ಕೋವಿಡ್ 19 ಸೋಂಕು ಯಾವುದೇ ಜನಾಂಗಕ್ಕೆ ಸೀಮಿತವಲ್ಲ: ಜ್ವಾಲಾ
Team Udayavani, Apr 20, 2020, 6:08 AM IST
ಹೊಸದಿಲ್ಲಿ: ಕೋವಿಡ್ 19 ಸೋಂಕು ಎನ್ನುವುದು ಯಾವುದೇ ಜನಾಂಗ ಅಥವಾ ಧರ್ಮವನ್ನು ನೋಡುತ್ತದೆ ಎಂದು ನನಗನಿಸುವುದಿಲ್ಲ ಎಂದು ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಹೇಳಿದ್ದಾರೆ.
ಭಾರತದಲ್ಲಿ ಕೋವಿಡ್ 19 ವೈರಸ್ ಹರಡುವುದಕ್ಕೆ ಸಂಬಂಧಿಸಿದಂತೆ ಬಬಿತಾ ಪೋಗಟ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಜ್ವಾಲಾ ಕ್ಷಮಿಸಿ ಬಬಿತಾ. ಈ ವೈರಸ್ ಯಾವುದೇ ಜನಾಂಗ ಅಥವಾ ಧರ್ಮವನ್ನು ನೋಡುವುದಿಲ್ಲ. ನಿಮ್ಮ ಹೇಳಿಕೆಯನ್ನು ದಯವಿಟ್ಟು ವಾಪಸ್ ಪಡೆಯಿರಿ. ನಾವು ಕ್ರೀಡಾ ಪಟುಗಳು. ಜಾತ್ಯತೀತವಾಗಿ ನಾವು ನಮ್ಮ ಸುಂದರ ದೇಶವನ್ನು ಪ್ರತಿನಿಧಿಸಿದ್ದೇವೆ. ನಾವು ಗೆದ್ದಾಗ ದೇಶದ ಎಲ್ಲ ಜನ ತಮ್ಮದೇ ಗೆಲುವು ಎಂಬಂತೆ ಸಂಭ್ರಮಿಸುತ್ತಾರೆ ಎಂದು ಹೇಳಿದ್ದಾರೆ.
ಆದರೆ ಪೊಲೀಸರು ಹಾಗೂ ವೈದ್ಯರ ವಿರುದ್ಧ ದಾಳಿ ಮಾಡುವುದನ್ನು ತಾವು ಬೆಂಬಲಿಸುವುದಿಲ್ಲ ಕೋವಿಡ್-19 ಮಹಾಮಾರಿಯನ್ನು ಹೋಗಲಾಡಿಸುವ ಸಲುವಾಗಿ ಇವರು ಹಗಲು ರಾತ್ರಿ ಎನ್ನದೆ ಕುಟುಂಬದವರಿಂದ ದೂರವಿದ್ದು ಶ್ರಮಿಸುತ್ತಿದ್ದಾರೆ. ಅವರನ್ನು ನಾವು ಗೌರವಿಸಬೇಕೇ ವಿನಃ ಅವರ ಸೇವೆಗೆ ಅಡ್ಡಿಪಡಿಸುವಂತಹ ಯಾವುದೇ ಕಾರ್ಯವನ್ನು ಮಾಡಬಾರದು ಎಂದು ಜ್ವಾಲಾ ಗುಟ್ಟಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.