ಬರ್ತ್‌ಡೇ ಪಾರ್ಟಿಯಿಂದ ಹರಡಿತು ಕೋವಿಡ್
Team Udayavani, May 11, 2020, 4:07 PM IST
ಕ್ಯಾಲಿಫೋರ್ನಿಯಾ: ಇಲ್ಲಿನ ಪಾಸಡೆನಾದಲ್ಲಿ ನಡೆದಿದ್ದ ಹುಟ್ಟುಹಬ್ಬದ ಸಂತೋಷ ಕೂಟದಿಂದಾಗಿ ಕೋವಿಡ್ ಹಬ್ಬುವಿಕೆ ಅಧಿಕಗೊಂಡು, ನಗರವೇ ಕೋವಿಡ್ ಮೂಲವಾಗಿ ಪರಿಣಮಿಸಿತು ಎಂದು ಪಾಸಡೆನಾ ಸಾರ್ವಜನಿಕ ಆರೋಗ್ಯ ಇಲಾಖೆ ಹೇಳಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸದಸ್ಯರು, ಸ್ನೇಹಿತರು ಪಾಲ್ಗೊಂಡಿದ್ದೇ ಕ್ಯಾಲಿಫೋರ್ನಿಯಾವನ್ನು ಕೋವಿಡ್ ಬಲೆಯೊಳಗೆ ನರಳುವಂತೆ ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆೆ.
ಲಾಕ್‌ಡೌನ್‌ನಲ್ಲೇ ಪಾರ್ಟಿ
ನಗರದಲ್ಲಿ ಲಾಕ್‌ಡೌನ್ ನಿರ್ಬಂಧ ಹೇರಲಾದ ಬಳಿಕ ಈ ಪಾರ್ಟಿ ನಡೆದಿತ್ತು. ಇದೇ ಕೋವಿಡ್ ಪ್ರಸರಣೆಗೆ ವೇದಿಕೆಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಪಾರ್ಟಿಯಲ್ಲಿ ಒಬ್ಟಾತ ಮಾಸ್ಕ್ ಧರಿಸದೆ ಕೆಮ್ಮತ್ತಲೇ ಇದ್ದ. ಯಾರೊಬ್ಬರೂ ಸಾಮಾಜಿಕ ಕನಿಷ್ಠ ಅಂತರವನ್ನೂ ಪಾಲಿಸಿರಲಿಲ್ಲ. ಲಾಕ್‌ಡೌನ್ ಘೋಷಣೆಯಾದ ಬಳಿಕವೂ ಇಷ್ಟು ನಿರ್ಲಕ್ಷ್ಯ ತೋರಿದ್ದು ಕ್ಯಾಲಿಫೋರ್ನಿಯ ನಗರವನ್ನೇ ಕೋವಿಡ್ ಕೇಂದ್ರವನ್ನಾಗಿಸಿದೆ. ತನಿಖಾಧಿಕಾರಿಗಳು ಬರ್ತ್‌ಡೇ ಪಾರ್ಟಿಯಲ್ಲಿ ಪಾಲ್ಗೊಂಡವರ ಸಂಪರ್ಕವನ್ನು ಪತ್ತೆ ಹಚ್ಚುತ್ತಾ ಹೋದಂತೆ ಕೋವಿಡ್ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಾ ಹೋಗುತ್ತಿತ್ತು. ಪಾರ್ಟಿಯಲ್ಲಿ ಪಾಲ್ಗೊಂಡ ಐವರಲ್ಲಿ ಆರಂಭಿಕ ಹಂತದಲ್ಲೇ ಕೋವಿಡ್ ವೈರಸ್ ಪತ್ತೆಯಾಗಿತ್ತು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕ್ಯಾಲಿಫೋರ್ನಿಯಾದಲ್ಲಿ ಈಗಾಗಲೇ 66,550ಕ್ಕೂ ಹೆಚ್ಚು ಜನರು ವೈರಸ್ ಸೋಂಕಿಗೆ ಒಳಗಾಗಿದ್ದು, ಕನಿಷ್ಠ 2,687 ಮಂದಿ
ಸಾವನ್ನಪ್ಪಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.
ಲಾಕ್‌ಡೌನ್ ನಿರ್ಬಂಧ ಮತ್ತು ಸಾಮಾಜಿಕ ಅಂತರವನ್ನು ಪಾಲಿಸಿದ್ದರೆ ಇಷ್ಟೊಂದು ಕಷ್ಟದ ಪರಿಸ್ಥಿತಿ ಕ್ಯಾಲಿಫೋರ್ನಿಯಾಕ್ಕೆ ಬರುತ್ತಿರಲಿಲ್ಲ. ಈಗ ಅಂತೂ ಇಲ್ಲಿನವರು “ಮನೆಯಲ್ಲಿ ಮಾತ್ರ ಸುರಕ್ಷೆ’ ಎಂಬುದನ್ನು ನಂಬಿದ್ದಾರೆ. ಹೊರಗೆ ಬರಲೂ ಭಯಪಡುತ್ತಿದ್ದಾರೆ. ಒಂದೇ ಮನೆಯಲ್ಲಿ ವಾಸಿಸದವರ ಸಣ್ಣ ಭೇಟಿಯನ್ನೂ ಇಲ್ಲಿ ನಿಷೇಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.