ಕೋವಿಡ್ 19 ಆತಂಕದಿಂದ ಹೋಮ್ ಕ್ವಾರಂಟೈನ್ ಆದ ದೊಡ್ಡಣ್ಣ
Team Udayavani, Jul 9, 2020, 9:10 AM IST
ಕೋವಿಡ್ 19 ಸೋಂಕಿನ ಸಮಸ್ಯೆಯಿಂದ ದೇಶವೇ ತತ್ತರಿಸುತ್ತಿದೆ. ದಿನಪ್ರತಿ ಸೋಂಕಿತರ ಸಂಖ್ಯೆ, ಸಾವನ್ನಪ್ಪುತ್ತಿರುವ ಸಂಖ್ಯೆಯೂ ಏರಿಕೆ ಕಾಣುತ್ತಿದೆ. ಆದರೆ ಮತ್ತೊಂದು ಕಡೆ ಕೋವಿಡ್ ಸೋಂಕಿನ ಪರೋಕ್ಷ ಹೊಡೆತದಿಂದ ಹಲವರು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಭಯ ಸ್ಯಾಂಡಲ್ವುಡ್ ಮಂದಿಯನ್ನೂ ಬಿಟ್ಟಿಲ್ಲ. ಕೆಲ ದಿನಗಳ ಹಿಂದಷ್ಟೇ ಸಂಸದೆ ಸುಮಲತಾ ಅವರಿಗೆ ಕೋವಿಡ್ 19 ಪಾಸಿಟಿವ್ ಬಂದಿದ್ದು, ಇದೀಗ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇವರ ನಿಕಟವರ್ತಿಯಾಗಿದ್ದ ನಿರ್ಮಾಪಕ, ನಟ ರಾಕ್‌ಲೈನ್ ವೆಂಕಟೇಶ್ ಕೂಡ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ಬೆನ್ನಲ್ಲೇ ಹಿರಿಯ ನಟ ದೊಡ್ಡಣ್ಣನಿಗೂ ಕೋವಿಡ್ 19 ಆತಂಕ ಶುರುವಾಗಿದೆ.
ಹೌದು! ದೊಡ್ಡಣ್ಣ ಸಹ ಸುಮಲತಾ, ಹಾಗೂ ರಾಕ್‌ಲೈನ್ ವೆಂಕಟೇಶ್ ಸಂಪರ್ಕದಲ್ಲಿದ್ದು, ಈ ಹಿಂದೆ ಅಂಬರೀಶ್ ಸ್ಮಾರಕ ನಿರ್ಮಾಣ ವಿಚಾರವಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಅವರು ಸ್ವಯಂ ಪ್ರೇರಿತರಾಗಿ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಅಲ್ಲದೇ ಕಲಾವಿದರ ಸಂಘದ ಖಜಾಂಚಿಯಾಗಿರುವುದರಿಂದ ಮನೆಯಿಂದಲೇ ಸಂಘದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ
Sandalwood: 99 ರೂಪಾಯಿಗೆ ಆರಾಮ್ ಸಿನಿಮಾ: ಅರವಿಂದ ಸ್ವಾಮಿ ಹೊಸ ಪ್ಲ್ರಾನ್
Darshan; ಭರ್ಜರಿ ಓಪನಿಂಗ್ ನಿರೀಕ್ಷೆಯಲ್ಲಿ ನವಗ್ರಹ: ರೀರಿಲೀಸ್ ಚಿತ್ರದಲ್ಲಿ ದರ್ಶನ್ ಹವಾ
Renukaswamy Case: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
BBK-11: ಮತ್ತೆ ಬಿಗ್ ಬಾಸ್ ಮನೆಯ ಕಿಂಗ್ ಮೇಕರ್ ಆದ ಹನುಮಂತು
MUST WATCH
ಹೊಸ ಸೇರ್ಪಡೆ
Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್. ಅಶೋಕ್ ಆಗ್ರಹ
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
Nagpur: ರಾಹುಲ್ ಕಾರ್ಯಕ್ರಮದಲ್ಲಿ ಖಾಲಿ ಸಂವಿಧಾನ ಪುಸ್ತಕ ಹಂಚಿಕೆ: ಬಿಜೆಪಿ ಆರೋಪ
Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ ಇಚ್ಛಾಶಕ್ತಿ ಪ್ರದರ್ಶಿಸಲಿ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್ಡಿಕೆ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.