ಕೋವಿಡ್ 19 ಹೊಡೆತ: ಕರಾವಳಿ ಅಭಿವೃದ್ಧಿಗೆ ಕರಿಛಾಯೆ!
ಸಂಸದರ ಅನುದಾನಕ್ಕೆ ಕತ್ತರಿ ; ಹೊಸ ಹೂಡಿಕೆಗಳಿಗೂ ಕಂಪೆನಿಗಳ ಹಿಂದೇಟು
Team Udayavani, Apr 28, 2020, 6:35 AM IST
ಸಾಂದರ್ಭಿಕ ಚಿತ್ರ..
ಮಂಗಳೂರು: ಕೋವಿಡ್ 19 ಹಾವಳಿಯಿಂದಾಗಿ ದೇಶದ ಅಭಿವೃದ್ಧಿ ಪರ್ವಕ್ಕೆ ಬಹುದೊಡ್ಡ ಪೆಟ್ಟು ಬಿದ್ದಿದೆ. ಭವಿಷ್ಯದಲ್ಲಿ ಕರಾವಳಿಯ ಅಭಿವೃದ್ಧಿ ಕಾಮಗಾರಿಗಳಿಗೆ ಕರಿಛಾಯೆ ಎದುರಾಗುವ ಸಂಭವವಿದೆ.
ಸರಕಾರಿ ಕಾಮಗಾರಿಗಳಿಗೆ ಬಂಡವಾಳ ಹೂಡಲು ಸರಕಾರ ಹಿಂದೆ – ಮುಂದೆ ನೋಡುವ ಪರಿಸ್ಥಿತಿ ಇದ್ದರೆ ಖಾಸಗಿ ಕಂಪೆನಿ, ಕೈಗಾರಿಕೆಗಳು ಹೊಸ ಯೋಜನೆ ಕೈಗೆತ್ತಿಕೊಳ್ಳಲು ಹಿಂದೇಟು ಹಾಕುವ ಸಾಧ್ಯತೆ ಅಧಿಕ.
ಸಂಸದರ ನಿಧಿಯನ್ನು ಎರಡು ಆರ್ಥಿಕ ವರ್ಷಗಳ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ಈ ಮೂಲಕ ಅಭಿವೃದ್ಧಿಗಾಗಿ ಸಿಗುವ 10 ಕೋ.ರೂ.ಗಳಿಗೂ ಕತ್ತರಿ ಬೀಳಲಿದೆ. ಈ ಅನುದಾನದಲ್ಲಿ ಆಗಬೇಕಾದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಳ್ಳಲಿವೆ. ಶಾಸಕರ ನಿಧಿಯೂ ಸ್ಥಗಿತಗೊಳ್ಳುವ ಸಾಧ್ಯತೆ ಇರುವುದರಿಂದ ಕರಾವಳಿಯ ಹೊಸ ಯೋಜನೆಗಳಿಗೆ ಅನುದಾನದ ಕೊರತೆ ಎದುರಾಗಲಿದೆ.
ಸ್ಥಳೀಯಾಡಳಿತಗಳ ಅನುದಾನದಲ್ಲಿಯೂ ಕಡಿತ ಸೂತ್ರ ಜಾರಿಯಾಗಬಹುದು. ಇದರಿಂದಲೂ ಯೋಜನೆಗಳಿಗೆ ಅನುದಾನ ಕೊರತೆ ಎದುರಾಗಬಹುದು.
ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಬರುವ ವಿಶೇಷ ಅನುದಾನಗಳೂ ಕಡಿತವಾಗುವ ಸಾಧ್ಯತೆ ಯಿದ್ದು, ಕರಾವಳಿಯ ಹೆದ್ದಾರಿ, ರೈಲ್ವೇ ಯೋಜನೆಗಳ ವೇಗಕ್ಕೆ ಅಡ್ಡಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಎಂಆರ್‌ಪಿಎಲ್ ಸಹಿತ ಪ್ರತಿಷ್ಠಿತ ಕೈಗಾರಿಕೆಗಳು ಹೊಸ ಹೂಡಿಕೆಗೆ ಮನಸ್ಸು ಮಾಡುವ ಕಾಲದಲ್ಲಿ ಮತ್ತು ರಿಯಲ್ ಎಸ್ಟೇಟ್ ಚೇತರಿಕೆ ಕಾಣಬಹುದಾದ ಸಂದರ್ಭದಲ್ಲಿ ಕೋವಿಡ್ 19 ಹೊಡೆತ ಕರಾವಳಿಯ ಆರ್ಥಿಕ ರಂಗಕ್ಕೆ ಹಿನ್ನಡೆ ಎಂದೇ ಹೇಳಬೇಕು. ಕರಾವಳಿಯ ಸಾವಿರಾರು ಸಣ್ಣ ಕೈಗಾರಿಕೆ, ಕಂಪೆನಿ, ಸಂಸ್ಥೆಗಳ ಮುಂದಿನ ಹೆಜ್ಜೆ ಮತ್ತು ಅಲ್ಲಿರುವ ಕಾರ್ಮಿಕರ ಉದ್ಯೋಗವೂ ಪ್ರಶ್ನಾರ್ಥಕ ಚಿಹ್ನೆಯಡಿ ಇವೆ.
ಇಲಾಖೆ ಅನುದಾನಕ್ಕೆ ಕತ್ತರಿ
ಸರಕಾರಿ ಇಲಾಖೆಗಳಿಗೆ ವಾರ್ಷಿಕ ನಿಗದಿತ ಅನುದಾನಕ್ಕೂ ಕತ್ತರಿ ಪ್ರಯೋಗ ನಡೆಯುವ ಸಾಧ್ಯತೆ ದಟ್ಟವಾಗಿದೆ. ಕೆಲವು ಇಲಾಖೆಗಳ ಅನುದಾನವನ್ನು ಕೋವಿಡ್ 19 ನಿಭಾವಣೆಗಾಗಿ ಬಳಕೆ ಮಾಡಲಾಗುವುದು ಎಂದು ಉಲ್ಲೇಖೀಸಲಾಗಿದೆ. ಕಳೆದ ಮಳೆಗಾಲ ಕರಾವಳಿಯ ವಿವಿಧೆಡೆ ಸಂಭವಿಸಿದ ಅನಾಹುತಗಳ ಕಹಿ ನೆನಪು ಮಾಸುವ ಮುನ್ನವೇ ಕೋವಿಡ್ 19 ಎದುರಾಗಿದೆ. ಇನ್ನೊಂದು ಮಳೆಗಾಲವೂ ಸನಿಹದಲ್ಲಿದೆ. ಈ ಬಾರಿ ಮಳೆ ಪರಿಸ್ಥಿತಿ ಹೇಗಿರಬಹುದು ಎಂಬ ಆತಂಕವೂ ಸಹಜ.
ಕೋವಿಡ್ 19 ದಿಂದ ಕರಾವಳಿ ಅಭಿವೃದ್ಧಿಯ ಎಲ್ಲ ವಿಭಾಗಗಳಿಗೆ ಹೊಡೆತ ಬಿದ್ದಿದೆ. ಆರ್ಥಿಕತೆ ಮತ್ತೆ ಚೇತರಿಕೆ ಕಾಣಲು ಸಾಕಷ್ಟು ಸಮಯ ಬೇಕಾಗಬಹುದು. ಸರಕಾರ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುವ ಬಹುಮುಖ್ಯ ಹೆಜ್ಜೆಗಳ ಮೇಲೆ ನಿರೀಕ್ಷೆಯಿದೆ.
– ಐಸಾಕ್ ವಾಝ್,
ಅಧ್ಯಕ್ಷರು, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.