ಕೋವಿಡ್ 19: ಹಳೆಯ ಔಷಧದಿಂದ ಹೊಸದು!
Team Udayavani, May 2, 2020, 2:19 PM IST
ಮಣಿಪಾಲ: ವಿಶ್ವದಲ್ಲೆಡೆ ಕೋವಿಡ್-19 ಅನ್ನು ಹತ್ತಿಕ್ಕಲು ಹತ್ತಾರು ಸಂಶೋಧಕರ ತಂಡ ಅಧ್ಯಯನ ನಡೆಸುತ್ತಿದೆ. ಆದರೆ ಸದ್ಯದ ಸ್ಥಿತಿಯಲ್ಲಿನ ಔಷಧದ ಕೊರತೆ ಪ್ರಸ್ತುತ ಲಭ್ಯವಿರುವ ಸಂಪನ್ಮೂಲಗಳ ಹೊಸ ಮಾದರಿಯ ಬಳಕೆಗೆ ಉತ್ತೇಜಿಸುತ್ತಿದೆಯೇ? ಈ ಅನಿವಾರ್ಯ ಸೃಷ್ಟಿಯಾಗಿದೆಯೇ?
ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳನ್ನು ಕಂಡರೆ ಹೌದು ಎನ್ನುವಂತಾಗಿದೆ. ಈ ಸಂಬಂಧ ದಿ ನ್ಯೂಯಾರ್ಕ್ ಟೈಮ್ಸ್ ವರದಿಯೊಂದು ಮಾಡಿದೆ.
1950ರ ಅಸುಪಾಸಿನಲ್ಲಿ ಮನೋವ್ಯಾಧಿಗೆ ಕಂಡು ಹಿಡಿಯಲಾದ ಕ್ಲೋರೋ ಪ್ರೋಮೋಜೋನ್ 7 ದಶಕಗಳ ನಂತರ ಅಂದರೆ ಇಂದಿಗೂ ಆಂಟಿ-ಸೈಕೋಟಿಕ್ ಮದ್ದಾಗಿ ಬಳಸಲಾಗುತ್ತದೆ. ಕೇವಲ ಮನೋವ್ಯಾಧಿಗೆ ಸೀಮಿತವಾಗಿ ಉಳಿಯದ ಕ್ಲೋರೋಪ್ರೋಮೋಜೋನ್ ಅನ್ನು ಕೆಲವು ವೈರಲ್ ಸೋಂಕುಗಳಿಗೆ ಬಳಸಲಾಗುತ್ತಿದೆ.
ಇಂತಹ ಅದೆಷ್ಟೋ ಔಷಧಗಳಲ್ಲಿ , ಲಸಿಕೆಗಳಲ್ಲಿ ಹಲವು ರೋಗಗಳನ್ನು ನಿಯಂತ್ರಿಸುವ ಶಕ್ತಿ ಅಡಗಿದೆ ಎಂಬ ಅಂಶ ಬೆಳಕಿಗೆ ಬಂದಿದ್ದು, ಹಿಂದಿನ ಸಂಶೋಧನೆಗಳ ಇತಿಹಾಸ ಕೊಟ್ಟ ಸುಳಿವನ್ನು ಗಮನಿಸಿದ ಸಂಶೋಧಕರ ತಂಡ ಹೊಸ ಪ್ರಯತ್ನ ಆರಂಭಿಸಿದೆ.
ಈಗಾಗಲೇ ಚಾಲ್ತಿಯಲ್ಲಿರುವ ಔಷಧಗಳಿಗೆ ಕೋವಿಡ್-19ನ ವಿರುದ್ಧ ಹೋರಾಡುವ ಸಾಮರ್ಥ್ಯ ಇದೆಯೇ ಎಂಬುದನ್ನು ಮರು ಸಂಶೋಧನೆ ಮಾಡಲು ಮುಂದಾಗಿದೆ. ಈ ವಿಧಾನವನ್ನು ಡ್ರಗ್ ರೀ ಪರ್ಪಸಿಂಗ್ ಎಂದು ಕರೆಯುತ್ತಾರೆ ಎನ್ನಲಾಗಿದೆ.
ಮತ್ತೂಂದು ಔಷಧ
ಹೀಗೆಯೇ ಮತ್ತೂಂದು ಔಷಧ ಈಗ ನಿರ್ದಿಷ್ಟ ಉದ್ದೇಶಕ್ಕೆ ಬಳಸಲಾಗುತ್ತಿದೆ. ಅದರಲ್ಲೂ ಕೋವಿಡ್-19 ಸೋಂಕನ್ನು ಮಣಿಸುವ ಶಕ್ತಿಯಿದೆ. ಅಲ್ಲದೇ ಮರು ಸೋಂಕನ್ನು ತಡೆಯಬಹುದು ಎಂದು ವಿಜ್ಞಾನಿಗಳು ಸಂಶೋಧನೆ ನಿರತರಾಗಿದ್ದಾರೆ.
ಈ ವಿಧಾನ ಭಾಗಶಃ ಯಶಸ್ವಿಯಾಗಬಹುದು ಎಂಬುದಕ್ಕೆ ಹಲವಾರು ಉದಾಹರಣೆಗಳಿದ್ದು, ಹಿಂದೆ ಕ್ಯಾನ್ಸರ್ ಚಿಕಿತ್ಸೆಗೆ ಎಂದು ಕಂಡುಹಿಡಿಯಲಾದ ಔಷಧವನ್ನು ಎಚ್.ಐ.ವಿ. ಮೊದಲ ಬಾರಿಗೆ ಕಾಣಸಿಕೊಂಡಾಗ ಅದರ ವಿರುದ್ಧ ಪ್ರಯೋಗ ಮಾಡಲಾಗಿತ್ತು. ಅಚ್ಚರಿ ಎಂಬಂತೆ ಈ ಲಸಿಕೆಯಿಂದ ಪ್ರಯೋಜನವಾಗಿತ್ತಲ್ಲದೆ, ಈ ಔಷಧ ಬಳಕೆಗೆ ಯುಸ್‌ನ ಆಹಾರ ಮತ್ತು ಔಷಧ ಆಡಳಿತ ಕೇಂದ್ರ ಹಸುರು ನಿಶಾನೆ ತೋರಿಸಿತ್ತು. ಇಂತಹ ಹತ್ತು ಹಲವಾರು ನಿದರ್ಶನಗಳು ಈ ಹಿಂದೆ ನಡೆದಿದ್ದು, ಇದೀಗ ಡಾ| ಚಂದಾ ಮತ್ತು ಇತರ ಸಂಶೋಧಕರುಗಳ ತಂಡ ಸಾವಿರಾರು ಔಷಧಗಳನ್ನು ಮರು ಸಂಶೋಧನೆಗೆ ಒಳಪಡಿಸಿದ್ದು, ಕೋವಿಡ್-19ನ ವಿರುದ್ಧ ಹೋರಾಡುವ ಅಸ್ತ್ರಕ್ಕಾಗಿ ಹುಡುಕಾಟ ನಡೆಸಿದೆ.
ಪ್ರಸ್ತುತ ಭಾರತವೂ ಸಹಿತ ಹಲವು ರಾಷ್ಟ್ರಗಳಲ್ಲಿ ಕೋವಿಡ್ 19 ಗೆ ಲಸಿಕೆ ಸಂಶೋಧನೆ ನಡೆಯುತ್ತಿದೆ. ಪ್ರತಿ ರಾಷ್ಟ್ರಗಳ ಸಂಶೋಧಕರು ಇದರಲ್ಲಿ ಕಾರ್ಯ ನಿರತರಾಗಿದ್ದು, ಯಾರ ಪಾಲಾಗಬಹುದು ಎಂಬ ಕುತೂಹಲವನ್ನೂ ಮೂಡಿಸಿದೆ. ಚೀನ, ದಕ್ಷಿಣ ಕೊರಿಯಾ, ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ರಾಷ್ಟ್ರಗಳು ಈ ಪಟ್ಟಿಯಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.