ವಾಷಿಂಗ್ಟನ್: ಹೊಸ ಲಕ್ಷಣಗಳನ್ನು ಕಂಡುಹಿಡಿದ ಸಿಡಿಸಿ
Team Udayavani, Apr 29, 2020, 5:05 PM IST
ವಾಷಿಂಗ್ಟನ್: ಮಹಾಮಾರಿ ಕೋವಿಡ್-19ನ ಇನ್ನೂ ಆರು ಗುಣ ಲಕ್ಷಣಗಳನ್ನು ಅಮೆರಿಕದ ವ್ಯಾಧಿಗಳ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಪಟ್ಟಿ ಮಾಡಿದೆ.
ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆಯಂಥ ಲಘು ಲಕ್ಷಣಗಳಿಂದ ತೀವ್ರ ಅನಾರೋಗ್ಯದವರೆಗಿನ ಲಕ್ಷಣಗಳನ್ನು ಕೋವಿಡ್-19 ಒಳಗೊಂಡಿದೆ. ಸೋಂಕಿಗೆ ಒಳಗಾದ ಎರಡರಿಂದ 14 ದಿನಗಳೊಳಗೆ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು ಎಂದು ಸಿಡಿಸಿ ಹೇಳಿದೆ.
ಹೊಸ ಲಕ್ಷಣಗಳೇನು ?
ಶೀತ ಮರುಕಳಿಸುವಿಕೆ, ಸ್ನಾಯು ಸೆಳೆತ, ತಲೆ ನೋವು, ಗಂಟಲು ಕೆರೆತ, ರುಚಿ ಕಳೆದುಕೊಳ್ಳುವಿಕೆ ಅಥವಾ ವಾಸನೆ ಗೊತ್ತಾಗದಿರುವಿಕೆ-ಇವಿಷ್ಟು ಹೊಸ ಲಕ್ಷಣಗಳು ಎನ್ನಲಾಗಿದೆ.
ಹಲವಾರು ಪರೀಕ್ಷಾ ಮಾದರಿಗಳನ್ನು, ಸೋಂಕಿತರ ವೈದ್ಯಕೀಯ ವರದಿಯನ್ನು ಅಧ್ಯಯನ ಮಾಡಿದ ನಂತರ ಈ ಗುಣಲಕ್ಷಣಗಳನ್ನು ಪಟ್ಟಿ ಮಾಡಲಾಗಿದೆ ಎಂದಿರುವ ಸಿಡಿಸಿ, ಉಸಿರಾಟದಲ್ಲಿ ತೊಂದರೆ, ಎದೆಯಲ್ಲಿ ನಿರಂತರ ನೋವು ಅಥವಾ ಒತ್ತಡ, ಮಾನಸಿಕ ಗೊಂದಲ ಅಥವಾ ನಿದ್ದೆಯಿಂದ ಎದ್ದ ನಂತರ ಹೆಚ್ಚಿನ ಮಂಪರು, ತುಟಿಗಳು ಅಥವಾ ಮುಖ ನೀಲಿಗಟ್ಟುವಿಕೆಯಂಥ ಲಕ್ಷಣಗಳೂ ಕಂಡು ಬಂದರೂ ತತ್‌ಕ್ಷಣವೇ ವೈದ್ಯಕೀಯ ಆರೈಕೆ ಪಡೆಯಬೇಕು ಎಂದು ಸಲಹೆ ನೀಡಿದೆ. ಮೂಗು ಸೋರುವಿಕೆ ಕೋವಿಡ್-19ನಲ್ಲಿ ಒಂದು ಅಪರೂಪದ ಲಕ್ಷಣ ಎಂದಿರುವ ಸಿಡಿಸಿ, ಸೀನುವಿಕೆ ಸೋಂಕಿನ ಲಕ್ಷಣವಲ್ಲ ಎಂದು ಸ್ಪಷ್ಟಪಡಿಸಿದೆ.
ತಜ್ಞರು ಏನು ಹೇಳುತ್ತಾರೆ ?
ಅಧ್ಯಕ್ಷ ಬರಾಕ್ ಒಬಾಮರ ನೇತೃತ್ವದ ಆಫೀಸ್ ಆಫ್ ಪ್ಯಾಂಡೆಮಿಕÕ… ಮತ್ತು ಎಮರ್ಜಿಂಗ್ ಟ್ರೆಟ್ಸ್ ಸಂಸ್ಥೆಯ ಮಾಜಿ ನಿರ್ದೇಶಕ ಮಾರಿಯೋ ರಾಮಿರೆಜ್ ಈ ಕುರಿತು ವಾಷಿಂಗ್ಟನ್ ಪೋಸ್ಟ್‌ಗೆ ತಮ್ಮ ಅಭಿಪ್ರಾಯ ತಿಳಿಸಿದ್ದು, “ಇಂತಹ ಸೋಂಕು ಕಾಯಿಲೆಗಳ ರೋಗಲಕ್ಷಣಗಳು ಕಾಲೋಚಿತವಾಗಿ ಪುನರಾವರ್ತನೆಯಾಗುವುದರೊಂದಿಗೆ ಸಮಯಕ್ಕೆ ತಕ್ಕಂತೆ ಬದಲಾಗುತ್ತದೆ.
ಮಾರ್ಚ್ ಮಧ್ಯಾಂತರದಿಂದಲೇ ರೋಗಿಗಳಲ್ಲಿ ರುಚಿ ಕಳೆದುಕೊಳ್ಳುವಿಕೆ ಅಥವಾ ವಾಸನೆ ಗೊತ್ತಾಗದಿರುವಿಕೆಯ ಲಕ್ಷಣಗಳು ಕಂಡುಬಂದಿದೆ ಎಂದಿದ್ದಾರೆ.ಯುರೋಪ್ ದೇಶಗಳಲ್ಲೂ ಕೋವಿಡ್ -19 ರೋಗಿಗಳ ಅಧ್ಯಯನ ನಡೆಸಿದ್ದು, ಶೇ. 88ರಷ್ಟು ಸೋಂಕಿತರ ಪೈಕಿ ಶೇ.85.6ರಷ್ಟು ಮಂದಿ ಆಘ್ರಾಣಿಸುವುದು ಹಾಗೂ ರುಚಿ ಕಂಡುಹಿಡಿಯುವಿಕೆ ಸಾಮರ್ಥ್ಯ ಕಳೆದುಕೊಂಡಿದ್ದರು. ಇರಾನಿನಲ್ಲಿ ನಡೆದ ಅಧ್ಯಯನದಲ್ಲೂ ಶೇ.76 ರೋಗಿಗಳು ರುಚಿ ತಿಳಿಯುವ ಶಕ್ತಿ ಕಳೆದುಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
MUST WATCH
ಹೊಸ ಸೇರ್ಪಡೆ
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.