ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿರುವ ಸರಕಾರ
ಕೋವಿಡ್ 19 ಲಾಕ್‌ಡೌನ್: ಹೈಕೋರ್ಟ್ ಕಲಾಪ ಸ್ಥಗಿತ
Team Udayavani, Apr 7, 2020, 6:05 AM IST
ಬೆಂಗಳೂರು: ಕೋವಿಡ್ 19 ಸೋಂಕು ರಾಜ್ಯಕ್ಕೆ ಮಾರಕವಾಗಿ ಪರಿಣಮಿಸಿದ್ದರೆ ಹೈಕೋರ್ಟ್‌ನಲ್ಲಿ ಹಲವು ಪ್ರಕರಣಗಳಲ್ಲಿ ಸದ್ಯದ ಲಾಕ್‌ಡೌನ್ ಸರಕಾರದ ಪಾಲಿಗೆ “ವರ’ವಾಗಿದೆ.
ರಾಜ್ಯಾದ್ಯಂತ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು, ಬೆಂಗಳೂರಿನಲ್ಲಿ ಅಕ್ರಮ ಕಟ್ಟಡಗಳ ತೆರವು, ಘನತ್ಯಾಜ್ಯ ವಿಲೇವಾರಿ ಮತ್ತಿತರ ಸಾರ್ವಜನಿಕ ಮಹತ್ವದ ಪ್ರಕರಣಗಳಲ್ಲಿ ವಕೀಲರು, ಸಂಘ-ಸಂಸ್ಥೆಗಳು, ವ್ಯಕ್ತಿಗಳು ಸಲ್ಲಿಸಿರುವ ಮತ್ತು ಹೈಕೋರ್ಟ್ ಖುದ್ದು ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸಂಬಂಧಿಸಿದಂತೆ ಮಾರ್ಚ್ ಕೊನೆಯ ವಾರ ಮತ್ತು ಎಪ್ರಿಲ್ ಮೊದಲು ಹಾಗೂ ಎರಡನೇ ವಾರದಲ್ಲಿ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ಗೆ ಅನುಪಾಲನ ವರದಿಗಳನ್ನು ಸಲ್ಲಿಸಬೇಕಿತ್ತು. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸದ್ಯ ಕೋರ್ಟ್ ಕಲಾಪಗಳು ಸ್ಥಗಿತಗೊಂಡಿರುವುದರಿಂದ ರಾಜ್ಯ ಸರಕಾರ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದೆ.
ಹಲವಾರು ಪಿಐಎಲ್‌ಗಳಲ್ಲಿ ಹೈಕೋರ್ಟ್ ರಾಜ್ಯ ಸರಕಾರ, ಅದರ ವಿವಿಧ ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು ಮುಖ್ಯವಾಗಿ ಬಿಬಿಎಂಪಿಯ ಬೆನ್ನಿಗೆ ಬಿದ್ದು ಕೆಲಸ ಮಾಡಿಸುತ್ತಿತ್ತು. ಆದೇಶಗಳ ಪಾಲನೆಗೆ ಗಡುವು ನೀಡಿತ್ತು. ಸರಕಾರದ ವೈಫಲ್ಯಗಳನ್ನು ಕಟು ಮಾತುಗಳಲ್ಲಿ ಟೀಕಿಸಿತ್ತು. ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಚಾಟಿ ಬೀಸಿತ್ತು. ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಎಚ್ಚರಿಕೆ ನೀಡಿತ್ತು. ನ್ಯಾಯಾಲಯದ ಆದೇಶ ಪಾಲಿಸದ ಕೆಲವು ಪ್ರಕರಣಗಳಲ್ಲಿ ತಪ್ಪಿತಸ್ಥ ಅಧಿಕಾರಿಗಳು ಮತ್ತು ಇಲಾಖೆಗಳ ವಿರುದ್ಧ ನ್ಯಾಯಾಂಗ ನಿಂದನೆ ಎಚ್ಚರಿಕೆ ನೀಡಿತ್ತು. ಆನೇಕ ಪ್ರಕರಣಗಳಲ್ಲಿ ಸರಕಾರ ನ್ಯಾಯಾಲಯದ ಮುಂದೆ ಕಾನೂನು ಇಕ್ಕಟ್ಟಿಗೆ ಸಿಕ್ಕಿಕೊಂಡಿತ್ತು. ಇದೀಗ ಅವೆಲ್ಲವೂ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ. ಸರಕಾರ, ಅಧಿಕಾರಿಗಳು ನಿಟ್ಟುಸಿರು ಬಿಡುವಂತಾಗಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ಸಂಬಂಧ ಹೈಕೋರ್ಟ್ ಸ್ವತಃ ದಾಖಲಿಸಿಕೊಂಡಿರುವ ಪಿಐಎಲ್‌ಗೆ ಸಂಬಂಧಿಸಿದಂತೆ ಆದೇಶ ಪಾಲನೆಯ ವರದಿಯನ್ನು ಸರಕಾರ ಹೈಕೋರ್ಟ್‌ನ ಮುಂದಿಡಬೇಕಿತ್ತು. ಅದೇ ರೀತಿ ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಕ್ರಮ ಕಟ್ಟಡಗಳ ತೆರವು ವಿಚಾರ ಸಹ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.
ತಾತ್ಕಾಲಿಕ ರಿಲೀಫ್
ಘನತ್ಯಾಜ್ಯ ವಿಲೇವಾರಿ, ರಸ್ತೆ ಗುಂಡಿಗಳು ಮುಚ್ಚುವುದು, ಜೈಲುಗಳಲ್ಲಿ ಅಧಿಕ ಸಂಖ್ಯೆಯ ಕೈದಿಗಳಿರುವುದು ಮತ್ತು ಮೂಲಸೌಕರ್ಯಗಳ ಕೊರತೆ, ವಿಪತ್ತು ನಿರ್ವಹಣ ಕಾಯ್ದೆ ಅನುಷ್ಠಾನದಲ್ಲಿನ ಲೋಪಗಳು, ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ ಅನುಷ್ಠಾನಕ್ಕೆ ವಿಳಂಬ, ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರ ನೇಮಕಾತಿ ವಿವಾದ, ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ, ಖಾಲಿ ಪೊಲೀಸ್ ಹುದ್ದೆಗಳ ಭರ್ತಿ, ಸರಕು ವಾಹನಗಳಲ್ಲಿ ಪ್ರಯಾಣಿಕರ ಸಂಚಾರ, ಮಕ್ಕಳ ಮೇಲಿನ ಲೈಂಗಿಕ ಶೋಷಣೆ, ಬಾಲ ನ್ಯಾಯ ಕಾಯ್ದೆ ಅನುಷ್ಠಾನ, ಮಕ್ಕಳು, ಗರ್ಭಿಣಿಯರು, ಬಾಣಂತಿಯರಲ್ಲಿ ಅಪೌಷ್ಟಿಕತೆ, ಕಲಬುರಗಿ ಕೋಟೆ ಒತ್ತುವರಿ, ಕೊಳೆಗೇರಿ ನಿವಾಸಿಗಳ ಎತ್ತಂಗಡಿ ಮೊದಲಾದ ಪಿಐಎಲ್‌ಗಳಲ್ಲಿ ಕೋರ್ಟ್ ಆದೇಶಗಳ ಪಾಲನೆ ವಿಚಾರದಲ್ಲಿ ಸರಕಾರಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
Dinner Politics: ಡಿಸಿಎಂ ಡಿಕೆಶಿ ದೂರು; ಕಾಂಗ್ರೆಸ್ ಡಿನ್ನರ್‌ಗೆ ಹೈ ಕಮಾಂಡ್ ತಡೆ
Naxal Surrender: ಕೊನೆಗೂ ಕರ್ನಾಟಕ ರಾಜ್ಯ ಸಂಪೂರ್ಣ ನಕ್ಸಲ್ ಮುಕ್ತವಾಯಿತೇ?
Budget Allocation: ಇನ್ನೆರಡು ತಿಂಗಳಲ್ಲಿ ಶೇ. 45 ಪ್ರಗತಿ ಸಾಧ್ಯವೇ?: ಆರ್.ಅಶೋಕ್
Politics Discussion: ದಿಲ್ಲಿಯಲ್ಲಿ ಜೆಡಿಎಸ್ ಶಾಸಕರು-ಡಿ.ಕೆ.ಶಿವಕುಮಾರ್ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Yakshagana: ಕಾಲಮಿತಿ, ಕಾಲಗತಿಯ ಕಾಲದ ಯಕ್ಷಗಾನ-ಚಿಂತನೆ
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
Dinner Politics: ಡಿಸಿಎಂ ಡಿಕೆಶಿ ದೂರು; ಕಾಂಗ್ರೆಸ್ ಡಿನ್ನರ್‌ಗೆ ಹೈ ಕಮಾಂಡ್ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.