ಭಟ್ಕಳದ ಸೋಂಕು ಭೀತಿ: ಉಡುಪಿ ಗಡಿಯಲ್ಲಿ ಕಟ್ಟೆಚ್ಚರ
Team Udayavani, May 9, 2020, 12:00 PM IST
ಉಡುಪಿ: ಭಟ್ಕಳದಲ್ಲಿ ಶುಕ್ರವಾರ 12 ಸೋಂಕು ದೃಢಪಟ್ಟ ಕಾರಣ ಉಡುಪಿ ಜಿಲ್ಲೆಯ ಶಿರೂರು ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಬೈಂದೂರಿನ 20 ಪೊಲೀಸರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒನ್ ಟೈಮ್ ಪಾಸ್ ಇದ್ದವರು ಮತ್ತು ಮಣಿಪಾಲ ಆಸ್ಪತ್ರೆಗೆ ವೈದ್ಯಕೀಯ ಚಿಕಿತ್ಸೆಗಾಗಿ ಬರುವವರಿಗೆ ಮಾತ್ರ ಉಡುಪಿ ಜಿಲ್ಲೆಯೊಳಗೆ ಬರಲು ಬಿಡಲಾಗುತ್ತಿದೆ.
ಎಲ್ಲ ವರದಿ ನೆಗೆಟಿವ್
ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 57 ಜನರ ಮಾದರಿ ಗಳನ್ನು ಸಂಗ್ರಹಿಸಿದ್ದರೆ ಅದರಲ್ಲಿ 45 ಮಂದಿ ಹಾಟ್‌ಸ್ಪಾಟ್ ಸಂಪರ್ಕದವರಾಗಿದ್ದಾರೆ. ಇವರಲ್ಲದೆ ತೀವ್ರ ಉಸಿರಾಟದ ಸಮಸ್ಯೆಯ ಐವರು, ಫ್ಲೂ ಜ್ವರದ ಏಳು ಮಂದಿ ಇದ್ದಾರೆ. ಶುಕ್ರವಾರ ಬಂದ ಎಲ್ಲ 25 ಮಾದರಿ ಪರೀಕ್ಷೆಗಳೂ ನೆಗೆಟಿವ್ ಆಗಿದೆ.
60 ಮಂದಿ ಹೆಸರು ನೋಂದಾಯಿಸಿದ್ದು, 68 ಮಂದಿ 28 ದಿನಗಳ, 35 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದಾರೆ. 716 ಜನರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.
4,000 ಜನರ ಆಗಮನ
ಗುರುವಾರ 900 ಜನರು ಉಡುಪಿ ಜಿಲ್ಲೆಗೆ ಆಗಮಿಸಿದ್ದು ನಾಲ್ಕು ದಿನಗಳಿಂದ ಸುಮಾರು 4,000 ಜನರು ಆಗಮಿಸಿದ್ದಾರೆ. ಇವರೆಲ್ಲರನ್ನೂ ಪರೀಕ್ಷಿಸಿ ಸೀಲು ಹಾಕಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದೆ ಎಂದು ಡಿಎಚ್‌ಒ ಡಾ| ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.