ನ್ಯೂಜಿಲೆಂಡ್‌ಗೆ 2 ಮಾರ್ಕ್ಸ್ ಹೆಚ್ಚು
Team Udayavani, Apr 25, 2020, 2:53 PM IST
ಬಹುತೇಕ ಎಲ್ಲ ದೇಶಗಳನ್ನೂ ಈಗ ಕೋವಿಡ್ ವೈರಸ್ ಬಾಧಿಸುತ್ತಿದೆ. ಶೇ. 80ಕ್ಕೂ ಆಧಿಕ ರಾಷ್ಟ್ರಗಳು ಈಗ ಲಾಕ್‌ಡೌನ್ ಆಗಿವೆ. ಆರಂಭದ ಸಮಯದಲ್ಲಿ ಪ್ರವಾಸಿಗರು ಕೋವಿಡ್ ವೈರಸ್ ಅನ್ನು ಕೆಲವು ರಾಷ್ಟ್ರಗಳಿಗೆ ಪಸರಿಸಿದ್ದರು. ಇದಕ್ಕೆ ಹಲವು ರಾಷ್ಟ್ರಗಳು ಈಗ ಬೆಲೆ ತೆರುತ್ತಿದೆ.
ಮಣಿಪಾಲ: ಪ್ರವಾಸಿಗಳಿಂದ ವೈರಸ್ ದಾಳಿಗೆ ಕಾರಣವಾದ ಹಲವು ದೇಶ ಗಳ ಪೈಕಿ ನ್ಯೂಜಿಲ್ಯಾಂಡ್ ಕೂಡ ಒಂದು. ನೆರೆಯ ಆಸ್ಟ್ರೇಲಿಯ ಹಾಗೂ ನ್ಯೂಜಿಲ್ಯಾಂಡ್ ಹೆಚ್ಚಾ ಕಡಿಮೆ ಒಂದೇ ಅವಧಿಯಲ್ಲಿ ವೈರಸ್ ಅನ್ನು ತನ್ನ ನೆಲದಲ್ಲಿ ಗುರುತಿಸಲ್ಪಟ್ಟಿದ್ದವು. ಮಾರ್ಚ್ ಆರಂಭದಲ್ಲಿ ಇಲ್ಲಿ ಸೋಂಕು ಕಾಣಿಸಿಕೊಂಡಿತು. ವಾರಗಳ ಬಳಿಕ ಈ 2 ದೇಶಗಳಲ್ಲಿ ಸಮಾನಾಗಿ ಕೋವಿಡ್ ಹರಡಿತ್ತು.
ಆದರೆ ಬಳಿಕ ಏಕಾಏಕಿ ಆಸ್ಟ್ರೇಲಿಯಾದಲ್ಲಿ ಸಾವಿರ ಪ್ರಕರಣಗಳು ಮತ್ತು 10 ಸಾವುಗಳು ಸಂಭವಿಸಿತು. ಈ ಸಮಯದಲ್ಲಿ ನ್ಯೂಜಿಲ್ಯಾಂಡ್‌ನಲ್ಲಿ 102 ಕೇಸುಗಳೊಂದಿಗೆ ಯಾವುದೇ ಸಾವು ಸಂಭವಿಸಿರಲಿಲ್ಲ. ಆದರೆ ಈ ಎರಡೂ ರಾಷ್ಟ್ರಗಳು ಏಕಕಾಲಕ್ಕೆ ಒಂದೇ ಬಗೆಯ ವೈರಸ್ ಎಲಿಮಿನೇಶನ್ ಕಾರ್ಯ ಕ್ರಮವನ್ನು ಜಾರಿಗೆ ತಂದಿದ್ದವು. ಹಾಗೆ ನೋಡಿದರೆ ಆಸ್ಟ್ರೇಲಿಯಾಕ್ಕಿಂತ ನ್ಯೂಜಿಲೆಂಡ್ ಸರಿಯಾಗಿ ಪರಿಸ್ಥಿತಿಯನ್ನು ನಿಭಾಯಿಸಿದೆ.
ಚೀನದ ವುಹಾನ್‌ನಲ್ಲಿ ಕೋವಿಡ್ ಸಾವುಗಳ ಸಂಖ್ಯೆ ಹೆಚ್ಚುತ್ತಲೇ ಇರುವಾಗ ಜಗತ್ತಿನ ಇತರ ರಾಷ್ಟ್ರಗಳು ಅವುಗಳ ಸುದ್ದಿಗಳನ್ನು ಮಾಧ್ಯಮಗಳ ಮೂಲಕ ತಿಳಿದುಕೊಳ್ಳಲು ಮಾತ್ರ ಪ್ರಯತ್ನಿಸಿತ್ತು. ಕೆಲವು ದೇಶಗಳು ಚೀನದಿಂದ ಬರುವ ವಿಮಾನಗಳನ್ನು ನಿಲ್ಲಿಸಿದರೆ, ಅವುಗಳ ಜತೆಗೆ ವ್ಯಾಪಾರ ವಹಿವಾಟಿಗೂ ತಡೆ ನೀಡಲಾಗಿತ್ತು.
ಈ ನಡುವೆ ದ್ವೀಪರಾಷ್ಟ್ರವಾಗಿದ್ದ ನ್ಯೂಜಿಲೆಂಡ್ ತನ್ನ ಗಡಿಗಳನ್ನು ಭದ್ರಪಡಿಸಿತ್ತು. ದ್ವೀಪರಾಷ್ಟ್ರವಾದ ಕಾರಣ ಯಾವುದೇ ಭೂಸಾರಿಗೆಯಿಲ್ಲ. ಸಮೀಪದಲ್ಲಿರುವ ಅಕ್ಲಾಂಡ್ ನಿಂದ ಹಡಗು ಮೂಲಕ ಅಥವ ವಿಮಾನಗಳ ಮೂಲಕ ಬರಬೇಕಷ್ಟೇ. ಇತರ ದೇಶಗಳಿಂದಲೂ ಯಾರೇ ಬರುವುದಾದರೂ ಅದೇ ಸಾರಿಗೆ ವ್ಯವಸ್ಥೆಯನ್ನು ಅವಲಂಬಿಸಬೇಕು. ಹೀಗೆ ಬರುವವರನ್ನೆಲ್ಲ 14 ದಿನ ಕಡ್ಡಾಯ ಕ್ವಾರಂಟೈನ್. ಅನಂತರವೇ ದೇಶದೊಳಗೆ ಪ್ರವೇಶ.
ಕಾಂಟ್ಯಾಕ್ಟ್ ಟ್ರೇಸಿಂಗ್
ತೈವಾನ್ ಬಳಿಕ ನ್ಯೂಜಿಲ್ಯಾಂಡ್ ಕಟ್ಟುನಿಟ್ಟಿನ ಕ್ರಮದ ಮೊರೆಹೋಗಿತ್ತು. ಲಾಕೌxನ್ ಘೋಷಿಸಿತು. ಸಾಮಾಜಿಕ ಅಂತರ ನಿಯಮವನ್ನೂ ತುಂಬಾ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಜತೆಗೆ ಕಾಂಟ್ಯಾಕ್ಟ್ ಟ್ರೇಸಿಂಗ್ ಅನ್ನು ಬಹಳ ಬದ್ಧತೆಯಿಂದ ಮಾಡಲಾಗುತ್ತಿದೆ. ಸೋಂಕಿತರ ನಿಕಟ ಸಂಪರ್ಕಕ್ಕೆ ಬಂದವರನ್ನು ಹುಡುಕಿ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಹಾಗೆ ನೋಡಿದರೆ ಸರಕಾರದ ಈ ಆರಂಭಿಕ ಕ್ರಮಕ್ಕೆ ಕಾರಣವೂ ಇದೆ. ಯಾವುದೇ ದೇಶದಲ್ಲಿ ಸೋಂಕಿನ ಸಂಖ್ಯೆ 2-3 ಸಾವಿರಕ್ಕಿಂತ ಹೆಚ್ಚಾದರೆ ಅದು ಅದಾಗಲೇ ಸಮು ದಾಯಕ್ಕೆ ಹರಡಿರುತ್ತದೆ ಎನ್ನಲಾಗುತ್ತದೆ.
ದಕ್ಷಿಣ ಕೊರಿಯಾ ತಂತ್ರಜ್ಞಾನದ ಮೂಲಕ ಕೋವಿಡ್ ವಿರುದ್ಧ ಸೆಣಸುತ್ತಿದೆ. ತಾಂತ್ರಿಕವಾಗಿ ಬಹಳ ಮುಂದುವರಿದಿರುವ ದಕ್ಷಿಣ ಕೊರಿಯಾ ತನ್ನ ಬಹುತೇಕ ನಗರಗಳಲ್ಲಿ ಸಿಸಿ ಕೆಮರಾ ಅಳವಡಿಸಿದೆ. ಯಾಕೆಂದರೆ ಕ್ವಾರಂಟೈನ್ ಮುರಿದು ಯಾರೂ ಆಚೆ ಹೋಗುವಂತಿಲ್ಲ. ಸೋಂಕಿತರು ಮತ್ತು ಶಂಕಿತರ ಎಲ್ಲ ಚಲನವಲನವನ್ನೂ ಟ್ರ್ಯಾಕ್ ಮಾಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.