ಕೋವಿಡ್ ವಿರುದ್ಧ ಹೋರಾಟಕ್ಕೆ ರಾಜ್ಯದಲ್ಲೇ ಪ್ರಥಮ ವಾರ್ ರೂಮ್ ಗಂಗಾವತಿ ಆರಂಭ
Team Udayavani, Jan 25, 2022, 4:07 PM IST
ಗಂಗಾವತಿ : ಕೋವಿಡ್ 3ನೆಯ ಅಲೆಯ ಹಿನ್ನೆಲೆಯಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ .ಶೇ.90 ರಷ್ಟು ಸೋಂಕಿತರು ಮನೆಯಲ್ಲಿಯೇ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಅಗತ್ಯ ಮಾಹಿತಿಯನ್ನು ನೀಡಲು ಆರೋಗ್ಯ ಇಲಾಖೆ ರಾಜ್ಯದಲ್ಲಿಯೇ ಪ್ರಥಮವಾಗಿ ಗಂಗಾವತಿಯಲ್ಲಿ ಕೋವಿಡ್ ವಾರ್ ರೂಮ್ ಸ್ಥಾಪನೆ ಮಾಡಿದೆ.
ಶಾಸಕ ಪರಣ್ಣ ಮುನವಳ್ಳಿ ಕೋವಿಡ್ ವಾರ್ ರೂಂನ ಉದ್ಘಾಟನೆ ಮಾಡಿ ಮಾತನಾಡಿ, ಕೋವಿಂದ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಅತಿ ಹೆಚ್ಚು ಜನರು ಸಾವನ್ನಪ್ಪಿದ್ದು ಮೂರನೇ ಅಲೆಯಲ್ಲಿ ಲಸಿಕೆಯನ್ನು ಪಡೆದಿದ್ದರಿಂದ ಸಾವಿನ ಪ್ರಮಾಣ ಕಡಿಮೆಯಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇಚ್ಛಾಶಕ್ತಿ ಮತ್ತು ಮುಂದಾಲೋಚನೆಯ ಪರಿಣಾಮವಾಗಿ ದೇಶದ ಕೋಟ್ಯಾಂತರ ಮಂದಿ ಲಸಿಕೆಯನ್ನು ಪಡೆದು ದೈಹಿಕ ಸಾಮರ್ಥ್ಯವನ್ನು ಹೆಚ್ಚು ಮಾಡಿಕೊಂಡಿರುವುದರಿಂದ ಕೊರೋನಾ ಮೂರನೇ ಅಲೆಯ ಪರಿಣಾಮ ಅಷ್ಟಾಗಿ ಆಗುತ್ತಿಲ್ಲ ಮನೆಯಲ್ಲಿಯೇ ಪ್ರತ್ಯೇಕವಾಗಿ ಎದ್ದು ಕೊರೊನಾ ಚಿಕಿತ್ಸೆಯನ್ನು ಪಡೆಯುವ ಮೂಲಕ ಜನರು ಆರೋಗ್ಯವಂತರಾಗಬೇಕು.
ಆರೋಗ್ಯ ಇಲಾಖೆ ಗಂಗಾವತಿಯಲ್ಲಿ ಪ್ರಥಮವಾಗಿ ಕೊರೊನಾ ಮಾಹಿತಿ ನೀಡಲು ವಾರ್ ರೂಮ್ ಸ್ಥಾಪನೆ ಮಾಡಿದ್ದು ಹೆಮ್ಮೆಯ ವಿಷಯವಾಗಿದೆ ಗಂಗಾವತಿ ಎಲ್ಲ ಸೌಕರ್ಯಗಳಿರುವ ಆಸ್ಪತ್ರೆಯಾಗಿದ್ದು ಇಲ್ಲಿಯ ವೈದ್ಯರು ಫೋನ್ ಮೂಲಕ ಸಂಪರ್ಕಿಸುವ ಕೊರೊನಾ ಸೋಂಕಿತರಿಗೆ ಸೂಕ್ತ ಸಲಹೆ ನೀಡುವ ಮೂಲಕ ಅವರಿಗೆ ಆತ್ಮ ಸ್ಥೈರ್ಯ ತುಂಬಲಿದ್ದಾರೆ.ಕೊರೊನಾ ರೋಗವನ್ನು ಸೂಕ್ತ ಚಿಕಿತ್ಸೆ ಮತ್ತು ಆತ್ಮಸ್ಥೈರ್ಯದ ಮೂಲಕ ಎದುರಿಸುವ ಅನಿವಾರ್ಯತೆ ಇದ್ದು ಸಾಮಾಜಿಕ ಅಂತರ ಮತ್ತು ಕಡ್ಡಾಯ ಮಾಸ್ಕ್ ಧರಿಸುವ ಮೂಲಕ ಕೊರೊನಾ ಜತೆಗೆ ಜಯಿಸಬೇಕಿದೆ ಎಂದರು .
ಈ ಸಂದರ್ಭದಲ್ಲಿ ಡಾ. ಈಶ್ವರ ಸವಡಿ ಡಾ. ಜಿ ಎಂ ಮಹೇಶ್ ಡಾ. ರಾಘವೇಂದ್ರ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.