ಮಾನವನ ವೀರ್ಯದಲ್ಲಿಯೂ ಕೋವಿಡ್-19 ಸೋಂಕು ಪತ್ತೆ
ಚೀನ ಅಧ್ಯಯನದಿಂದ ಆಘಾತಕಾರಿ ಮಾಹಿತಿ ಬಹಿರಂಗ ; ಲೈಂಗಿಕವಾಗಿ ಸೋಂಕು ಹರಡುವ ಬಗ್ಗೆ ಇನ್ನೂ ದೃಢವಿಲ್ಲ
Team Udayavani, May 10, 2020, 6:15 AM IST
ಬೀಜಿಂಗ್: ಪುರುಷನ ವೀರ್ಯದಲ್ಲೂ ಕೋವಿಡ್-19ವೈರಸ್ ಪತ್ತೆಯಾಗಿದೆ. “ಜಾಮಾ ನೆಟ್‌ವರ್ಕ್ ಓಪನ್’ ನಿಯತಕಾಲಿಕದಲ್ಲಿ ಪ್ರಕಟವಾದ ಸಂಶೋಧನಾ ವರದಿ ಈ ಆಘಾತಕಾರಿ ವಿಷಯವನ್ನು ಬಹಿರಂಗ ಪಡಿಸಿದೆ. ಚೀನದ ಶಾಂಗ್ಕಿಯು ಮುನಿಸಿಪಲ್ ಆಸ್ಪತ್ರೆಯ ವೈದ್ಯರು ನಡೆಸಿದ ಸಂಶೋಧನೆಯಲ್ಲಿ ಈ ಸಂಗತಿ ಗೊತ್ತಾಗಿದೆ.
ಕೋವಿಡ್-19 ಸೋಂಕಿತ 38 ಪುರುಷರನ್ನು ಇಲ್ಲಿನ ಮುನಿಸಿಪಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಪೈಕಿ 6 ಮಂದಿ ಪುರುಷರ ವೀರ್ಯದಲ್ಲಿ ಕೋವಿಡ್-19ವೈರಸ್ ಇರುವುದು ಪತ್ತೆಯಾಗಿದೆ. ಈ ಪೈಕಿ ನಾಲ್ವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿಲ್ಲ. ಉಳಿದಿಬ್ಬರು ಗುಣಮುಖರಾಗುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಆದರೆ, ಈ ಸಂಬಂಧ ದೀರ್ಘ ಕಾಲದ ಅಧ್ಯಯನ ನಡೆಸಲಾಗಿಲ್ಲ. ಹೀಗಾಗಿ, ಪುರುಷನ ವೀರ್ಯದಲ್ಲಿ ಈ ವೈರಸ್ ಎಷ್ಟು ಕಾಲ ಕ್ರಿಯಾಶೀಲವಾಗಿ ಇರಬಹುದು, ಲೈಂಗಿಕವಾಗಿ ಸಂಗಾತಿಗೆ ವೈರಸ್ ಅನ್ನು ಹರಡು ವಷ್ಟು ಕಾಲ ಅದು ಜೀವಂತವಾಗಿ, ಕ್ರಿಯಾಶೀಲವಾಗಿ ಇರಬಹುದೇ, ಲೈಂಗಿಕ ಕ್ರಿಯೆಯ ಮೂಲಕ ಆತ ತನ್ನ ಸಂಗಾತಿಗೆ ವೈರಸ್ ಅನ್ನು ಹರಡಬಹುದೇ ಎಂಬುದು ತಿಳಿದು ಬಂದಿಲ್ಲ.
ಆದರೆ, ಈ ಹಿಂದಿನ ಅಧ್ಯಯನ ವರದಿಗೆ ಇದು ವ್ಯತಿರಿಕ್ತವಾಗಿದೆ. ಕಳೆದ ತಿಂಗಳು ಕೋವಿಡ್-19 ಸೋಂಕಿತ ಚೀನದ 34 ಪುರುಷರ ಮೇಲೆ ಈ ಸಂಬಂಧ ಅಧ್ಯಯನ ನಡೆಸಲಾಗಿತ್ತು. “ಫರ್ಟಿಲಿಟಿ ಆ್ಯಂಡ್ ಸ್ಟೆರಿಲಿಟಿ’ ನಿಯಕಾಲಿಕದಲ್ಲಿ ಈ ವರದಿ ಪ್ರಕಟವಾಗಿತ್ತು. ಚೀನ, ಅಮೆರಿಕದ ಸಂಶೋಧಕರು ವ್ಯಕ್ತಿಗಳಲ್ಲಿ ರೋಗ ಪತ್ತೆಯಾದ ಬಳಿಕ 8 ದಿನಗಳಿಂದ ಹಿಡಿದು ಮೂರು ತಿಂಗಳ ಕಾಲ ನಿರಂತರ ಅಧ್ಯಯನ ನಡೆಸಿದ್ದರು. ಆದರೆ, ಇವರುಗಳ ವೀರ್ಯದಲ್ಲಿ ಕೋವಿಡ್-19 ವೈರಸ್ ಪತ್ತೆಯಾಗಿರಲಿಲ್ಲ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತಾಹ್ ವಿಶ್ವವಿದ್ಯಾಲಯದ ಡಾ| ಜಾನ್ ಹೊಟಾಲಿಂಗ್, ಬಹುಶಃ ಹೊಸ ಅಧ್ಯಯನವನ್ನು ಅತಿ ರೋಗ ಪೀಡಿತ ಪುರುಷರ ಮೇಲೆ ನಡೆಸಿರಬಹುದು. ಅಲ್ಲದೆ, ಅಧ್ಯಯನಕ್ಕೊಳಗಾದವರು ಸಕ್ರಿಯ ರೋಗಿಗಳಾಗಿರಬಹುದು ಎಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ “ಅಮೆರಿಕನ್ ಸೊಸೈಟಿ ಫಾರ್ ರಿಪ್ರೊಡಕ್ಟಿವ್ ಮೆಡಿಸಿನ್’, ಹೊಸ ಅಧ್ಯಯನ ಆತಂಕಕ್ಕೆ ಕಾರಣವಾಗಬಾರದು. ಇದೊಂದು ಎಚ್ಚರಿಕೆಯಷ್ಟೆ ಎಂದಿದೆ.
“14 ದಿನಗಳ ಕಾಲ ರೋಗಲಕ್ಷಣ ಇಲ್ಲದಿರುವುದು ಖಾತ್ರಿಯಾದ ಬಳಿಕವಷ್ಟೇ ವ್ಯಕ್ತಿಯೊಬ್ಬ ಸಂಗಾತಿ ಜತೆ ಲೈಂಗಿಕ ಸಂಪರ್ಕ ಹೊಂದುವುದು ಒಳ್ಳೆ ಯದು. ಆರೋಗ್ಯದ ದೃಷ್ಟಿಯಿಂದ ಈ ಎಚ್ಚರಿಕೆ ಅಗತ್ಯ’ ಎಂದು ಈ ಹಿಂದಿನ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಡಾ| ಪೀಟರ್ ಶ್ಲೆಗೆಲ್ ತಿಳಿಸಿದ್ದಾರೆ.
ಇದೇ ವೇಳೆ, ರೋಗಿಗಳ ಮಲ, ಮೂತ್ರ, ಲಾಲಾ ರಸ, ಕರುಳು, ಜಠರ ರಸಗಳಲ್ಲಿಯೂ ಕೋವಿಡ್-19 ವೈರಸ್ ಇರುವುದು ವಿವಿಧ ಅಧ್ಯಯನಗಳಲ್ಲಿ ಕಂಡು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.