ಕೋವಿಡ್ ಲಸಿಕೆಯ ಪ್ರಮಾಣ ಪತ್ರದ ಬಗ್ಗೆ ನಿರ್ಲಕ್ಷ್ಯ ವಹಿಸದಿರಿ
ಲಸಿಕೆ ಪ್ರಮಾಣ ಪತ್ರ ಏಕೆ ಬೇಕು?
Team Udayavani, May 31, 2021, 7:15 AM IST
ಕೊರೊನಾ ಲಸಿಕೆಯ ಪ್ರಮಾಣ ಪತ್ರದ ಬಗ್ಗೆ ನಿರ್ಲಕ್ಷ್ಯ ವಹಿಸದಿರಿ. ಈಗ ಅದಕ್ಕೆ ಹೆಚ್ಚಿನ ಸಿಂಧುತ್ವ ಇಲ್ಲದಿದ್ದರೂ, ಭವಿಷ್ಯದಲ್ಲಿ ಅದರ ಅಗತ್ಯತೆ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಎಲ್ಲರೂ ಲಸಿಕೆ ಪಡೆಯಿರಿ ಮತ್ತು ಪ್ರಮಾಣ ಪತ್ರ ಸರಿಯಾಗಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಿ.
ಏನಿದು ಪ್ರಮಾಣ ಪತ್ರ?
ಕೊರೊನಾಲಸಿಕೆ ಪಡೆದ ಬಳಿಕ ನಿಮ್ಮ ಮೊಬೈಲ್‌ಗೆ ಸಂದೇಶವೊಂದು ಬರುತ್ತದೆ. ಅದರಲ್ಲಿರುವ ಲಿಂಕ್ ಓಪನ್ ಮಾಡಿದರೆ, “ಲಸಿಕೆ ಪ್ರಮಾಣಪತ್ರ’ ಡೌನ್‌ಲೋಡ್ ಆಗುತ್ತದೆ. ಎರಡೂ ಡೋಸ್‌ನ ಬಳಿಕ ಬರುವ ಸಂದೇಶದಲ್ಲಿನ ಲಿಂಕ್ ಅನ್ನು ಅಂತಿಮ ಪ್ರಮಾಣ ಪತ್ರ ಎಂದು ಪರಿಗಣಿಸಲಾಗುತ್ತದೆ.
ಬೇಕೇ ಬೇಕಾ?
ಇದು ನೀವು ಯಶಸ್ವಿಯಾಗಿ ಲಸಿಕೆ ಸ್ವೀಕರಿಸಿದ್ದೀರಿ ಎಂಬುದನ್ನು ದೃಢಪಡಿಸುವ ಪ್ರಮಾಣ ಪತ್ರ. ಸದ್ಯಕ್ಕೆ ವಿದೇಶಗಳಿಗೆ ಪ್ರಯಾಣ ಬೆಳೆಸಬೇಕೆಂದರೆ ಈ ಪ್ರಮಾಣ ಪತ್ರ ತೋರಿಸುವುದು ಕಡ್ಡಾಯ. ನೀವು ವಿಮಾನ ಪ್ರಯಾಣ ಮಾಡದಿದ್ದರೂ ಪ್ರಮಾಣ ಪತ್ರ ಹೊಂದಿರಬೇಕು. ಏಕೆಂದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕ ಸಾರಿಗೆ, ರೈಲ್ವೇ ಹಾಗೂ ಇತರ ಸೇವೆಗಳನ್ನು ಪಡೆಯಲು ಅದು “ದೃಢೀಕೃತ ಪುರಾವೆ’ ಎಂದು ಪರಿಗಣಿಸಲ್ಪಡಬಹುದು.
ಆಧಾರ್ ನಂತೆ ಇದರ ಕಾಪಿ ಇಟ್ಟುಕೊಳ್ಳಬೇಕೇ?
ಬೇಕಾಗಿಲ್ಲ. ಏಕೆಂದರೆ, ನೀವು ಕೋವಿನ್ ಆ್ಯಪ್ ನಲ್ಲಿ ಯಾವಾಗ ಬೇಕಿದ್ದರೂ ಅದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಸದಾಕಾಲ ನಿಮ್ಮ ಪ್ರಮಾಣ ಪತ್ರ ಲಭ್ಯವಿರುವಂತೆ ಕೋವಿನ್ ಪೋರ್ಟ ಲ್ ಅನ್ನು ಸಿದ್ಧಪಡಿಸಲಾಗಿದೆ. ಸೂಕ್ತ ಮಾಹಿತಿ ನೀಡಿ ಲಾಗ್ ಇನ್ ಆದರೆ ಸಾಕು. ಹಾರ್ಡ್ ಕಾಪಿ ಬೇಕೆಂದರೆ ಮುದ್ರಿಸಿ ಇಟ್ಟು ಕೊಳ್ಳಬಹುದು.
ಯಾವ ದೇಶದಲ್ಲಿ ಮಾನ್ಯತೆಯಿದೆ?
ಯುಎಇ, ಸೌದಿ ಅರೇಬಿಯಾ, ಒಮನ್, ದುಬಾೖ, ಕುವೈಟ್, ಮಾಲ್ಡೀವ್ಸ್, ನೇಪಾಲ ಬೆಲ್ಜಿಯಂ, ಇಟಲಿ ಹಾಗೂ ಇತರ ಕೆಲ ದೇಶಗಳಲ್ಲಿ ಭಾರತದ ಲಸಿಕೆ ಪ್ರಮಾಣಪತ್ರಕ್ಕೆ ಮಾನ್ಯತೆ ನೀಡಲಾಗಿದೆ. ಆದರೆ ಸದ್ಯಕ್ಕೆ ನಿರ್ದಿಷ್ಟ ಲಸಿಕೆಗಳಿಗೆ ಮಾತ್ರ ಎಂಬ ಷರತ್ತು ಹಾಕಲಾಗಿದೆ. ಭವಿಷ್ಯದಲ್ಲಿ ಇತರ ದೇಶಗಳೂ ಮಾನ್ಯತೆ ನೀಡಬಹುದು.
ಅದರಲ್ಲಿರುವ ಮಾಹಿತಿಯ ಮಹತ್ವ
ಪ್ರಮಾಣಪತ್ರದಲ್ಲಿ ನಿಮ್ಮ ಹೆಸರು, ಜನ್ಮ ದಿನ, ಆಧಾರ್‌ನ ಕೊನೆಯ 4 ಅಂಕಿಗಳು, ಲಸಿಕೆ ಪಡೆದ ದಿನ, ಲಸಿಕೆಯ ಹೆಸರು ಮತ್ತು ಲಸಿಕೆಯ ಬ್ಯಾಚ್ ನಂಬರ್ ನಮೂದಿಸಿರಲಾಗುತ್ತದೆ. ಯಾವುದಾದರೂ ಬ್ಯಾಚ್‌ನ ಲಸಿಕೆಯಲ್ಲಿ ದೋಷ ಕಂಡುಬಂದರೆ, ಅಂಥ ಬ್ಯಾಚ್‌ನ ಲಸಿಕೆ ಪಡೆದವರ ಪತ್ತೆಗೆ ಇದು ನೆರವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.