ಅರೆಬೆಂದ ಅನ್ನದಂತಾದ ಆಹಾರ ಉದ್ಯಮ : ಉತ್ಪಾದನೆಯೂ ಕುಸಿತ – ವಹಿವಾಟೂ ಕುಂಠಿತ
Team Udayavani, Oct 6, 2020, 12:02 PM IST
ಹುಬ್ಬಳ್ಳಿ: ಕೋವಿಡ್ ಹಾವಳಿ, ಲಾಕ್ ಡೌನ್ ವೇಳೆ ಇತರೆ ಕ್ಷೇತ್ರಗಳಿಗೆ ಹೋಲಿಸಿದರೆ ಆಹಾರ ಉದ್ಯಮ ಒಂದಿಷ್ಟು ಪರವಾಗಿಲ್ಲ ಎಂಬಂತ್ತಾದರೂ, ಸಮಸ್ಯೆಗಳಿಂದ ಹೊರತಾಗಿಲ್ಲ.
ಆದರೆ, ಇದೇ ವೇಳೆ ಹೋಟೆಲ್ ಉದ್ಯಮ ಮಾತ್ರ ಕಂಡರಿಯದ ರೀತಿಯಲ್ಲಿ ನಷ್ಟಕ್ಕೆ ಸಿಲುಕಿದ್ದು, ಇಂದಿಗೂ ಮೇಲೇಳಲು ಹೆಣಗಾಡುತ್ತಿದೆ.
ಲಾಕ್ ಡೌನ್ ಮುಗಿದು ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ ಎನ್ನುವಾಗಲೂ ಶೇ.50 ಆಹಾರ ಧಾನ್ಯಗಳ ವ್ಯಾಪಾರ ಕಡಿಮೆಯಾಗಿದೆ ಎಂಬುದು ವ್ಯಾಪಾರಸ್ಥರ ಅನಿಸಿಕೆಯಾದರೆ, ಉತ್ಪಾದನೆಯಲ್ಲಿ ಶೇ.25-30 ಕಡಿಮೆ ಆಗಿದೆ ಎಂಬುದು ಉದ್ಯಮಿಗಳ ಅನಿಸಿಕೆ. ಆದರೆ, ಹೋಟೆಲ್ ಉದ್ಯಮ ಮಾತ್ರ ಶೇ.90-95 ನಷ್ಟ ಅನುಭವಿಸಿದೆ ಎಂಬುದು ಹೋಟೆಲ್ ಉದ್ಯಮದವರ ಅನಿಸಿಕೆ.
ಆಹಾರ ಉದ್ಯಮ: ಅವಳಿನಗರದಲ್ಲಿ ವಿವಿಧ ಆಹಾರ ಉತ್ಪನ್ನಗಳ ತಯಾರಿಕೆ ಹಾಗೂ ಮೌಲ್ಯ ವರ್ಧನೆ ಉದ್ಯಮಗಳು ಇವೆ. ಲಾಕ್ ಡೌನ್ ಸಂದರ್ಭದಲ್ಲಿ ಕೆಲದಿನ ಉದ್ಯಮ ಬಂದ್ ಆಗಿತ್ತಾದರೂ, ಆಹಾರಧಾನ್ಯ -ಪದಾರ್ಥಗಳ ಪೂರೈಕೆಯಲ್ಲಿ ಕೊರತೆ ಆಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಉದ್ಯಮ ಆರಂಭಕ್ಕೆ ಪ್ರೋತ್ಸಾಹ ನೀಡಿತ್ತು.
ಇದನ್ನೂ ಓದಿ :ಹತ್ರಾಸ್ ಪ್ರಕರಣ: ಮಥುರಾದಲ್ಲಿ ನಾಲ್ವರ ಬಂಧನ, ಪಿಎಫ್ ಐ ಜತೆ ನಂಟಿನ ಶಂಕೆ: ಯುಪಿ ಪೊಲೀಸ್
ಲಾಕ್ ಡೌನ್‌ನಲ್ಲಿ ಅವಲಕ್ಕಿ, ಬೆಲ್ಲ, ಕೇಸರಿ ರವಾ, ತೊಗರಿ, ಕಡಲೆ, ಹೆಸರು, ಉದ್ದು, ವಠಾಣಿ ಇನ್ನಿತರ ಪದಾರ್ಥಗಳು ಹೊರಗಿನಿಂದ ಬರುವುದು ನಿಂತು ಸ್ಥಳೀಯ ಉತ್ಪಾದನೆಗೆ ಹೆಚ್ಚು ಒತ್ತು ಸಿಕ್ಕಿತ್ತು.
ವಿವಿಧ ಬೇಳೆಗಳು, ಅವಲಕ್ಕಿ, ಕೇಸರಿ ರವಾ, ಮೈದಾ, ಪಾಲಿಷ್ ಮಿಲ್, ಎಣ್ಣೆ ಮಿಲ್ ಗಳಿಗೆ ಉತ್ಪಾದನಾ ದೃಷ್ಟಿಯಿಂದ ಹೆಚ್ಚಿನ ಸಮಸ್ಯೆ ಆಗಿಲ್ಲವಾದರೂ, ಶೇ.25-30 ವಹಿವಾಟು ಹಿನ್ನಡೆ ಆಗಿದೆ. ಸಾಲದ ಮೇಲಿನ ಬಡ್ಡಿ ರಿಯಾಯಿತಿ, ಲಾಕ್ ಡೌನ್ ಸಂಕಷ್ಟದಲ್ಲೂ ಜಿಎಸ್‌ಟಿ, ಐಟಿ ಕಡೆಯಿಂದ ಸಮಸ್ಯೆಗಳು ತಮ್ಮದೇ ರೀತಿಯಲ್ಲಿ ಉದ್ಯಮವನ್ನು ಕಾಡಿದ್ದವು. ಇತರರಿಗೆ ಸಿಕ್ಕಂತೆ ತಮಗೂ ಸರ್ಕಾರದಿಂದ ಒಂದಿಷ್ಟು ರಿಯಾಯಿತಿ ಸೌಲಭ್ಯಗಳು ದೊರೆಯಬೇಕೆಂಬುದು ಹಲವು ಉದ್ಯಮಿಗಳ ಅನಿಸಿಕೆ.
ಮೇಲೇಳದ ಹೋಟೆಲ್ ಉದ್ಯಮ
ಕೋವಿಡ್ ಹಾಗೂ ಲಾಕ್ ಡೌನ್‌ನಲ್ಲಿ ಅತಿ ಹೆಚ್ಚು ಹಾನಿಗೆ ಈಡಾದ ಕ್ಷೇತ್ರ ವೆಂದರೆ ಹೋಟೆಲ್ ಉದ್ಯಮ. ಬಹುತೇಕ ಎಲ್ಲ ಹೋಟೆಲ್‌ಗಳು ನಷ್ಟ ಅನುಭವಿಸಿವೆ. ಲಾಕ್‌ಡೌನ್‌ನಲ್ಲಿ ಬಹುತೇಕ ಹೋಟೆಲ್‌ಗಳು ಬಂದ್ ಆಗಿದ್ದವು. ಲಾಕ್ ಡೌನ್ ತೆರವುಗೊಂಡರೂ ಕೊರೊನಾ ಭೀತಿಯಿಂದ ಹೋಟೆಲ್‌ಗಳಿಗೆ ಹೋಗುವವರ ಸಂಖ್ಯೆ ಅತ್ಯಂತ ಕಡಿಮೆ ಎನ್ನಬಹುದಾಗಿದೆ.
ಹುಬ್ಬಳ್ಳಿ ಹೋಟೆಲ್ ಸಂಘದ ಅಡಿಯಲ್ಲಿ ಸುಮಾರು 450ಕ್ಕೂ ಅಧಿಕ ಹೋಟೆಲ್‌ಗಳು ನೋಂದಣಿಯಾಗಿವೆ. ಸಂಘದ ಸದಸ್ಯತ್ವ ಇಲ್ಲದ ಸಣ್ಣ-ಮಧ್ಯಮ ನೂರಾರು ಸಂಖ್ಯೆಯ ಹೋಟೆಲ್‌ಗಳು ಇವೆ. ಕೊರೊನಾ ಕಾರಣದಿಂದ ಶೇ.90-95 ನಷ್ಟ ಅನುಭವಿಸಿದ ಉದ್ಯಮ ಎಂದರೆ ಹೋಟೆಲ್ ಉದ್ಯಮವಾಗಿದೆ. ಇಂದಿಗೂ ಅನೇಕ ಹೋಟೆಲ್‌ಗಳು ನಷ್ಟದ ಹೊಡೆತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ.
ಈಗಲೂ ನಿರೀಕ್ಷಿತ ರೀತಿಯ ವಹಿವಾಟು ನಡೆಯುತ್ತಿಲ್ಲ ಎಂಬುದು ಹೋಟೆಲ್ ಉದ್ಯಮಿಗಳ ಅನಿಸಿಕೆ.
– ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.