ಕೋವಿಡ್-19 ಸೋಂಕು ನಾವು ಅಂದುಕೊಂಡಂತಿಲ್ಲ
Team Udayavani, May 4, 2020, 7:44 PM IST
ಐರ್ಲೆಂಡ್: ಮಹಾಮಾರಿ ಕೋವಿಡ್-19 ಕೇವಲ ಜ್ವರ, ಕೆಮ್ಮ, ಉಸಿರಾಟದ ತೊಂದರೆ ಉಂಟು ಮಾಡುತ್ತದೆ ಎನ್ನಲಾಗುತ್ತಿದೆ. ಆದರೆ, ಇದು ಮನುಷ್ಯನ ನರದ ವ್ಯವಸ್ಥೆ ಮೇಲೆ ವ್ಯತಿ ರಿಕ್ತ ಪರಿಣಾಮ ಪರಿಣಾಮ ಬೀರಲಿದ್ದು, ಪಾರ್ಶ್ವವಾಯು ಸಮಸ್ಯೆಗಳನ್ನು ಉಂಟು ಮಾಡಲಿದೆ ಎಂದು ಐರ್ಲೆಂಡ್ ಸಂಶೋಧಕರ ತಂಡವೊಂದು ಅಭಿಪ್ರಾಯಪಟ್ಟಿದೆ.
ಸೋಂಕು ಪೀಡಿತರಲ್ಲಿ ಕೆಲದಿನಗಳಿಂದ ವಿಚಿತ್ರ ಗುಣಲಕ್ಷಣಗಳು ಕಂಡು ಬರುತ್ತಿ ದ್ದು, ಅನಿರೀಕ್ಷಿತ ಬೆಳವಣಿಗೆಗಳು ಗೋಚರವಾಗುತ್ತಿವೆ. ಸೋಂಕಿತರು ಹೆಚ್ಚು ಗೊಂದಲಕ್ಕೆ ಒಳಗಾಗುವುದು, ನರದೌರ್ಬಲ್ಯದಂತಹ ಕಾಯಿಲೆಗಳ ರೋಗ ಲಕ್ಷಣಗಳ ಅಂಶಗಳು ಬೆಳಕಿಗೆ ಬರುತ್ತಿವೆ ಎಂದು ಐರ್ಲೆಂಡ್‌ನ ನರವಿಜ್ಞಾನಿಗಳ ತಂಡವೊಂದು ಹೇಳಿದೆ.
ಇದರೊಂದಿಗೆ ಕೋವಿಡ್-19 ತುತ್ತಾಗಿರುವ ಹೆಚ್ಚಿನ ಸಂಖ್ಯೆಯ ಯುವಕರಲ್ಲಿ ಪಾರ್ಶ್ವವಾಯು ರೋಗಲಕ್ಷಣಗಳನ್ನು ಗುರುತಿಸಿದ್ದು, ಸೋಂಕು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೂ ಕಾರಣವಾಗಿದೆ ಎಂದು ಹೇಳಿದ್ದಾರೆ.
ಕೋವಿಡ್ 19 ವೈರಾಣು ಮನುಷ್ಯರ ರಕ್ತ ವನ್ನು ದಪ್ಪವಾಗಿಸುವ ಜತೆಗೆ, ಮಿದುಳು, ಮೂತ್ರಪಿಂಡಗಳಲ್ಲಿ ಹೆಪ್ಪುಗಟ್ಟುತ್ತಿದೆ. ಶ್ವಾಸ ಕೋಶದಲ್ಲಿ ಸರಾಗವಾದ ರಕ್ತ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡುತ್ತಿದೆ. ಶ್ವಾಸಕೋಶ, ಹೃದಯ ಅಥವಾ ಮೆದುಳಿಗೆ ರಕ್ತ ಸಂಚಾರದಲ್ಲಿ ಈ ರೀತಿಯಾದರೆ ಧಮನಿಗಳಲ್ಲಿ ತಡೆ ಉಂಟಾಗಿ ಹೃದಯಾಘಾತ, ಹೃದಯ ಸ್ತಂಭನ ಉಂಟಾಗಬಹುದು. ಪರಿಣಾಮವಾಗಿ ವೇಗವಾಗಿ ಸಾವಿಗೀಡು ಮಾಡಬಹುದು ಎಂದು ಎಚ್ಚರಿಸಿದ್ದಾರೆ.
ಡಬ್ಲಿನ್‌ನ ಐರಿಶ್ ಸೆಂಟರ್‌ಫಾರ್ ವ್ಯಾಸ್ಕಾಲರ್‌ಬಯಾಲಜಿ, ಆರ್‌ಸಿಎಸ್‌ಐ ಮತ್ತು ಸೇಂಟ್ ಜೇಮ್ಸ್ ಆಸ್ಪತ್ರೆಯ ವೈದ್ಯರು ವೈದ್ಯಕೀಯ ನಿಯತಕಾಲಿಕೆಯಲ್ಲಿ ವರದಿ ಬಿಡುಗಡೆಯಾಗಿದ್ದು, ಸೋಂಕು ದೃಢಪಟ್ಟಿರುವ ರೋಗಿಗಳಲ್ಲಿ ಅಸಹಜವಾಗಿ ರಕ್ತ ಹೆಪ್ಪುಗಟ್ಟಿದ್ದು, ಈ ಅಂಶವೂ ಸಾವಿಗೆ ಕಾರಣವಾಗಿದೆ ಎಂಬ ಮಾಹಿತಿಯನ್ನು ಉಲ್ಲೇಖೀಸಿದೆ.
ಪ್ರಾಥಮಿಕವಾಗಿ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟಲಿದ್ದು, ಮೊದಲಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಲಿದೆ. ಮುಂದಿನ ಭಾಗವಾಗಿ ಆಮ್ಲಜನಕ ಸರಬರಾಜು ವ್ಯವಸ್ಥೆ ಕುಸಿಯಲಿದ್ದು, ನಿಗದಿತ ಪ್ರಮಾಣದಲ್ಲಿ ರಕ್ತ ಸಂಚಾರವಾಗುವುದು ನಿಲ್ಲುತ್ತದೆ. ಈ ಅಸ್ವಸ್ಥತೆ ಕ್ರಮೇಣ ಮೆದುನ ಅನಾರೋಗ್ಯಕ್ಕೆ ಅಥವಾ ಹೃದಯಾಘಾತಕ್ಕೆ ದಾರಿ ಮಾಡಿಕೊಡಲಿದ್ದು, ಪಾರ್ಶ್ವವಾಯು ಕಾರಣವಾಗಬಹುದು ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
Israel ಮೇಲೆ ದಾಳಿಗೆ ಇರಾನ್‌ನಿಂದ ಮಕ್ಕಳ ಬಳಕೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.