ಕೋವಿಡ್-19 ನಿಯಂತ್ರಣ: ಕಟ್ಟುನಿಟ್ಟಿನ ವಿಶೇಷ ಕ್ರಮ ಪಾಲನೆಗೆ ಡಿಸಿ ಆದೇಶ
Team Udayavani, Jun 30, 2020, 6:23 AM IST
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕಂಟೈನ್‌ಮೆಂಟ್ ವಲಯಗಳಲ್ಲಿ ಕೆಲವೊಂದು ನಿಬಂಧನೆಗಳನ್ನು ಹೇರುವುದು ಮತ್ತು ಕಂಟೈನ್‌ಮೆಂಟ್ ಹೊರವಲಯಗಳಲ್ಲಿ ಕೆಲವು ಚಟುವಟಿಕೆಗಳ ನಿರ್ಬಂಧಗಳನ್ನು ಸಡಿಲಗೊಳಿಸುವುದು ಸಾರ್ವಜನಿಕ ಹಿತದೃಷ್ಟಿಯಿಂದ ಅತಿ ಆವಶ್ಯಕವೆಂದು ಕಂಡುಬಂದಿದ್ದು ಅದರಂತೆ ಜಿಲ್ಲೆಯಾದ್ಯಂತ ಮುಂದಿನ ಆದೇಶದವರೆಗೆ ಕೆಳಗಿನಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶಿಸಿದ್ದಾರೆ.
ಕಂಟೈನ್‌ಮೆಂಟ್ ವಲಯಗಳಲ್ಲಿ
-ಕಂಟೈನ್‌ಮೆಂಟ್ ವಲಯಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಇರುತ್ತದೆ.
-ವೈದ್ಯಕೀಯ ತುರ್ತು ಸೇವೆಗಳು ಮತ್ತು ಆವಶ್ಯಕತೆಗಳು ಹಾಗೂ ಅಗತ್ಯ ವಸ್ತುಗಳು ಮತ್ತು ಸೇವೆಗಳ ಪೂರೈಕೆ ಗಳನ್ನು ಕಾಪಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಇವುಗಳ ಹೊರತು ಕಂಟೈನ್‌ಮೆಂಟ್ ವಲಯದ ಒಳಗೆ ಹಾಗೂ ಹೊರಗೆ ಜನರ ಚಲನ ವಲನಗಳನ್ನು ನಿಷೇಧಿಸಲಾಗಿದೆ.
ಕಂಟೈನ್‌ಮೆಂಟ್ ಹೊರಗಿನ ಪ್ರದೇಶ
ಕಂಟೈನ್‌ಮೆಂಟ್ ವಲಯಗಳ ಹೊರಗಿನ ಪ್ರದೇಶದಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ಹೊರತುಪಡಿಸಿ ಎಲ್ಲ ಚಟುವಟಿಕೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕಾಲಕಾಲಕ್ಕೆ ಹೊರಡಿಸಿದ ಸೂಚನೆಗಳು ಮತ್ತು ಕಾರ್ಯಾಚರಣೆಯ ಕಾರ್ಯವಿಧಾನಗಳ ಷರತ್ತುಗಳೊಂದಿಗೆ ನಡೆಸಲು ಅನುಮತಿಸಲಾಗಿದೆ. ಆದರೆ ಸಾರ್ವಜನಿಕರಿಗೆ ಧಾರ್ಮಿಕ ಸ್ಥಳಗಳು /ಪೂಜಾ ಸ್ಥಳಗಳು, ಹೊಟೇಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ಅತಿಥ್ಯ ಸೇವೆಗಳು, ಶಾಪಿಂಗ್ ಮಾಲ್‌ಗಳು ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಮತಿಸಲಾಗಿದೆ. ಈ ಸಂಬಂಧ ಆರೋಗ್ಯ ಇಲಾಖೆಗಳಿಂದ ಹೊರಡಿಸಲಾದ ಮಾರ್ಗಸೂಚಿಯ ಷರತ್ತುಗಳನ್ನು ಪಾಲಿಸಬೇಕು.
ಕಂಟೈನ್‌ಮೆಂಟ್ ವಲಯ- ಹೊರ ವಲಯ
– ಸಾರ್ವಜನಿಕರು ಎಲ್ಲ ಸಾರ್ವಜನಿಕ ಸªಳಗಳಲ್ಲಿ ಮುಖಗವಸನ್ನು ಕಡ್ಡಾಯವಾಗಿ ಧರಿಸಬೇಕು.
– ಸ್ಥಳೀಯ ಪ್ರಾಧಿಕಾರಗಳು ಅದರ ಕಾನೂನು ಗಳು, ನಿಯಮಗಳು ಅಥವಾ ನಿಬಂಧನೆಗಳಿಗೆ ಅನುಗುಣವಾಗಿ ಸಾರ್ವಜನಿಕ ಸ್ಥªಳಗಳಲ್ಲಿ ಉಗಿಯುವುದನ್ನು ನಿರ್ಬಂಧಿಸಿದೆ ಹಾಗೂ ಇದರ ಉಲ್ಲಂಘನೆಗಾಗಿ ನಿಗದಿಪಡಿಸಿದ ದಂಡ ವನ್ನು ವಿಧಿಸಲಾಗುವುದು.
– ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಗುಟ್ಕಾ, ತಂಬಾಕು ಇತ್ಯಾದಿಗಳ ಬಳಕೆಗೆ ಅವಕಾಶವಿಲ್ಲ.
– ಬೃಹತ್ ಸಾರ್ವಜನಿಕ ಸಭೆಗಳು /ಒಟ್ಟುಗೂಡು ವಿಕೆಗಳನ್ನು ನಿಷೇಧಿಸಲಾಗಿದೆ.
– ಎಲ್ಲ ರಾಜಕೀಯ / ಸಾಮಾಜಿಕ /ಕ್ರೀಡಾ/ ಮನೋರಂಜನಾ/ಶೈಕ್ಷಣಿಕ /ಸಾಂಸ್ಕೃತಿಕ ಮತ್ತು
ಧಾರ್ಮಿಕ ಮತ್ತು ಇತರ ಜನಸೇರುವ ಕಾರ್ಯ ಕ್ರಮಗಳನ್ನು ನಿರ್ಬಂಧಿಸಿದೆ.
– ನಾಟಕ, ಯಕ್ಷಗಾನಗಳನ್ನು ನಡೆಸುವಂತಿಲ್ಲ.
– ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯ ಗಳು, ವಾಣಿಜ್ಯ ಶಾಲೆಗಳನ್ನು, ಟ್ಯುಟೋರಿಯಲ್ಸ್ ಮತ್ತು ಕೋಚಿಂಗ್ ಸೆಂಟರ್‌ಗಳನ್ನು ಬಂದ್ ಮಾಡಲಾಗಿದ್ದು ಅವುಗಳನ್ನು ತೆರೆಯಬಾರದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.