಾರ ಸಂಪರ್ಕಕ್ಕೂ ಬಾರದಂತೆ ನೋಡಿಕೊಳ್ಳಿ.
ಮನೆ ಪ್ರವೇಶಿಸುವ ಮುನ್ನ
ಮನೆಗೆ ಪ್ರವೇಶಿಸುವುದಕ್ಕೂ ಮುನ್ನ ಎಚ್ಚರಿಕೆ ವಹಿಸಬೇಕು. ಮನೆಯ ಗೇಟು ಹಾಗೂ ಬಾಗಿಲನ್ನು ನೀವಾಗಿ ತೆರೆಯದಿರಿ. ನಿಮ್ಮ ಮನೆಯವರಿಗೆ ತೆರೆದಿಡಲು ಹೇಳಿ. ಮನೆಯ ಡೋರ್‌ಬೆಲ್ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಿ. ಇನ್ನು ಶೂಗಳ ಮೇಲೂ ವೈರಾಣು ಇರಬಹುದಾದ್ದರಿಂದ, ಅದನ್ನು ನಿಮ್ಮ ಮನೆಯವರ ಶೂ-ಚಪ್ಪಲಿಯ ಜತೆ ಬಿಡದೇ ಪ್ರತ್ಯೇಕವಾಗಿ ಬಿಡಿ.(ಶೂ ಧರಿಸಿದ ಹಾಗೂ ಬಿಚ್ಚಿದ ನಂತರ ಏನನ್ನೂ ಮುಟ್ಟಬೇಡಿ). ಒಳ ಪ್ರವೇಶಿಸುತ್ತಿದ್ದಂತೆಯೇ, ಯಾವುದೇ ವಸ್ತುವನ್ನೂ ಮುಟ್ಟದಿರಿ. ನಿಮ್ಮ ಬಟ್ಟೆಗಳನ್ನು ಸೋಪು ನೀರಿನಲ್ಲಿ ಅದ್ದಿಟ್ಟು, ಸ್ನಾನ ಮಾಡಿ ಹೊರಬನ್ನಿ.
ಕಾಂಟ್ಯಾಕ್ಟ್ ಲೆನ್ಸ್ ಬಳಕೆ ಬೇಕೇ?
ಕಣ್ಣು, ನಮ್ಮ ದೇಹದ ಅತ್ಯಂತ ಸೂಕ್ಷ್ಮ ಭಾಗವಾಗಿದ್ದು, ವೈರಾಣುಗಳು ಕಣ್ಣಿನ ಮೂಲಕ ಸುಲಭವಾಗಿ ದೇಹವನ್ನು ಪ್ರವೇಶಿಸುತ್ತವೆ. ಹೀಗಾಗಿ, ಕೋವಿಡ್ ಸಾಂಕ್ರಾಮಿಕ ದೂರವಾಗುವವರೆಗೆ ಕಾಂಟ್ಯಾಕ್ಟ್ ಲೆನ್ಸ್‌ಗಳ ಬಳಕೆಯನ್ನು ನಿಲ್ಲಿಸಿ. ಲೆನ್ಸ್ ಗಳು ಧರಿಸಿದಾಗ ಕಣ್ಣಲ್ಲಿ ತುರಿಕೆ ಅಥವಾ ಅಸೌಖ್ಯ ಆಗುವ ಸಾಧ್ಯತೆ ಇರುತ್ತದೆ. ಅದನ್ನು ಸರಿಪಡಿಸಿಕೊಳ್ಳಲು ನೀವು ಕಣ್ಣನ್ನು ಸ್ಪರ್ಶಿಸುವ ಸಾಧ್ಯತೆ ಅಧಿಕ. ಕೈಗಳ ಮೇಲೆ ವೈರಾಣುಗಳಿದ್ದರೆ ಅವು ಸರಾಗವಾಗಿ ಕಣ್ಣಿನ ದ್ರವಗಳಲ್ಲಿ ಸೇರಿಕೊಂಡುಬಿಡುತ್ತವೆ. ಇದರ ಬದಲು ಕನ್ನಡಕ ಬಳಸಿ. ಇದರಿಂದ ನೀವು ಕಣ್ಣಿನ ಒಳಭಾಗವನ್ನು ಸ್ಪರ್ಷಿಸುವುದು ಕಡಿಮೆಯಾಗುತ್ತದೆ. ಕನ್ನಡಕವನ್ನು ತೆಗೆದ ನಂತರ ಅದನ್ನು ಸ್ವತ್ಛಗೊಳಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.