ಕ್ವಾರಂಟೈನ್ ಉಲ್ಲಂಘಿಸುವವರಿಗೆ ಭೂತ ಬಂಗಲೆಯಲ್ಲಿ ಶಿಕ್ಷೆ
Team Udayavani, Apr 29, 2020, 2:06 PM IST
ಜಕಾರ್ತ: ಜಾಗತಿಕವಾಗಿ ಆರ್ಥಿಕತೆ ಕುಸಿಯುತ್ತಿದ್ದರೂ ಪ್ರಜೆಗಳ ಪ್ರಾಣ ಮುಖ್ಯ ಎನ್ನುತ್ತಿವೆ ಕೆಲವು ಸರಕಾರಗಳು. ಇನ್ನು ಕೆಲವು ಸರಕಾರಗಳು ಲಾಕ್ಡೌನ್ಗೆ ರಜಾ ಹೇಳಲು ಮನಸ್ಸು ಮಾಡುತ್ತಿವೆ. ಈ ಮಧ್ಯೆ ಇಂಡೋನೇಷ್ಯಾ ಸರಕಾರ, ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸುವವರಿಗ ಬುದ್ಧಿ ಕಲಿಸಲು ಹೊರಟಿದೆ.
ದಂಡ ವಿಧಿಸಿದರೂ, ಬಂಧನದ ಬಿಸಿ ಇದ್ದರೂ ಪ್ರಯೋಜನವಾಗುತ್ತಿಲ್ಲ. ಇದಕ್ಕಾಗಿ ಇಂಡೋನೇಷ್ಯಾದ ಜಾವಾ ಪ್ರದೇಶದ ರಾಜಕಾರಣಿಯೊಬ್ಬರು ಕ್ಯಾರೆಂಟೈನ್ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೊಸ ಶಿಕ್ಷೆಯನ್ನು ಹುಡುಕಿದ್ದಾರೆ.
ಮಾತು ಕೇಳದ ಸೋಂಕು ಶಂಕಿತರು
ಜಗತ್ತಿನಾದ್ಯಂತ ವಿವಿಧ ದೇಶಗಳಲ್ಲಿ ನಿಯಮ ಉಲ್ಲಂಘಿಸುತ್ತಿರುವವರ ಕಾಟ ಹೆಚ್ಚಾಗಿದೆ. ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಮುಖ್ಯ ಭೂಮಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಮೇಲೆ ಹಲ್ಲೆಯನ್ನೂ ಮಾಡುತ್ತಿದ್ದಾರೆ. ಇಂಡೋನೇಷ್ಯಾದಲ್ಲೂ ಇಂಥ ಘಟನೆಗಳಿವೆ. ಸೋಂಕು ಶಂಕಿತರು ಕ್ವಾರಂಟೈನ್ನಲ್ಲಿ ಇರಬೇಕಾದ್ದು ಕಡ್ಡಾಯ ಎಂದರೂ ಕೆಲವರು ನಿಯಮ ಪಾಲಿಸುತ್ತಿಲ್ಲ. ಯಾವ ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳದೇ ಅಲೆದಾಡುತ್ತಿದ್ದಾರೆ.
ಈ ಧೋರಣೆಯಿಂದ ಬೇಸತ್ತ ಇಲ್ಲಿನ ಸ್ಥಳೀಯ ಸರಕಾರ ಮತ್ತು ಅಧಿಕಾರಿಗಳು ನಿಯಮ ಉಲ್ಲಂಘನೆ ಮಾಡುವವರಿಗೆ ತಕ್ಕ ಪಾಠ ಕಲಿಸ ತೊಡಗಿದ್ದಾರೆ. ನಿಯಮ ಉಲ್ಲಂಘಕರನ್ನು ಬಂಧಿಸಿ ಒಂದೆಡೆ ಕೂಡಿ ಹಾಕಲು ನಿರ್ಧರಿಸಿದ್ದು, ಅದಕ್ಕಾಗಿ ಪಾಳು ಬಿದ್ದ ಮನೆಗಳನ್ನು, ಭೂತ ಬಂಗಲೆಗಳನ್ನು ಆಯ್ದುಕೊಳ್ಳುತ್ತಿದೆ. ಎಲ್ಲ ರೀತಿಯಲ್ಲಿ ತಿಳಿ ಹೇಳಿ, ದಂಡ ವಿಧಿಸಿದರೂ ಜಗ್ಗದ ಮೊಂಡರಿಗೆ ವಿಧಿಸಬೇಕಾದ ಶಿಕ್ಷೆ ಹೇಗಿರಬೇಕು ಎಂಬುದಕ್ಕೆ ಜಾವಾದ ಸ್ಥಳೀಯ ಮುಖಂಡ ಈ ಸಲಹೆ ನೀಡಿದ್ದಾರೆ. ಈಗ ಜಾವಾ ದ್ವೀಪದ ಸೆಪಾಟ್ ಗ್ರಾಮದಲ್ಲಿ ಜಾರಿ ಆಗಿದೆ. ಈಗ ಜಕಾರ್ತ ಜಿಲ್ಲೆಯ ಎಲ್ಲ ಗ್ರಾಮಗಳಿಗೂ ವಿಸ್ತರಿಸಲಾಗಿದೆ.
ಸೆಪಾಟ್ ಗ್ರಾಮದಲ್ಲಿ ಇಂತಹ ಅನೇಕ ಪುರಾತನ ಮನೆಗಳಿವೆ. ದೆವ್ವಗಳ ಕಾಟದ ಕಾರಣಕ್ಕೆ ಆ ಮನೆಗಳಲ್ಲಿ ಜನವಾಸ ಇಲ್ಲ. ಈಗ ಆ ಮನೆಗಳನ್ನು ಸ್ವತ್ಛಗೊಳಿಸಿ ಅಲ್ಲಿ ಈ ಕ್ವಾರಂಟೈನ್ ಉಲ್ಲಂ ಸುವವರನ್ನು ಕರೆದೊಯ್ದು ಈ ಭೂತ ಬಂಗಲೆಗಳಲ್ಲಿ ಕೂಡಿ ಹಾಕಿ, ಹೊರಗಿಂದ ಬೀಗ ಹಾಕತೊಡಗಿದೆ. ಈ ನಿಯಮ ಪರಿಣಾಮ ಬೀರಿದ್ದು, ನಿಯಮ ಉಲ್ಲಂಘಕರ ಸಂಖ್ಯೆ ಕಡಿಮೆಯಾಗತೊಡಗಿದೆ ಎಂದಿವೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.