ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ 19 ಚಿಕಿತ್ಸೆಗೆ ಅಪಸ್ವರ
ಸುದ್ದಿ ಸುತ್ತಾಟ
Team Udayavani, Jun 22, 2020, 6:40 AM IST
ಕೋವಿಡ್ 19 ಹೆಲ್ತ್ ಕೇರ್ ಸೆಂಟರ್‌ಗಳಿಗೆ ಸರ್ಕಾರಿ ಆಸ್ಪತ್ರೆಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಇದು ಇತರೆ ರೋಗಗಳು ಚಿಕಿತ್ಸೆ ಪಡೆಯಲು ಆತಂಕ ಸೃಷ್ಟಿಸಿದೆ. ಅಲ್ಲದೆ ಚಿಕಿತ್ಸೆಗಾಗಿ ಇತರ ರೋಗಿಗಳು ಹಿಂದೇಟು ಹಾಕುತ್ತಿರುವ ಕಾರಣ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಇದರ ಪರಿಣಾಮ ಆರ್ಥಿಕ ಸ್ಥಿತಿಗತಿಯುಳ್ಳವರು ಖಾಸಗಿ ಆಸ್ಪತ್ರೆಗೆ ಹೋಗಲು ಚಿಂತಿಸುತ್ತಿದ್ದಾರೆ. ಬಡವರ ಸ್ಥಿತಿಯೇನು ಎಂಬ ಪ್ರಶ್ನೆ ಮೂಡಿದ್ದು ಈ ಕುರಿತು ಬೆಳಕು ಚೆಲ್ಲುವ ಮಾಹಿತಿ ಇಂದಿನ ಸುದ್ದಿಸುತ್ತಾಟದಲ್ಲಿ.
ಬೆಂಗಳೂರು: ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ -19 ಪೂರಕ ಕಾರ್ಯಾಚರಣೆ ಜತೆಗೆ ಇತರೆ ರೋಗಿಗಳಿಗೆ ಚಿಕಿತ್ಸೆ àಡುತ್ತಿರುವುಕ್ಕೆ ಸಾರ್ವಜನಿಕರಿಂದ ಅಪಸ್ವರ ಕೇಳಿಬರುತ್ತಿದೆ. ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಿಗೆ ಪಾಸಣೆಗೆ ತೆರಳಲು ಜನರು “ನಾನೊಲ್ಲೆ ನಾನೊಲ್ಲೆ” ಎನ್ನುತ್ತಿದ್ದು, ರೋಗಿಗಳ ಸಂಖ್ಯೆಯೂ ಶೇ.70 ರಷ್ಟು ಕುಸಿದಿದೆ.
ಈ ಮಧ್ಯೆ ನಗರದಲ್ಲಿ ಸೋಂಕು ಹೆಚ್ಚಳ ಹಿನ್ನೆಲೆ ನಗರದ ಪ್ರಮುಖ 16 ಸರ್ಕಾರಿ ಆಸ್ಪತ್ರೆಗಳಲ್ಲಿ “ನಿಗದಿತ ಕೋವಿಡ್ 19 ಹೆಲ್ತ್ ಕೇರ್ ಸೆಂಟರ್’ ಆರಂಆಸ್ಪತ್ರೆಗಳ ಶೇ. 50 ಹಾಸಿಗೆಗಳನ್ನು ಕೋವಿಡ್ 19 ಸೋಂಕಿತರಿಗೆ ಮೀಸಲಿಡಲು ಆರೋಗ್ಯ ಇಲಾಖೆ ಸೂಚಿಸಿದೆ. ಆರೋಗ್ಯ ಇಲಾಖೆ ಈ ನಡೆ ಅನಿವಾರ್ಯವಾಗಿ ಜನ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವಂತಹ ಸ್ಥಿತಿ ಸೃಷ್ಟಿಸಿದೆ. ಆರೋಗ್ಯ ಇಲಾಖೆ ಹೊಸ ಸೂಚನೆಯಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೋಂಕು ಲಕ್ಷಣವಿರುವವರಿಗೆ ಚಿಕಿತ್ಸೆ ನೀಡಲಾಗುತ್ತದೆ.
ಉಳಿದಂತೆ ರೋಗಿ ಆರೋಗ್ಯ ಸ್ಥಿತಿ ಗಂಭೀರ ಇದ್ದರೆ ನಿಗದಿತ ಕೋವಿಡ್ 19 ಆಸ್ಪತ್ರೆಗೆ, ಸೋಂಕು ಲಕ್ಷಣವಿಲ್ಲದವರಿಗೆ ಕೊರೊನಾ ಕೇರ್ ಸೆಂಟರ್‌ಗೆ ವರ್ಗಾಹಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಗರದ ಒಂದು ಅಥವಾ ಎರಡು ಆಸ್ಪತ್ರೆ ಯನ್ನು ಮಾತ್ರ ಸಂಪೂರ್ಣ ಕೋ ವಿಡ್ ಪೂರಕ ಕಾರ್ಯಾಚರಣೆಗೆ ಮೀಸಲಿಟ್ಟು, ಉಳಿದ ಆತ್ರೆಗಳನ್ನು ಇತರೆ ರೋಗಿಗಳಿಗೆ ಮುಕ್ತ ಮಾಡಿಕೊಡಬೇಕು. ಸೋಂಕು ಲಕ್ಷಣವಿಲ್ಲದ ಸೋಂಕಿತರಿಗೆ ನಗರದ ಪ್ರಮುಖ ಆಸ್ಪತ್ರೆಗಳು° ಹೊರತುಪಡಿಸಿ ಇತರೆಡೆ ಕೇರ್ ಸೆಂಟರ್‌ಗಳನ್ನು ಸ್ಥಾಪಿಸಿ ಚಿಕಿತ್ಸೆ ನೀಡಬೇಕು ಎಂಬ ಅಭಿಪ್ರಾಯ ತಜ್ಞ ವೈದ್ಯರಿಂದ ವ್ಯಕ್ತವಾಗಿದೆ.
ನಿತ್ಯ ಸಾವಿರಾರು ಮಂದಿ ತಪಾಸಣೆ: ರಾಜೀವ್‌ಗಾಂಧಿ ಎದೆರೋಗಳ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಜನರಲ್ ಆಸ್ಪತ್ರೆ ಹಾಗೂ ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆಯು ನಗರದ ಪ್ರಮುಖ ಆಸ್ಪತ್ರೆಗಳಾಗಿದ್ದು, ಪ್ರತಿ ಆಸ್ಪತ್ರೆಗೆ ನಿತ್ಯ ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೇ ಈ ಆಸ್ಪತ್ರೆಗಳು ರೆಫೆರಲ್ ಆಸ್ಪತ್ರೆಗಳೂ ಆಗಿದ್ದು, ( ಹೆಚ್ಚುವರಿ ಚಿಕಿತ್ಸಾ ಆಸ್ಪತ್ರೆ) ಸುತ್ತಲಿನ ಜಿಲ್ಲೆಗಳಿಂದ ಸಾಕಷ್ಟು ಮಂದಿ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್ 19 ಹಿನ್ನೆಲೆ ಕಳೆದ ಮೂರು ತಿಂಗಳು ತುರ್ತು ಚಿಕಿತ್ಸೆ ಹೊರತು ಪಡಿಸಿ ಕೋವಿಡ್ 19 ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿತ್ತು.
ಆದರೆ, ಇತರೆ ರೋಗಿಗಳಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಕಳೆದ ಎರಡು ವಾರದಿಂದ ಕೆ.ಸಿ.ಜನರಲ್, ಜಯನಗರ ಜನರಲ್, ಸಿ.ವಿ.ರಾಮನ್ ಆಸ್ಪತ್ರೆ, ಒಂದು ವಾರದಿಂದ ಬೌರಿಂಗ್ ಮತ್ತ ಲೇಡಿ ಕರ್ಜನ್, ರಾಜೀವ್‌ಗಾಂಧಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಆರಂಭಿಸಲಾಗಿತ್ತು. ಇದೇ ಆಸ್ಪತ್ರೆಗಳಲ್ಲಿ ಕೋವಿಡ್ 19 ಶಂಕಿತರ ಪ್ರಾಥಮಿಕ ತಪಾಸಣೆ, ಗಂಟಲು ದ್ರವ ಸಂಗ್ರಹ ಕಾರ್ಯಾಚರಣೆ ನಡೆಯುತ್ತಿದ್ದು, ಸಾರ್ವಜನಿಕರು ಆಸ್ಪತ್ರೆಗಳತ್ತ ತೆರಳಲು ಭಯಪಡುತ್ತಿದ್ದರು. ಈಗ ಇಲಾಖೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೋವಿಡ್ 19 ಸೋಂಕಿತರಿಗೆ ಶೇ.50 ಹಾಸಿಗೆ ಮೀಸಲಿಟ್ಟು ಚಿಕಿತ್ಸೆಗೆ ಸೂಚಿಸಿದೆ.
ಸಾಮಾನ್ಯ ರೋಗಿಗಳಿಗೆ ಆದ್ಯತೆ ಕಷ್ಟ !: ಕೋವಿಡ್ 19 ಪೂರಕ ಕಾರ್ಯಾಚರಣೆ ಜತೆಗೆ ಸಾಮಾನ್ಯ ರೋಗಿಗಳಿಗೆ ಆದ್ಯತೆ ನೀಡಲು ಸಾಧ್ಯವಾಗುತ್ತಿಲ್ಲ. ಜತೆಗೆ ಸಾಮಾನ್ಯ ರೋಗಿಗಳು ಭಯಪಡುತ್ತಿದ್ದಾರೆ’ ಎಂಬುದು ನಗರದ ಸರ್ಕಾರಿ ಆಸ್ಪತ್ರೆಗಳ ವೈದ್ಯರ ಮತ್ತು ಸಿಬ್ಬಂದಿ ವರ್ಗದ ಅಭಿಪ್ರಾಯವಾಗಿದೆ. ಕೋವಿಡ್ 19 ಇನ್ನಷ್ಟು ತಿಂಗಳ ಕಾಲ ಇರಲಿದ್ದು, ಸೋಂಕಿತರ ಜತೆಗೆ ಇತರೆ ರೋಗಿಗಳಿಗೂ ಆಸ್ಪತ್ರೆ ಅತ್ಯಗತ್ಯವಾಗಿದೆ. ಸೋಂಕಿತರ ಭೀತಿಯಿಂದ ಸಾರ್ವಜನಿಕರು ಮುಕ್ತವಾಗಿ ಆಸ್ಪತ್ರೆಗೆ ಬರುತ್ತಿಲ್ಲ ಎಂದು ಸಿ.ವಿ.ರಾಮನ್ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ತಿಳಿಸಿದರು.
ಫಾಲೋ ಅಪ್ ರೋಗಿಗಳಿಗೆ ಸಮಸ್ಯೆ ತಜ್ಞ: ವೈದ್ಯರು ಲಭ್ಯ ಎಂಬ ಕಾರಣಕ್ಕೆ ನಗರದ ಆಸ್ಪತ್ರೆಗಳಿಗೆ ಬಂದು ಲಕ್ಷಾಂತರ ಮಂದಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಪ್ರತಿ ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಿ ಫಾಲೋ ಅಪ್ ಚಿಕಿತ್ಸೆ ಪಡೆಯಬೇಕಿರುತ್ತದೆ. ಕೋವಿಡ್ 19 ಲಾಕ್ ಡೌನ್‌ನಿಂದ ಕಳೆದ ಮೂರು ತಿಂಗಳು ರೋಗಿಗಳಿಗೆ ಆಸ್ಪತ್ರೆಗಳತ್ತ ಬರಲು ಸಾಧ್ಯವಾಗಿರಲಿಲ್ಲ.
ಕೋವಿಡ್ 19 ಹೆಲ್ತ್ ಕೇರ್ ಸೆಂಟರ್‌ಗೆ ಆಯ್ಕೆಗೊಂಡ ಆಸ್ಪತ್ರೆಗಳು: ಕೆಸಿ ಜನರಲ್ ಆಸ್ಪತ್ರೆ, ಜಯನಗರ ಜನರಲ್, ಸಿ ವಿ ರಾಮನ್ ಆಸ್ಪತ್ರೆ, ಇ.ಡಿ ಆಸ್ಪತ್ರೆ, ರಾಜಾಜಿನಗರ, ಇಂದಿರಾನಗರ, ಪೀಣ್ಯ ಇಎಸ್‌ಐ ಆಸ್ಪತ್ರೆಗಳು, ಕಮಾಂಡೋ ಆಸ್ಪತ್ರೆ, ಕೆ.ಆರ್‌ಪುರ, ಯಲಹಂಕ, ಆನೇಕಲ್, ನೆಲಮಂಗಳ ದೊಡ್ಡಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗಳು, ಮಾಗಡಿ ರಸ್ತೆ ಕುಷ್ಠರೋಗ ಆಸ್ಪತ್ರೆ. ( ಸೋಂಕು ಲಕ್ಷಣವಿರುವವರಿಗೆ ಹಾಗೂ ತುರ್ತು ಆರೋಗ್ಯ ಸ್ಥಿತಿ ಹೊಂದಿರದ ಸೋಂಕಿತರಿಗೆ)
ಕೋವಿಡ್ 19 ಕೇರ್ ಸೆಂಟರ್‌ಗಳು: ಕನಕಪುರ ರಸ್ತೆಯ ರವಿಶಂಕರ್ ಆಶ್ರಮ, ಕಂಠೀರವ ಒಳಾಂಗಣ ಕ್ರೀಡಾಂಗಣ, ಕೋರಮಂಗಲ ಒಳಾಂಗಣ ಕ್ರೀಡಾಂಗಣ. ( ಸೋಂಕು ಲಕ್ಷಣವಿಲ್ಲದ ಸೋಂಕಿತರಿದೆ)
ಕೋವಿಡ್ 19 ನಿಗದಿತ ಚಿಕಿತ್ಸಾ ಆಸ್ಪತ್ರೆ: ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ. ( ಗಂಭೀರ ಆರೋಗ್ಯ ಸ್ಥಿತಿ ಹೊಂದಿರುವ ಸೋಂಕಿತರಿಗೆ)
ಕೋವಿಡ್ 19 ಸೋಂಕಿತರ ಜತೆಗೆ ಇತರೆ ರೋಗಿಗಳ ಚಿಕಿತ್ಸೆ ನೀಡುವ ಅಗತ್ಯತೆ ಹೆಚ್ಚಿದೆ. ರೋಗ ಲಕ್ಷಣವಿಲ್ಲದ ಸೋಂಕಿತರನ್ನು ಕೋವಿಡ್ 19 ಕೇರ್ ಸೆಂಟರ್‌ಗೆ ಸ್ಥಳಾಂತರಿಸಿ ಅಲ್ಲಿಯೇ ಐಸೋಲೇಷನ್ ಮಾಡಬಹುದು. ಇದರಿಂದ ಆಸ್ಪತ್ರೆಗಳು, ಅಲ್ಲಿನ ಹಾಸಿಗೆಗಳು ಇತರೆ ರೋಗಿಗಳಿಗೆ ಉಪಯೋಗವಾಗುತ್ತದೆ.
-ಡಾ.ಸಿ.ಎನ್.ಮಂಜುನಾಥ್, ಜಯದೇವಾ ಹೃದ್ರೋಗ ವಿಜ್ಞಾನ ಸಂಶೋಧನಾ ಸಂಸ್ಥೆ ನಿರ್ದೇಶಕರು
ಆಸ್ಪತ್ರೆಗಳಲ್ಲಿ ಇತರೆ ರೋಗಿಗಳಿಗೆ ತೊಂದರೆಯಾಗದಂತೆ ಕೋವಿಡ್ 19 ಸೋಂಕಿಗೆ ಪ್ರತ್ಯೇಕ ವಾರ್ಡ್, ಆ ವಾರ್ಡ್‌ನ ಪ್ರವೇಶ, ನಿರ್ಗಮನ ದ್ವಾರ ಪ್ರತ್ಯೇಕಗೊಳಿ ಸಲು, ಚಿಕಿತ್ಸೆ ನೀಡುವ ಸಿಬ್ಬಂದಿಯನ್ನು ಪ್ರತ್ಯೇಕ ತಂಡ ಮಾಡಲು ಸೂಚಿಸಲಾಗಿದೆ. ರೋಗಿಗಳು ಭೀತಿಯಿಲ್ಲದೆ ಚಿಕಿತ್ಸೆ ಪಡೆಯಬಹುದು.
-ಓಂ ಪ್ರಕಾಶ್ ಪಾಟೀಲ್, ನಿರ್ದೇಶಕರು, ಆರೋಗ್ಯ ಇಲಾಖೆ
ಕೋವಿಡ್ 19 ಚಿಕಿತ್ಸೆ ಹಿನ್ನೆಲೆ ಆಸ್ಪತ್ರೆಗೆ ಬರುತ್ತಿದ್ದ ಇತರೆ ರೋಗಿಗಳು ಪ್ರಮಾಣ ಶೇ.50 ರಷ್ಟು ಕಡಿಮೆಯಾಗಿದೆ. ಸೋಂಕು ಲಕ್ಷಣ ಇಲ್ಲದವರನ್ನು ಕೋವಿಡ್ 19 ಸೆಂಟರ್‌ಗೆ ವರ್ಗಾವಣೆಯಾದರೆ ಉಳಿದವ ರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ.
-ಡಾ.ಸಿ.ನಾಗರಾಜ್, ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕರು
ಕೋವಿಡ್ 19 ಚಿಕಿತ್ಸೆ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗೆ ತೆರಳಲು ಭಯವಾಗುತ್ತದೆ. ಹೀಗಾಗಿ, ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗೆ ತೆರಳಿದ್ದೇವೆ. ಕೆಲ ಆಸ್ಪತ್ರೆಗಳನ್ನು ಸಾಮಾನ್ಯ ರೋಗಿಗಳಿಗೆ ಮೀಸಲಿಡಬೇಕಿತ್ತು.
-ಆನಂದ್ ಹಳ್ಳೂರು, ರೋಗಿ ಸಂಬಂಧಿ
* ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Egg Thrown: “ಮೊಟ್ಟೆ ಅಟ್ಯಾಕ್’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ
New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್, 38 ಪ್ರಶ್ನೆ!
Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು
Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.