ದುಬಾೖ: ನಿಯಮ ಉಲ್ಲಂಘಿಸಿದ ಅಂಗಡಿಗಳ ಮೇಲೆ ಕ್ರಮ
Team Udayavani, May 1, 2020, 12:58 PM IST
ದುಬಾೖ: ಕೋವಿಡ್-19 ಸೋಂಕಿನಿಂದ ಹೊರಬರಲು ಜಾಗತಿಕವಾಗಿ ಲಾಕ್‌ಡೌನ್ ಜಾರಿಯಲ್ಲಿದೆ. ಕೆಲವು ರಾಷ್ಟ್ರಗಳ ಬೆರಳೆಣಿಕೆಯ ರಾಜ್ಯಗಳು ಅವುಗಳನ್ನು ತೆರವು ಮಾಡುತ್ತಿವೆ.
ಆದರೆ ಸರಕಾರದ ಸೂಚನೆಯನ್ನು ಉಲ್ಲಂಘಿಸಿ ಅಂಗಡಿಗಳನ್ನು ತೆರೆದ ಕಾರಣಕ್ಕೆ ದುಬಾೖಯಲ್ಲಿ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳುತ್ತಿದೆ.
ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸದೇ ಇದ್ದ ಕಾರಣಕ್ಕಾಗಿ 19 ಅಂಗಡಿಗಳನ್ನು ಮುಚ್ಚಲಾಗಿದ್ದು 165 ಅಂಗಡಿಗಳಿಗೆ ಎಚ್ಚರಿಕೆ ನೀಡಲಾಗಿದೆ. 2 ಶಾಪ್‌ಗ್ಳಿಗೆ ದಂಡ ವಿಧಿಸಲಾಗಿದೆ. 505 ಮಳಿಗೆಗಳು ಸರಕಾರದ ಸೂಚನೆಯ ಅನುಸಾರ ಕೆಲಸ ಮಾಡುತ್ತಿವೆ ಎಂದು ಹೇಳಿದೆ. ಮಾಲ್‌ಗಳು ಮತ್ತು ಹೈ ಸ್ಟ್ರೀಟ್ ಮಾರುಕಟ್ಟೆಗಳಾದ್ಯಂತದ ತಪಾಸಣೆಯ ಸಮಯದಲ್ಲಿ ಸಾಮಾಜಿಕ ಅಂತರದ ನಿಯಮಗಳು ಉಲ್ಲಂಘನೆ ಪತ್ತೆಯಾಗಿದೆ.
ಸರಕಾರ ಏನು ಹೇಳಿತ್ತು?
ಸರಕಾರ ಅಂಗಡಿಗಳನ್ನು ತೆರೆಯುವ ಸಂದರ್ಭ ಮಾಲ್‌ಗಳು ಮತ್ತು ಹೈ ಸ್ಟ್ರೀಟ್ ಮಾರುಕಟ್ಟೆಗಳಾದ್ಯಂತ ಸಾಮಾಜಿಕ ಅಂತರ ಪಾಲನೆಯಾಗಬೇಕು ಎಂದು ಹೇಳಿತ್ತು. ಮಾಸ್ಕ್ಗಳು, ಕೈಗವಸುಗಳನ್ನು ಧರಿಸುವುದು, ಸಾಮಾಜಿಕ ದೂರ ಕಾಪಾಡಿಕೊಳ್ಳುವುದು, ಸಾರ್ವಜನಿಕರನ್ನು ಸೇರಿಸಿಕೊಂಡು ಸಭೆ ಮಾಡುವುದನ್ನು ನಿಷೇಧಿಸಲಾಗಿತ್ತು. ಪರಿಶೀಲನೆಯ ಸಂದರ್ಭ 365 ರಸ್ತೆಬದಿ ಅಂಗಡಿಗಳಿಗೆ ಪೊಲೀಸರು ತೆರಳಿದ ಸಂದರ್ಭ ನಿಯಮಗಳನ್ನು ಗಾಳಿಗೆ ತೂರಿದ್ದು ಪತ್ತೆಯಾದ ಕಾರಣ 19 ಅಂಗಡಿಗಳನ್ನು ಮುಚ್ಚಲಾಗಿದ್ದು, 90ಕ್ಕೆ ಎಚ್ಚರಿಕೆ ನೀಡಲಾಗಿದೆ. ದುಬಾೖಯ ವಿವಿಧ ನಗರಗಳಲ್ಲಿ ಈ ತನಿಖೆಗಳು ನಡೆದಿದ್ದು, ನಿಯಮಗಳ ಪಾಲನೆಯಾಗದ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ದುಬಾೖಯ ಸ್ಥಳೀಯ ಆಡಳಿತವು ಕಟ್ಟುನಿಟ್ಟಾಗಿ ಲಾಕ್‌ಡೌನ್ ನಿಯಮಗಳನ್ನು ಪಾಲಿಸುತ್ತಿದ್ದು, ಅದನ್ನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರಗಿಸುತ್ತಿದೆ. ಈ ಹಿಂದೆಯೂ ಕೆಲವು ಅಂಗಡಿಗಳು ಹೆಚ್ಚು ದರ ವಸೂಲಿ ಮಾಡಿದ್ದಕ್ಕೆ ದಂಡ ವಿಧಿಸಿದ ಪ್ರಕರಣಗಳೂ ಸೌದಿ ರಾಷ್ಟ್ರಗಳಲ್ಲಿ ವರದಿಯಾಗಿದ್ದವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.