ಭಾರತದಿಂದ ಬಂದವರಲ್ಲೇ ಕೋವಿಡ್ ಸೋಂಕು: ನೇಪಾಲ
Team Udayavani, Jun 11, 2020, 2:05 PM IST
ಕಾಠ್ಮಂಡು: ನೇಪಾಲಕ್ಕೆ ಕೋವಿಡ್ ಸೋಂಕು ಹಬ್ಬಲು ಭಾರತವೇ ಕಾರಣ ಎಂದು ಈ ಮೊದಲು ದೂರಿದ್ದ ನೇಪಾಲದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರೀಗ ಮತ್ತೆ ಭಾರತವನ್ನು ದೂಷಿಸುವ ಮಾತುಗಳನ್ನಾಡಿದ್ದಾರೆ.
ಭಾರತದಿಂದ ಬಂದ ನೇಪಾಲಿಗರಲ್ಲಿ ಶೇ.85ರಷ್ಟು ಮಂದಿಗೆ ಸೋಂಕು ಇದೆ ಎಂದು ಹೇಳಿದ್ದಾರೆ. ಅಲ್ಲದೇ ಭಾರತದಿಂದ ಕಾರ್ಮಿಕರು ಬರುತ್ತಿದ್ದಂತೆ ಸೋಂಕಿತರ ಸಂಖ್ಯೆಯೂ ಹೆಚ್ಚಾಗಿದೆ. ನಮ್ಮ ನಿರೀಕ್ಷೆಗೂ ಮೀರಿ ಜನರು ತಾಯ್ನಾಡಿಗೆ ಬಂದಿದ್ದು, ಅವರನ್ನು ಸೂಕ್ತ ರೀತಿಯಲ್ಲಿ ಪ್ರತ್ಯೇಕವಾಗಿರಿಸಲು, ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ ಎಂದಿದ್ದಾರೆ.
ನೇಪಾಲದಲ್ಲಿ ಹೊಸ 279 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸಂಖ್ಯೆ 4364ಕ್ಕೇರಿದೆ. ಈವರೆಗೆ 15 ಮಂದಿ ಮೃತಪಟ್ಟಿದ್ದಾರೆ. ಭಾರತದೊಂದಿಗೆ ಗಡಿ ಹಂಚಿಕೊಂಡ 2ನೇ ಪ್ರಾಂತ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಇದೇ ವೇಳೆ ಕೋವಿಡ್ ನಿಯಂತ್ರಣಕ್ಕೆ ಒಲಿ ಅವರ ಸರಕಾರ ವಿಫಲವಾಗಿದೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲೇ ಅವರು ಭಾರತದ ಮೇಲೆ ದೂರು ಹೇಳುತ್ತಿದ್ದಾರೆ ಎಂಬುದು ಅಲ್ಲಿನ ರಾಜಕೀಯ ವಲಯ ಹೇಳುತ್ತಿದೆ. ಎರಡು ತಿಂಗಳು ಕಾಲ ಲಾಕ್‌ಡೌನ್ ಮಾಡಿದರೂ ನೇಪಾಲದಲ್ಲಿ ಸೋಂಕು ಹರಡುವುದು ನಿಯಂತ್ರಣಕ್ಕೆ ಬಂದಿಲ್ಲ. ಆದರೆ ಕ್ವಾರಂಟೈನ್ ಕೇಂದ್ರಗಳೇ ಈಗ ಕೋವಿಡ್ ಹಾಟ್‌ಸ್ಪಾಟ್‌ಗಳಾಗಿದ್ದು ಅಲ್ಲಿ ಕೋವಿಡ್ ಇದ್ದವರಿಂದ ಇಲ್ಲದವರಿಗೆ ಅತಿ ಹೆಚ್ಚು ಸೋಂಕು ಹರಡಿರುವುದು ಸಾಬೀತಾಗಿದೆ. ನೇಪಾಲದ ಕ್ವಾರಂಟೈನ್ ಕೇಂದ್ರಗಳಲ್ಲಿ ಕನಿಷ್ಠ ಮೂಲಸೌಕರ್ಯವೂ ಇಲ್ಲ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
C.T.Ravi ಪ್ರಕರಣ ಸಿಐಡಿಗೆ ನೀಡಿದ್ದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಆಕ್ಷೇಪ
Donald Trump ಸೋಲಿಸುತ್ತಿದ್ದೆ, ಪಕ್ಷಕ್ಕಾಗಿ ಹಿಂದೆ ಸರಿದೆ: ಅಧ್ಯಕ್ಷ ಜೋ ಬೈಡೆನ್
ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ
ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ
ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್’ ದ್ವಿತೀಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.