Covid: ವರ್ಷದಲ್ಲಿ ಸದ್ದಿಲ್ಲದೆ ಬಂದಿರುವ ಒಮಿಕ್ರಾನ್‌ನ 6 ರೂಪಾಂತರಿ
ಜೆಎನ್.1 ಭಯಬೇಡ -ಎಚ್ಚರಿಕೆ ಅಗತ್ಯ ಎಂದು ಆರೋಗ್ಯ ತಜ್ಞರ ಸಲಹೆ
Team Udayavani, Dec 26, 2023, 6:56 AM IST
ಬೆಂಗಳೂರು: ದೇಶದಲ್ಲಿ ಸದ್ಯ ಕೊರೊನಾ ರೂಪಾಂತರಿ ತಳಿ ಜೆಎನ್.1 ತಲ್ಲಣಗೊಳಿಸುತ್ತಿದೆ. ಆದರೆ ಕಳೆದೊಂದು ವರ್ಷದಲ್ಲಿ ಎರಡು ತಿಂಗಳಿಗೊಂದರಂತೆ ಕೊರೊನಾ ರೂಪಾಂತರಿ ಒಮಿಕ್ರಾನ್‌ನ 6 ಉಪತಳಿಗಳು ಬಂದು ಹೋಗಿರುವುದು ಜನರಿಗೆ ಗೊತ್ತೇ ಇಲ್ಲ.
ಕೊರೊನಾ ಮೊದಲ ಅಲೆಯ ಬಳಿಕ ಆರೋಗ್ಯ ಇಲಾಖೆಯು ರಾಜ್ಯ ಕಣ್ಗಾವಲು ಪಡೆಯನ್ನು ತೀವ್ರಗೊಳಿಸಿದೆ. ಸೋಂಕು ದೃಢವಾದ ಯಾವ ವ್ಯಕ್ತಿಯ ಮಾದರಿಗಳಲ್ಲಿ ಸಿಟಿ ವ್ಯಾಲ್ಯೂ 25ಕ್ಕಿಂತ ಕಡಿಮೆ ಇರುತ್ತದೆಯೋ ಅವರ ಮಾದರಿಗಳನ್ನು ನಿರಂತರವಾಗಿ ಜೀನೊಮ್ ಸಿಕ್ವೇನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕಳೆದ ಮೂರು ಅಲೆಯಲ್ಲಿ ಅತ್ಯಧಿಕ ರೂಪಾಂತರಿ ವೈರಸ್‌ಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಉಪತಳಿಗಳು ವರದಿಯಾಗಿರುವುದು ಒಮಿಕ್ರಾನ್‌ನಲ್ಲಿ ಮಾತ್ರ. ಇಲ್ಲಿ ಸೋಂಕಿನ ಹರಡುವಿಕೆ ಪ್ರಮಾಣ ದ್ವಿಗುಣಗೊಂಡಿದ್ದು, ಸಾವು ಹಾಗೂ ಆಸ್ಪತ್ರೆಗೆ ದಾಖಲಾದ ಪ್ರಕರಣಗಳು ತುಂಬಾ ಕಡಿಮೆ ಇತ್ತು.
6 ರೂಪಾಂತರಿ ವೈರಸ್!
ರಾಜ್ಯದಲ್ಲಿ ಇದುವರೆಗೆ ಜೆಎನ್.1 ಸೇರಿ 6 ರೂಪಾಂತರಿ ಹಾಗೂ 6 ಉಪತಳಿಗಳು ವರದಿಯಾಗಿವೆ. ಮೊದಲ ಎರಡು ಅಲೆಯಲ್ಲಿ ಕೊರೊನಾ ರೂಪಾಂತರಿ ಆಲ್ಫಾ, ಬೇಟಾ, ಡೆಲ್ಟಾ, ಇತರ (ಇಟಿಎ, ಕಪ್ಪಾ, ಪಂಗೋ) ವರದಿಯಾಗಿದ್ದರೂ ಶೀಘ್ರದಲ್ಲಿ ಅಂತ್ಯ ಕಂಡಿವೆ. ಆದರೆ 2023ರಲ್ಲಿ ಒಮಿಕ್ರಾನ್ ರೂಪಾಂತರಿ ತಳಿ ವರದಿಯಾಗಿದ್ದು, ಅನಂತರದ ದಿನದಲ್ಲಿ ಒಮಿಕ್ರಾನ್ ಉಪ ತಳಿಗಳಾದ ಬಿಎ 1.1.5, ಬಿ.ಎ.1, ಬಿ.ಎ2, ಬಿ.ಎ.3, ಬಿ.ಎ.4, ಬಿ.ಎ.5 ಹಾಗೂ ಬಿ.ಎ.5 ಎಕ್ಸ್ ಬಿಬಿ ವರದಿಯಾಗಿದೆ. ಒಮಿಕ್ರಾನ್ ಉಪತಳಿಗಳು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.
ಜೆಎನ್.1 ಭಯ ಬೇಡ
ಸಾಮಾನ್ಯವಾಗಿ ಪ್ರತಿಯೊಂದು ವೈರಸ್ ಸಮಯ ಕಳೆದಂತೆ ರೂಪಾಂತರಗೊಳ್ಳುತ್ತಲೇ ಇರುತ್ತದೆ. ಆದರೆ ಕೆಲವು ರೂಪಾಂತರಿ ವೈರಸ್ ಮಾತ್ರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆ ಪೈಕಿ ಜೆಎನ್.1 ಕೂಡ ಒಂದು. ಇದು ಮನುಷ್ಯ ದೇಹವನ್ನು ಪ್ರವೇಶಿಸಿದರೆ ಅನಾರೋಗ್ಯ ಭಾದಿಸುತ್ತದೆ. ಆದರೆ ಡೆಲ್ಟಾ, ಆಲ್ಫಾದಂತೆ ತೀವ್ರ ತರಹದ ಅನಾರೋಗ್ಯದ ಸಮಸ್ಯೆಗಳಿಗೆ ಕಾರಣವಾಗುವುದಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಆಳವಡಿಸಿಕೊಳ್ಳುವುದು ಉತ್ತಮ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಡುತ್ತಾರೆ.
20 ಸಾವಿರ ಮಂದಿಗೆ ರೂಪಾಂತರಿ
ರಾಜ್ಯದಲ್ಲಿ ಇದುವರೆಗೆ ಜೀನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾದ ಕೋವಿಡ್ ಸೋಂಕಿತರ ಮಾದರಿಗಳಲ್ಲಿ 20,304 ಮಂದಿಯಲ್ಲಿ ರೂಪಾಂತರಿ ಹಾಗೂ ಉಪತಳಿಗಳು ವರದಿಯಾಗಿವೆ. 14,199 ಮಂದಿಯಲ್ಲಿ ಒಮಿಕ್ರಾನ್, 9,928 ಮಂದಿಯಲ್ಲಿ ಒಮಿಕ್ರಾನ್ ಉಪತಳಿ ಬಿಎ 2, 1,873 ಮಂದಿಯಲ್ಲಿ ಬಿಎ1, 1,007 ಮಂದಿಯಲ್ಲಿ ಎಕ್ಸ್‌ಬಿಬಿ ಉಪತಳಿ ವರದಿಯಾಗಿದೆ.
ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.