ರಿಕ್ಷಾ , ಟ್ಯಾಕ್ಸಿ ಚಾಲಕರ ಬದುಕಿಗೆ ಕೋವಿಡ್ 19 ಹೊಡೆತ
ತಿಂಗಳಿನಿಂದ ಆದಾಯವಿಲ್ಲ, ಸಾಲ ಸುಸ್ತಿಯಾಗುತ್ತಿದೆ
Team Udayavani, Apr 17, 2020, 6:31 AM IST
ಸಾಂದರ್ಭಿಕ ಚಿತ್ರ.
ವಿಶೇಷ ವರದಿ-ಮಂಗಳೂರು: ನಗರ ಜೀವನಕ್ಕೆ ಸಂಪರ್ಕ ಸೇತುವಾಗಿ ಬೆಸೆದು ಕೊಂಡಿದ್ದ ರಿಕ್ಷಾ ಹಾಗೂ ಟ್ಯಾಕ್ಸಿಗಳು ಈಗ ಕೋವಿಡ್ 19 ಕಾರಣದಿಂದ ಸಂಚಾರ ಸ್ಥಗಿತಗೊಳಿಸಿವೆ. ಪರಿಣಾಮ ಇದರಿಂದಲೇ ಬದುಕು ಕಟ್ಟಿಕೊಂಡಿರುವ ಸಾವಿರಾರು ಚಾಲಕರು ಇಂದು ಒಂದೊತ್ತಿನ ತುತ್ತಿಗೂ ಪರದಾಡುವ ಸ್ಥಿತಿಯಲ್ಲಿದ್ದಾರೆ.
ಮೊದಲ ಹಂತದ ಲಾಕ್‌ಡೌನ್ ಜಾರಿಗೂ ಮೊದಲೇ ಮಂಗಳೂರಿನಲ್ಲಿ ರಿಕ್ಷಾ, ಟ್ಯಾಕ್ಸಿ ಸಂಚಾರಕ್ಕೆ ಬ್ರೇಕ್ ಬಿದ್ದಿತ್ತು. ಈಗ ಎರಡನೇ ಹಂತದ ಲಾಕ್ ಡೌನ್ ಜಾರಿಯಲ್ಲಿದೆ. ಹೀಗಾಗಿ ಮೇ 3ರ ವರೆಗೂ ರಿಕ್ಷಾ, ಟ್ಯಾಕ್ಸಿಗಳು ರಸ್ತೆಗಿಳಿಯು ವಂತಿಲ್ಲ. ಇದರಿಂದ ಸಾವಿರಾರು ಮಂದಿ ಉದ್ಯೋಗ ವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ.
ಸಾರಿಗೆ ಇಲಾಖೆಯ ಮೂಲಗಳ ಪ್ರಕಾರ ಮಂಗಳೂರು ಹಾಗೂ ಸುತ್ತ ಮುತ್ತಲ ವ್ಯಾಪ್ತಿಯಲ್ಲಿ 6,000ಕ್ಕೂ ಅಧಿಕ ರಿಕ್ಷಾಗಳು ಹಾಗೂ ಸುಮಾರು 2,000ಕ್ಕೂ ಅಧಿಕ ಟ್ಯಾಕ್ಸಿಗಳಿವೆ. ಇವುಗಳಲ್ಲಿ ಗರಿಷ್ಠ ಪ್ರಮಾಣದ ಚಾಲಕರು ದಿನದ ಖರ್ಚನ್ನು ರಿಕ್ಷಾ, ಟ್ಯಾಕ್ಸಿ ದುಡಿಮೆಯಿಂದಲೇ ನಿಭಾ ಯಿಸುತ್ತಿದ್ದಾರೆ.
ದಿನದೂಡುವುದೇ ಕಷ್ಟ
ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಅಥವಾ ಹಂಪನ ಕಟ್ಟೆ, ಜ್ಯೋತಿ, ಕಂಕನಾಡಿ, ಪಂಪ್‌ವೆಲ್ ಸಹಿತ ಬಹುಭಾಗಗಳಲ್ಲಿ ರಾತ್ರಿ-ಹಗಲು ಪಾಳಿಯಲ್ಲಿ ದುಡಿಯುವ ಸಾವಿರಾರು ರಿಕ್ಷಾದವರಿಗೆ ಈಗ ದಿನದೂಡುವುದೇ ಕಷ್ಟ ವಾಗಿದೆ. ಆದಾಯವಿಲ್ಲದೆ ಹೊಟ್ಟೆ ತುಂಬಿ ಸುವುದೇ ಕಷ್ಟವಾಗಿದೆ. ಅವರು ಬದುಕಿಗಾಗಿ ಹೋರಾಡುವ ಕಾಲ ಬಂದಿದೆ. ಇದೇ ಸ್ಥಿತಿ ಟ್ಯಾಕ್ಸಿ ಚಾಲಕರದ್ದೂ ಆಗಿದೆ.
ಜನಪ್ರತಿನಿಧಿಗಳು ತತ್‌ಕ್ಷಣಕ್ಕೆ ಕೆಲವ ರಿಗೆ ಆಹಾರ ಕಿಟ್ ಒದಗಿಸಿದ್ದಾರೆ. ಆದರೆ ಶಾಶ್ವತವಾಗಿ ಅವರ ಬದುಕು ಕಟ್ಟಿಕೊಳ್ಳಲು ಯಾರೂ ನೆರವಾಗಲು ಸಾಧ್ಯವಿಲ್ಲ; ಜತೆಗೆ, ಬ್ಯಾಂಕ್‌ನಲ್ಲಿ ಸಾಲ ಮಾಡಿರುವ ಚಾಲಕರಿಗೆ ಇಎಂಐ ಕಟ್ಟುವಂತೆ ಈಗಲೂ ಬ್ಯಾಂಕ್‌ನವರು ಪೀಡಿಸುತ್ತಿದ್ದಾರೆ. ಹೀಗಾಗಿ ಒಂದೆಡೆ ಊಟದ ಚಿಂತೆಯಾದರೆ, ಇನ್ನೊಂ ದೆಡೆ ಸಾಲದ ಕಾಟದಿಂದ ಚಾಲಕರು ಸಮಸ್ಯೆ ಎದುರಿಸುತ್ತಿದ್ದಾರೆ.
ಆರ್‌ಬಿಐ ವಿನಾಯಿತಿ ನೀಡಿದರೂ ನೋಟಿಸ್ !
ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರ ಪೈಕಿ ಬಹುತೇಕರು ಬ್ಯಾಂಕಿನಿಂದ ಸಾಲ ಪಡೆದವರು. ಆರ್‌ಬಿಐ ಇಎಂಐ ಪಾವತಿಸಲು ಮೂರು ತಿಂಗಳ ವಿನಾಯಿತಿ ನೀಡಿದೆ. ಆದರೆ, ಕೆಲವು ಬ್ಯಾಂಕ್‌ಗಳಿಂದ ಈಗಾಗಲೇ ಸಾಲಗಾರರಿಗೆ ನೋಟಿಸ್ ನೀಡಲಾಗಿದೆ. ಕಂತು ಪಾವತಿಸುವಂತೆ ಸಂದೇಶ ಬರುತ್ತಿದೆ. ಹೀಗಾಗಿ ನಿತ್ಯದ ದುಡಿದು ಬದುಕುವವರು ಈಗ ಊಟಕ್ಕೆ ಪರದಾಡುವ ಜತೆಗೆ ಸಾಲದ ಕಂತು ಪಾವತಿಸುವ ತಲೆಬಿಸಿಯಲ್ಲಿದ್ದಾರೆ.
”ಟ್ಯಾಕ್ಸಿ ನಂಬಿದವರ ಬದುಕು ಬೀದಿಗೆ’
ಟ್ಯಾಕ್ಸಿಯನ್ನೇ ನಂಬಿಕೊಂಡ ಚಾಲಕರ ಪರಿಸ್ಥಿತಿ ಇಂದು ಹೇಳತೀರದಾಗಿದೆ. ಅವರ ಸಂಕಷ್ಟದ ಬದುಕಿಗೆ ಸರಕಾರ ಬೆಂಗಾವಲಾಗಿ ನಿಂತರೆ ಉಪಕಾರವಾದೀತು. ಇಲ್ಲವಾದರೆ, ಟ್ಯಾಕ್ಸಿಯನ್ನೇ ನಂಬಿದವರು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಬೀದಿಗೆ ಬೀಳುವ ಪರಿಸ್ಥಿತಿಯಿದೆ.
– ನಾಗಪ್ಪ ಬಿ.ಅಡ್ಯಾರ್
ಉಪಾಧ್ಯಕ್ಷ, ಟ್ಯಾಕ್ಸಿಮ್ಯಾನ್ಸ್ ಆ್ಯಂಡ್ ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್
ಸರಕಾರ ಸಹಾಯ ಮಾಡಲಿ
ರಿಕ್ಷಾದಿಂದಲೇ ನಾವು ಜೀವನ ನಿರ್ವಹಿಸುತ್ತಿದ್ದೇವೆ. ಈಗ ಲಾಕ್‌ಡೌನ್‌ನಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ. ಕೋವಿಡ್ 19 ದೂರವಾಗಲಿ ಎಂಬುದು ನಮ್ಮ ಮೊದಲ ಪ್ರಾರ್ಥನೆ. ಲಾಕ್‌ಡೌನ್ ಇನ್ನೂ ಕೆಲವು ದಿನ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸರಕಾರ ನಮ್ಮ ಬದುಕಿಗೆ ಸಹಕಾರ ಮಾಡಿದರೆ ಸ್ವಲ್ಪ ಆಧಾರವಾಗುತ್ತದೆ. ಇಲ್ಲದಿದ್ದರೆ ಪರಿಸ್ಥಿತಿ ಗಂಭೀರವಾಗಲಿದೆ.
– ಚಂದ್ರಹಾಸ್, ರಿಕ್ಷಾ ಚಾಲಕರು, ಮೋರ್ಗನ್‌ಗೆàಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.