ದ.ಕ.: ಶನಿವಾರದ ಎಲ್ಲ ವರದಿ ನೆಗೆಟಿವ್
Team Udayavani, Apr 19, 2020, 11:02 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಯಾವುದೇ ಕೋವಿಡ್ ಪಾಸಿಟಿವ್ ಪ್ರಕರಣ ದಾಖ ಲಾಗಿಲ್ಲ. ಜಿಲ್ಲೆಯಲ್ಲಿ ಶನಿವಾರ 7 ಮಂದಿಯ ಗಂಟಲ ದ್ರವ ಮಾದರಿಯ ಪರೀಕ್ಷಾ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿವೆ.
ಒಟ್ಟು 151 ಮಂದಿಯ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸ ಲಾಗಿದೆ. 260 ಮಂದಿ ಗೃಹ ನಿಗಾ ದಲ್ಲಿದ್ದಾರೆ. ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 15 ಮಂದಿಯ ಪೈಕಿ ಶನಿವಾರ 5 ಮಂದಿ ಬಿಡುಗಡೆಗೊಂಡಿದ್ದಾರೆ. ಫೀವರ್ ಕ್ಲಿನಿಕ್‌ನಲ್ಲಿ ಶನಿವಾರ 67 ಮಂದಿಯ ತಪಾಸಣೆ ನಡೆಸಿದ್ದು, ಒಟ್ಟು 498 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 13 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 12 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ. ಎ. 17ರಂದು ಸೋಂಕು ದೃಢಪಟ್ಟ ಉಪ್ಪಿನಂಗಡಿಯ ವ್ಯಕ್ತಿ ವೆನಾÉಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಶಾ ಕಾರ್ಯಕರ್ತರು ಹಾಗೂ ಎಂಪಿಡಬುÉ é ಕಾರ್ಯಕರ್ತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಒಟ್ಟು 90,963 ಮನೆಗಳ ಸಮೀಕ್ಷೆ ಪೂರ್ಣಗೊಳಿಸಿದ್ದಾರೆ.
ಉಪ್ಪಿನಂಗಡಿ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ
ಎ. 17ರಂದು ಸೋಂಕು ದೃಢ ಪಟ್ಟ ಉಪ್ಪಿನಂಗಡಿಯ 39 ವರ್ಷದ ವ್ಯಕ್ತಿಯು ಮಾ. 20ರಂದು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಮಂಗಳೂರಿಗೆ ಭಾರತಿ ಟ್ರಾವೆಲ್ಸ್ ಎಂಬ ಹೆಸರಿನ (ಬಸ್ ನಂ: ಕೆಎ 51 ಎಡಿ 5832) ಬಸ್‌ನಲ್ಲಿ ಪ್ರಯಾಣಿಸಿರು
ತ್ತಾರೆ. ಆದ್ದರಿಂದ ಆ ಬಸ್ಸಿನಲ್ಲಿ ಪ್ರಯಾಣಿಸಿದ 32 ಮಂದಿ ಕೂಡಲೇ ತಮ್ಮ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ವೈದ್ಯಕೀಯ ತಪಾಸಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಲಕ್ಷ್ಮೀನಗರ ಸೀಲ್‌ಡೌನ್
ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ 13ನೇ ಕೋವಿಡ್ ಪ್ರಕರಣವಾಗಿ ದಾಖಲಾಗಿರುವ ಉಪ್ಪಿನಂಗಡಿಯ ವ್ಯಕ್ತಿಯ ಮನೆ ಇರುವ ಲಕ್ಷ್ಮೀನಗರವನ್ನು ಸೀಲ್‌ಡೌನ್ ಮಾಡಲು ಪುತ್ತೂರು ಸಹಾಯಕ ಕಮಿಷನರ್ ನಿರ್ದೇಶನ ನೀಡಿದ್ದಾರೆ.
ಸೋಂಕು ಪೀಡಿತ ವ್ಯಕ್ತಿಯ ನಿಕಟ ಸಂಪರ್ಕದಲ್ಲಿದ್ದ ಮನೆಯವ ರನ್ನು ಹಾಗೂ ಸಹೋದರರನ್ನು ಹೊರ ಜಗತ್ತಿನೊಂದಿಗೆ ಬೆರೆಯ ದಂತೆ ಮಾಡಲು ಅವರ ಮನೆಗೆ ದಿಗ್ಬಂಧನ ವಿಧಿಸಲಾಗಿದೆ ಎಂದು ಉಪ್ಪಿನಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ತಿಳಿಸಿದ್ದಾರೆ.
ಚಾನೆಲ್ ವಿರುದ್ಧ ದೂರು
ಪುತ್ತೂರಿನ ಚಾನೆಲ್ ಒಂದು ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಎಂಬ ವರದಿ ಬಿತ್ತರಿಸುವಾಗ ದಿಲ್ಲಿಯ ಸಮಾವೇಶವನ್ನು ಪ್ರಕರಣಕ್ಕೆ ಜೋಡಿಸಿ ಸಮಾಜದಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿದೆ. ಇದರಿಂದ ನಮ್ಮ ಕುಟುಂಬದ ಘನತೆಗೆ ಧಕ್ಕೆಯಾಗಿದೆ ಎಂದು ಮನೆಯವರು ಆರೋಪಿಸಿ ಕ್ರಮ ಕೈಗೊಳ್ಳುವಂತೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳೂರು: 80 ಕೈದಿಗಳ ಸ್ಥಳಾಂತರ
ಮಂಗಳೂರು: ಕೋವಿಡ್ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹಾಗೂ ಜೈಲಿನಲ್ಲಿರುವ ಕೈದಿಗಳ ನಡುವೆ ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಮಂಗಳೂರಿನ ಸಬ್ ಜೈಲಿನಿಂದ 80 ಮಂದಿ ವಿಚಾರಣಾಧೀನ ಕೈದಿಗಳನ್ನು ಶನಿವಾರ ಬೇರೆ ಅಕ್ಕಪಕ್ಕದ ಜಿಲ್ಲೆಗಳ ಜೈಲುಗಳಿಗೆ ಸ್ಥಳಾಂತರಿಸಲಾಯಿತು.
40 ವಿಚಾರಣಾಧೀನ ಕೈದಿಗಳನ್ನು ಚಿಕ್ಕಮಗಳೂರು ಜೈಲಿಗೆ ಹಾಗೂ 40 ಮಂದಿಯನ್ನು ಕಾರವಾರ ಜೈಲಿಗೆ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪೊಲೀಸ್ ಬೆಂಗಾವಲಿನಲ್ಲಿ ಸಾಗಿಸಲಾಯಿತು.
ಮಂಗಳೂರು ಸಬ್ ಜೈಲಿನಲ್ಲಿ 210 ಮಂದಿ ವಿಚಾರಣಾಧೀನ ಕೈದಿಗಳನ್ನು ಮಾತ್ರ ಇರಿಸುವ ಸಾಮರ್ಥ್ಯ ಇದೆ. ಆದರೆ ಶನಿವಾರ ಈ ಜೈಲಿನಲ್ಲಿ 6 ಮಹಿಳಾ ಕೈದಿಗಳ ಸಹಿತ ಒಟ್ಟು 311 ಮಂದಿ ಇದ್ದರು. ಇದೀಗ 231 ಮಂದಿ ಕೈದಿಗಳು ಇಲ್ಲಿದ್ದಾರೆ. ಕೋವಿಡ್ ಹರಡದಂತೆ ನೋಡಿಕೊಳ್ಳಲು ಹೊಸದಾಗಿ ಬರುವ ಹಾಗೂ ಆಸ್ಪತ್ರೆಗೆ ದಾಖಲಾಗಿ ಬರುವ ಕೈದಿಗಳಿಗೆ ಪ್ರತ್ಯೇಕ ಸೆಲ್ ಮಾಡಲಾಗಿದೆ. ಇತರ ಸೆಲ್‌ಗಳಲ್ಲಿ ಕೈದಿಗಳು ಹೆಚ್ಚಾದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜೈಲಿನ ಅಧೀಕ್ಷಕ ಚಂದನ್ ಪಟೇಲ್ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.