ಸೌತ್ ಬ್ರಾಂಕ್ಸ್‌ನಲ್ಲೀಗ ಪ್ರತಿದಿನವೂ ಸರದಿ ಸಾಲು
Team Udayavani, May 1, 2020, 2:38 PM IST
ಮಣಿಪಾಲ: ಕೋವಿಡ್ 19ರಿಂದ ನಲುಗಿ ಹೋಗಿರುವ ರಾಷ್ಟ್ರಗಳಲ್ಲಿ ಒಂದಾದ ಅಮೆರಿಕದಲ್ಲಿ ಹೆಚ್ಚು ಸಾವುನೋವು ಸಂಭವಿಸಿದ ನಗರ ನ್ಯೂಯಾರ್ಕ್. ಇಲ್ಲಿನ ಸೌತ್ ಬ್ರಾಂಕ್ಸ್‌ನಲ್ಲಿ ಈಗ ಕಣ್ಣು ಹಾಯಿಸಿದಲ್ಲೆಲ್ಲ ಜನರು ಕಿ.ಮೀ. ಗಟ್ಟಲೆ ಉದ್ದದ ಸಾಲಿನಲ್ಲಿ ನಿಂತಂತೆ ಕಂಡು ಬರುತ್ತಿದೆ. ಸೂರ್ಯ ಉದಯಿಸುವ ಮೊದಲೇ ಈ ಸಾಲುಗಳು ರೂಪುಗೊಂಡಿರುತ್ತವೆ. ಪ್ರತಿ ಸೇವೆಗೂ ತಾಸುಗಟ್ಟಲೆ ಕಾಯಬೇಕಿದೆ.
ಅಮೆರಿಕದಲ್ಲಿ ಈ ಸ್ಥಿತಿ ಬರುತ್ತದೆಂದು ಅವರ್ಯಾರೂ ಭಾವಿಸಿರಲಿಕ್ಕಿಲ್ಲ. ತಾವು ಮುಂದುವರಿದ ರಾಷ್ಟ್ರದ ಪ್ರಜೆಗಳು ಎಂಬ ಅಹಂ ಹಾಗೆ ಯೋಚಿಸುವುದನ್ನು ತಡೆದಿರಲೂ ಬಹುದು. ಈಗಿನ ವಾಸ್ತವ ಮತ್ತೆ ಆಲೋಚಿಸುವತ್ತ ಪ್ರೇರೇಪಿಸಿದೆ.
ಸೌತ್ ಬ್ರಾಂಕ್ಸ್‌ನ ಸ್ಟ್ರೀಟ್ ನಂಬರ್ 149ರಲ್ಲಿ 70ರ ಹರೆಯದ ಎಡ್ವರ್ಡ್ ಹಾಲ್ಸ್ ಎಂಬವರು ಅಗತ್ಯ ಕೆಲಸಕ್ಕಾಗಿ ಬಂದಿದ್ದರು. ಹಿಂದಿನ ದಿನ ಕಂಡಿದ್ದ ಸರತಿ ಸಾಲು ಅವರನ್ನು ಮುಂಜಾನೆಯೇ ಬಂದು ನಿಲ್ಲುವಂತೆ ಮಾಡಿತ್ತು. ಅವರು 7.30ಕ್ಕೆ ಬರಲು ಯೋಚಿಸಿದ್ದರು. ಆದರೆ ಸಹೋದರಿ 7 ಗಂಟೆಗೇ ಕಳುಹಿಸಿದ್ದರು. ಇದು ಅನಿವಾರ್ಯತೆಯನ್ನು ಹೇಳುತ್ತಿರುವಂಥ ಪ್ರಸಂಗ.
“ಸಾಲಲ್ಲೇ ಬನ್ನಿ, ಸರತಿ ಸಾಲನ್ನು ತಪ್ಪಿಸಬೇಡಿ, ಸಾವಧಾನ’ ಇಂಥ ಮಾತುಗಳು ಅಮೆರಿಕದಲ್ಲೂ ಕೇಳಿ ಬರುತ್ತಿದೆ. ಜನರು ನೀರನ್ನೂ ಕುಡಿಯಲು ಸಾಲಿನಿಂದ ಹೊರ ಹೋಗುತ್ತಿಲ್ಲ. ಈ ಪೈಕಿ 70, 80ರ ಹರೆಯದ ವೃದ್ಧರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವರದಿ ಮಾಡಿದೆ ದಿ ವಾಷಿಂಗ್ಟನ್ ಪೋಸ್ಟ್.
ಔಷಧ ಅಂಗಡಿ, ಎಟಿಎಂ, ಅಗತ್ಯ ವಸ್ತುಗಳ ಅಂಗಡಿ, ಬ್ಯಾಂಕ್, ಅಂಚೆ ಕಚೇರಿ, ವಿವಿಧ ಬಿಲ್ ಪಾವತಿ ಹೀಗೆ ಪ್ರತಿ ಸೇವೆಗೂ ತಾಸುಗಟ್ಟಲೆ ಕಾಯ ಬೇಕಾದುದು ಅನಿವಾರ್ಯತೆ.
ಇಬ್ರಾಹಿಂ ಸನೋಗಾ ಎಂಬ ಟ್ಯಾಕ್ಸಿ ಡ್ರೈವರ್ ನ ಮಾತು ಕೇಳಿ. ತಾನು ಒಂದು ಬಾಡಿಗೆಗಾಗಿ ವಿಮಾನ ನಿಲ್ದಾಣದ ಟ್ಯಾಕ್ಸಿ ಸಾಲಲ್ಲಿ ಸುಮಾರು 6 ತಾಸು ಕಾಯಬೇಕಾಗಿದೆ. ಇಂಥ ಅನುಭವ ಎಲ್ಲರಿಗೂ ಆಗಿದೆಯಂತೆ. ನಿರುದ್ಯೋಗ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ದೂರವಾಣಿಯಲ್ಲಿ ಓರ್ವನಿಗೆ ಸುಮಾರು 4 ತಾಸು ಬೇಕಾಗುತ್ತಂತೆ.
ಪಟಾಪಟ್ ಬದುಕಿಗೆ ಒಗ್ಗಿಕೊಂಡಿದ್ದ ಜೀವಗಳು ಈಗ ನಿಧಾನಗತಿಗೆ ಹೊಂದಿಕೊಳ್ಳಬೇಕಿದೆ. ತಾಳ್ಮೆಯನ್ನೇ ಅಸ್ತ್ರವಾಗಿಟ್ಟುಕೊಳ್ಳಬೇಕಿದೆ. ಬದಲಾಗಿ ಆಕ್ರೋಶ ವ್ಯಕ್ತಪಡಿಸುವುದರಿಂದ ಲಾಭವಿಲ್ಲ ಎಂಬುದೂ ಅರ್ಥವಾಗುತ್ತಿದೆ. ಧ್ವನಿವರ್ಧಕದಲ್ಲಿ ಪ್ರಕಟನೆ ಕೇಳಿ ಬರುತ್ತಿದ್ದಂತೆ ಜನರೆಲ್ಲ ಸಮುಚ್ಚಯಗಳಿಂದ ಹೊರಗೆ ಬಂದು ಸಮುದಾಯದ ವತಿಯಿಂದ ನೀಡಲಾಗುವ ಊಟಕ್ಕೆ ಸಾಲು ನಿಲ್ಲುತ್ತಿದ್ದಾರೆ. ಜನರು ತಮ್ಮ ತಮ್ಮ ಅನುಭವ ವಿನಿಮಯಕ್ಕೆ ತೊಡಗಿದ್ದಾರೆ. ಒಬ್ಬೊಬ್ಬರದೂ ಒಂದೊಂದು ರೀತಿ. ಆದರೆ ಎಲ್ಲರದೂ ಕಷ್ಟದ ಸ್ಥಿತಿಯೇ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.