ಹೃದಯದ ಮೇಲೂ ಕೋವಿಡ್ ಪರಿಣಾಮ ಬೀರಲಿದೆ! ಅಧ್ಯಯನ ವರದಿ
Team Udayavani, Aug 2, 2020, 4:07 PM IST
ಬರ್ಲಿನ್ : ಕೋವಿಡ್ ಮೂಲ, ಗುಣಲಕ್ಷಣಗಳು ಹಾಗೂ ಅದರ ಪರಿಣಾಮಗಳ ಕುರಿತು ಅಧ್ಯಯನ ನಡೆಯುತ್ತಲೇ ಇದೆ. ನ್ಯುಮೋನಿಯಾ ರೀತಿಯ ಲಕ್ಷಣಗಳಿಂದ ಆರಂಭವಾದ ಕೋವಿಡ್ ಶ್ವಾಸಕೋಶ ಮಾತ್ರವಲ್ಲದೇ ದೇಹದ ನಾನಾ ಅಂಗಾಂಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸುತ್ತಲೇ ಬಂದಿದ್ದಾರೆ.
ಇದೀಗ ಹೊಸ ಅಧ್ಯಯನವೊಂದು ನಡೆದಿದ್ದು, ವರದಿಯ ಪ್ರಕಾರ ಕೋವಿಡ್ ಹೃದಯ ರಕ್ತನಾಳದ ಅಪಾಯ ಉಲ್ಬಣಗೊಳಿಸುತ್ತದೆ ಎಂದು ಹೇಳಿದ್ದು, ಈ ಸೋಂಕು ಹೃದಯದ ಮೇಲೆ ಶಾಶ್ವತ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.
ಈ ಅಧ್ಯಯನ ವರದಿಯೂ ಪೀರ್ ರಿವ್ಯೂಡ್ ಜರ್ನಲ್ ಜಮಾ ಕಾರ್ಡಿಯಾಲಜಿ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಸೋಂಕಿನಿಂದ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾದವರ ಪೈಕಿ ಶೇ.78 ರಷ್ಟು ಕೋವಿಡ್ ರೋಗಿಗಳು ಚೇತರಿಸಿಕೊಂಡ ಕೆಲ ತಿಂಗಳಗಳಿಂದ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಅಧ್ಯಯನಕ್ಕಾಗಿ ಫ್ರಾಂಕ್ ಫರ್ಟ್ ವಿಶ್ವವಿದ್ಯಾಲಯ ಆಸ್ಪತ್ರೆಯಿಂದ ಏಪ್ರಿಲ್ ಮತ್ತು ಜೂನ್ 2020ರ ನಡುವೆ ಚೇತರಿಸಿಕೊಂಡ ಸುಮಾರು 100 ಕೋವಿಡ್ ರೋಗಿಗಳ ಆರೋಗ್ಯ ಸ್ಥಿತಿಯ ಕುರಿತು ವಿಶ್ಲೇಷಿಸಿದ್ದು, ಕೇವಲ ಶೇ.78ರಷ್ಟು ರೋಗಿಗಳಲ್ಲಿ ಹೃದಯದ ಚಟುವಟಿಕೆ ಸಮರ್ಪಕವಾಗಿರುವುದನ್ನು ಎಂಆರ್‌ಐ ತೋರಿಸಿದೆ.
ಇದರೊಂದಿಗೆ ಸೋಂಕು ಮುಕ್ತರಾದ ಶೇ.60ರಷ್ಟು ಕೋವಿಡ್ ರೋಗಿಗಳಲ್ಲಿ ಹೃದಯದ ಉರಿಯೂತ ಸಮಸ್ಯೆಯೂ ಕಂಡು ಬಂದಿದ್ದು, ಸುಮಾರು ಮೂರನೇ ಒಂದು ಭಾಗದಷ್ಟು ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದರೆ, ಉಳಿದವರು ಮನೆಯಲ್ಲೇ ಚೇತರಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.