ಕೋವಿಡ್ ಎಫೆಕ್ಟ್: ತಲಾ ಆದಾಯ ಖೋತಾ
Team Udayavani, May 10, 2020, 5:57 PM IST
ಮಣಿಪಾಲ : ಕೋವಿಡ್ ಜಾಗತಿಕ ಆರ್ಥಿಕತೆ ಮೇಲೆ ಮಾತ್ರವಲ್ಲದೆ ಜನರ ತಲಾ ಆದಾಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಪೋರ್ಚುಗಲ್‌ನಲ್ಲಿ ನಡೆಸಿದ ಅಧ್ಯಯನವೇ ಇದಕ್ಕೆ ಸಾಕ್ಷಿ. ಇಲ್ಲಿ ಪ್ರತಿ ನಾಲ್ವರ ಪೈಕಿ ಒಬ್ಬನ ತಲಾ ಆದಾಯ ಕುಸಿತಗೊಂಡಿದೆ.
ನ್ಯಾಷನಲ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಈ ಅಧ್ಯಯನವನ್ನು ನಡೆಸಿದ್ದು, ಎಪ್ರಿಲ್ 25 ಮತ್ತು ಮೇ 1ರ ನಡುವೆ ನಡೆದ ಈ ಸಮೀಕ್ಷೆಗೆ 4 ಸಾವಿರ ಜನರನ್ನು ಒಳಪಡಿಸಲಾಗಿದೆ.
ಸಂಪೂರ್ಣ ಖೋತಾ
ಅಧ್ಯಯನದ ಪ್ರಕಾರ ಕೋವಿಡ್-19ರ ನಿಯಂತ್ರಣಕ್ಕಾಗಿ ಜಾರಿ ಮಾಡಲಾಗಿರುವ ಲಾಕ್‌ಡೌನ್ ನಿಯಮಗಳಿಂದಾಗಿ 650 ಯುರೊ (705) ಅಥವಾ ಅದಕ್ಕಿಂತ ಕಡಿಮೆ ತಲಾ ಆದಾಯ ಹೊಂದಿರುವ ನಾಲ್ವರು ಪೋರ್ಚುಗೀಸರ ಪೈಕಿ ಓರ್ವ ವ್ಯಕ್ತಿಯ ಆದಾಯ ಸಂಪೂರ್ಣವಾಗಿ ಕಡಿತವಾಗಿದೆ ಎಂದು ವರದಿ ಹೇಳಿದೆ.
ಕೋವಿಡ್-19 ಸೋಂಕು ಪ್ರಾರಂಭವಾದಾಗಿನಿಂದ ಪೋರ್ಚುಗಲ್‌ನಲ್ಲಿ 650 ಯೂರೊಗಳವರೆಗೆ ತಲಾ ಆದಾಯವಿರುವ ಶೇ.25ರಷ್ಟು ಜನರು ಎಲ್ಲ ರೀತಿಯಿಂದಲೂ ತಮ್ಮ ಗಳಿಕೆಯನ್ನು ಕಳೆದುಕೊಂಡರೆ, ಮಾಸಿಕವಾಗಿ 2,500 ಯುರೋಗಳಷ್ಟು ಅಥವಾ ಅದಕ್ಕಿಂತ ಹೆಚ್ಚಿನ ತಲಾ ಆದಾಯವನ್ನು ಹೊಂದಿರುವ ಶೇ.6ರಷ್ಟು ಜನರಿಗೆ ಮಾತ್ರ ಆದಾಯವಿಲ್ಲದಂತಾಗಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
3.70 ಲಕ್ಷ ನಿರುದ್ಯೋಗಿಗಳು
ಮಾರ್ಚ್ 18 ರಿಂದ ಎಪ್ರಿಲ್ ಅಂತ್ಯದ ವೇಳೆಗೆ ಒಟ್ಟು 91,500 ಜನರು ನಿರುದ್ಯೋಗ ಅರ್ಜಿ ಸಲ್ಲಿಸಿದ್ದು, ಅಧಿಕೃತ ಅಂಕಿ ಅಂಶಗಳ ಪ್ರಕಾರ ಒಟ್ಟಾರೆ ನಿರುದ್ಯೋಗಿಗಳ ಸಂಖ್ಯೆ 3.70 ಲಕ್ಷಕ್ಕೆ ಏರಿದೆ.
ಪೋರ್ಚುಗಲ್‌ನ ಸುಮಾರು 49 ಲಕ್ಷ ಕಾರ್ಮಿಕರಲ್ಲಿ ಶೇ.22ರಷ್ಟು ಕಾರ್ಮಿಕರ ಕನಿಷ್ಠ ಮಾಸಿಕ 635 ಯುರೊಗಳಷ್ಟಿದ್ದು, ಯುರೋಪ್ ಖಂಡಾದ್ಯಂತ ಅತಿ ಕಡಿಮೆ ವೇತನ ಪಾವತಿಸುವ ಪ್ರದೇಶವಾಗಿ ಪಶ್ಚಿಮ ಯುರೋಪ್ ಗುರುತಿಸಿಕೊಂಡಿದೆ ಎಂದು ರಾಯಿಟರ್ಸ್ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Missile Strike: ಉಕ್ರೇನ್ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Israel; ಪ್ರಧಾನಿ ನಿವಾಸಕ್ಕೆ ಬಾಂಬ್ ದಾಳಿ: 3 ಮಂದಿ ಸೆರೆ
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.