ಕೋವಿಡ್‌: ಈಗ ವಿಶ್ವದಲ್ಲೇ ಎರಡನೇ ಸ್ಥಾನಿಯಾದ ಬ್ರಜಿಲ್‌

Team Udayavani, Jun 14, 2020, 4:52 PM IST

ಕೋವಿಡ್‌: ಈಗ ವಿಶ್ವದಲ್ಲೇ ಎರಡನೇ ಸ್ಥಾನಿಯಾದ ಬ್ರಜಿಲ್‌

ರಿಯೋ ಡಿ ಜನೈರೋ: ಕೋವಿಡ್‌ ಪ್ರಕರಣಗಳ ತೀವ್ರವಾಗಿ ಏರುತ್ತಿರುವಂತೆ ಜಗತ್ತಿನ ಎರಡನೇ ಹಾಟ್‌ಸ್ಪಾಟ್‌ ಆಗಿ ಬ್ರಜಿಲ್‌ ಬದಲಾಗಿದೆ. ಇದರೊಂದಿಗೆ ಅಮೆರಿಕ ಖಂಡವೇ ಕೋವಿಡ್‌ ಹಾವಳಿ ತೀವ್ರವಾಗಿರುವ ಪ್ರಮುಖ ತಾಣವಾಗಿ ಗುರುತಿಸಲ್ಪಟ್ಟಿದೆ.

ಶುಕ್ರವಾರ ಒಂದೇ ದಿನ ಬ್ರಜಿಲ್‌ನಲ್ಲಿ 909 ಸಾವುಗಳು ಸಂಭವಿಸಿದ್ದು, 41,828 ಪ್ರಕರಣಗಳು ವರದಿಯಾಗಿದ್ದವು. ಈ ಮೂಲಕ ಸಂಖ್ಯೆ ಲೆಕ್ಕಾಚಾರದಲ್ಲಿ ಬ್ರಿಟನ್‌ ಅನ್ನು ಬ್ರಜಿಲ್‌ ಮೀರಿಸಿದೆ. ಮೊದಲನೇ ಸ್ಥಾನಿಯಾಗಿ ಅಮೆರಿಕವಿದೆ. ಅಧಿಕೃತ ಮೂಲಗಳು ಪ್ರಕಾರ, ಕಳೆದ ಹಲವು ದಿನಗಳಿಂದ ಬ್ರಜಿಲ್‌ನಲ್ಲಿ ಕೋವಿಡ್‌ ಸೋಂಕು ಪೀಡಿತರ ಸಂಖ್ಯೆ ತೀವ್ರವಾಗಿ ಏರುತ್ತಿದೆ. ಅಲ್ಲದೇ ನೈಜ ಪರಿಸ್ಥಿತಿಯು ಈಗಿನ ಅಂಕಿ ಅಂಶಕ್ಕಿಂತ 10-15 ಪಟ್ಟು ಹೆಚ್ಚಿರಬಹುದು ಎಂದು ಹೇಳಲಾಗಿದೆ. ದಕ್ಷಿಣ ಅಮೆರಿಕದ ಅತಿ ದೊಡ್ಡ ದೇಶವಾಗಿರುವ ಮತ್ತು ಆರ್ಥಿಕವಾಗಿಯೂ ಬಲಿಷ್ಠವಾಗಿರುವ ಬ್ರಜಿಲ್‌ನಲ್ಲಿ ಕೋವಿಡ್‌ ಸೋಂಕು ಲೆಕ್ಕಕ್ಕೇ ಸಿಗದಂತೆ ಹಬ್ಬುತ್ತಿರುವುದು ಅಲ್ಲಿನ ಆಡಳಿತಕ್ಕೆ ತೀವ್ರ ಆತಂಕ ತಂದಿದೆ. ಒಟ್ಟು ಸೋಂಕು ಪ್ರಕರಣಗಳು 8,28,810ಕ್ಕೇರಿವೆ.

ಬ್ರಜಿಲ್‌ನಲ್ಲಿ ಮೊದಲನೇ ಬಾರಿಗೆ ಕೋವಿಡ್‌ ಸೋಂಕು ಮೂರೂವರೆ ತಿಂಗಳ ಹಿಂದೆ ವರದಿಯಾಗಿತ್ತು. ಆಗ ಕೋವಿಡ್‌ ಸೋಂಕು ನಿಯಂತ್ರಣದಲ್ಲಿದೆ ಎಂದು ಕಂಡಿದ್ದರೆ, ಇಂದು ಕೋವಿಡ್‌ ಸೋಂಕಿಗೆ ಯಾವುದೇ ನಿಯಂತ್ರಣವೇ ಇಲ್ಲವಾಗಿದೆ. ಈ ವಿಚಾರದಲ್ಲಿ ಸರಕಾರ ವನ್ನು ದೂರುವುದಕ್ಕೂ ಬಾರದು, ದೂರದೇ ಇರುವುದಕ್ಕೂ ಬಾರದು ಎಂದು ಪರಿಣತರು ಹೇಳುತ್ತಿದ್ದಾರೆ.

ಲಾಕ್‌ಡೌನ್‌ ಸಡಿಲ
ಪ್ರಕರಣಗಳ ಸಂಖ್ಯೆ ಏರುತ್ತಿದ್ದರೂ ಬ್ರಜಿಲ್‌ ಕ್ಯಾರೇ ಅಂದಿಲ್ಲ. ಅದು ಆರ್ಥಿಕ ಹಿನ್ನಡೆಯ ಆತಂಕ ಎದುರಿಸುತ್ತಿರುವುದರಿಂದ ಒಂದೊಂದಾಗಿ ವ್ಯವಹಾರ, ಉದ್ಯಮ ವಲಯಗಳನ್ನು ತೆರೆಯುತ್ತಿದೆ. ಪ್ರಮುಖ ನಗರಗಳಾದ ರಿಯೋ ಡಿ ಜನೈರೋ ಮತ್ತು ಸಾವೋ ಪೌಲೋ ನಗರದಲ್ಲಿ ಆರ್ಥಿಕತೆ ಪುನರಾರಂಭಿಸುವ ಎಲ್ಲ ಕ್ರಮಗಳನ್ನು ಮುಕ್ತವಾಗಿರಿಸಲಾಗಿದೆ. ಇನ್ನು ಇದೇ ನಗರಗಳಲ್ಲಿ ಕೋವಿಡ್‌ ಸೋಂಕಿನ ಪ್ರಮಾಣವೂ ಅತಿ ಹೆಚ್ಚಾಗಿದ್ದು, ಸರಕಾರ ಲಾಕ್‌ಡೌನ್‌ ಸಡಿಲಗೊಳಿಸಿದ ಕ್ರಮಗಳು ತೀವ್ರ ಆತಂಕವನ್ನೂ ಸೃಷ್ಟಿಸಿವೆ. ಸಾವೋ ಪೌಲೋದಲ್ಲಿ 46 ಲಕ್ಷ ನಿವಾಸಿಗಳಿದ್ದು, ಇವರಲ್ಲಿ 1.67 ಲಕ್ಷ ಮಂದಿಗೆ ಕೋವಿಡ್‌ ತಗುಲಿದೆ. ಈ ನಗರದಲ್ಲಿ ಈವರೆಗೆ 10,368 ಮಂದಿ ಮೃತಪಟ್ಟಿದ್ದಾರೆ. ರಿಯೋ ಡಿ ಜನೈರೋದಲ್ಲಿ 78 ಸಾವಿರ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, 7,417 ಸಾವುಗಳು ಸಂಭವಿಸಿವೆ.

ಆ ದೇಶದಲ್ಲಿ ಲಾಕ್‌ಡೌನ್‌ ಸಡಿಲಿಕೆ ಬಗ್ಗೆ ಪರ ವಿರೋಧ ಅಭಿಪ್ರಾಯಗಳಿದ್ದರೂ, ಅಲ್ಲಿನ ಹೂಡಿಕೆ ಕಂಪೆನಿಯೊಂದು ನಡೆಸಿದ ಸಮೀಕ್ಷೆ ಪ್ರಕಾರ ಲಾಕ್‌ಡೌನ್‌ ತೆರವಿಗೆ ಶೇ.52 ಮಂದಿ ಬೆಂಬಲಿಸಿದ್ದಾರಂತೆ. ಶೇ.44ರಷ್ಟು ಮಂದಿ ಲಾಕ್‌ಡೌನ್‌ ತೆರೆಯುವುದು ಬೇಡ ಎಂದು ಹೇಳಿದ್ದಾರಂತೆ. ಕಳೆದ ವಾರ ಇದೇ ಕಂಪೆನಿ ಸಮೀಕ್ಷೆ ನಡೆಸಿದ್ದಾಗ ಕೋವಿಡ್‌ ಅನ್ನು ದೂರ ಮಾಡಲು ಸಾಮಾಜಿಕ ಅಂತರ ಅಗತ್ಯ ಎಂದು ಶೇ.76ರಷ್ಟು ಮಂದಿ ಹೇಳಿದ್ದರಂತೆ.

ಟಾಪ್ ನ್ಯೂಸ್

Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ

Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ

Dense Smog: ಉತ್ತರಪ್ರದೇಶದಲ್ಲಿ ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

11

Actor Siddique: ಅತ್ಯಾಚಾರ ಆರೋಪ; ನಟ ಸಿದ್ದಿಕ್‌ಗೆ‌ ನಿರೀಕ್ಷಣಾ ಜಾಮೀನು ಮಂಜೂರು

Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್‌ ಡೌನ್…‌AQI ಮಟ್ಟ 2000!

Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್‌ ಡೌನ್…‌AQI ಮಟ್ಟ 2000!

Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್‌ ವಿವಾಹ?

Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್‌ ವಿವಾಹ?

5-belthangady

Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

Fraud: “ವಿಡಿಯೋಗೆ ಲೈಕ್‌ ನೀಡಿ’ 13.97 ಲಕ್ಷ ಕಳೆದುಕೊಂಡರು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್‌ ಡೌನ್…‌AQI ಮಟ್ಟ 2000!

Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್‌ ಡೌನ್…‌AQI ಮಟ್ಟ 2000!

Major security breach: ಬ್ರಿಟನ್‌ನ ಅರಮನೆ ಆವರಣಕ್ಕೇ ನುಗ್ಗಿ ವಾಹನ ಕದ್ದೊಯ್ದ ಕಳ್ಳರು!

Major security breach: ಬ್ರಿಟನ್‌ನ ಅರಮನೆ ಆವರಣಕ್ಕೇ ನುಗ್ಗಿ ವಾಹನ ಕದ್ದೊಯ್ದ ಕಳ್ಳರು!

G20 Summit: : ಪ್ರಧಾನಿ ನರೇಂದ್ರ ಮೋದಿ, ಬೈಡೆನ್‌ ಚರ್ಚೆ

G20 Summit: : ಪ್ರಧಾನಿ ನರೇಂದ್ರ ಮೋದಿ, ಬೈಡೆನ್‌ ಚರ್ಚೆ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

6-uv-fusion

Development: ಭಾರತದ ಅಭಿವೃದ್ಧಿಯಲ್ಲಿ ಯುವ ಶಕ್ತಿಯ ಪ್ರಾಮುಖ್ಯತೆ

Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ

Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ

ಹರಗಾಪುರ ಕೇಸ್‌ ಗೆ ತಿರುವು: ದರೋಡೆ ಆಗಿದ್ದು 75 ಲಕ್ಷ ರೂ., ಸಿಕ್ಕಿದ್ದು ಒಂದು ಕೋಟಿ ರೂ.!

ಹರಗಾಪುರ ಕೇಸ್‌ ಗೆ ತಿರುವು: ದರೋಡೆ ಆಗಿದ್ದು 75 ಲಕ್ಷ ರೂ., ಸಿಕ್ಕಿದ್ದು ಒಂದು ಕೋಟಿ ರೂ.!

Dense Smog: ಉತ್ತರಪ್ರದೇಶದಲ್ಲಿ ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ

11

Actor Siddique: ಅತ್ಯಾಚಾರ ಆರೋಪ; ನಟ ಸಿದ್ದಿಕ್‌ಗೆ‌ ನಿರೀಕ್ಷಣಾ ಜಾಮೀನು ಮಂಜೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.