![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 5, 2022, 1:07 AM IST
ಸಾಂದರ್ಭಿಕ ಚಿತ್ರ.
ಕಡಬ: ಕೋಡಿಂಬಾಳ ಪೇಟೆಯ ಕೋಳಿ ಮಾಂಸದ ಅಂಗಡಿಯಲ್ಲಿ ಮಾಂಸ ಖರೀದಿಸಿದ ಗ್ರಾಹಕನಿಗೆ ಅಂಗಡಿ ಮಾಲಕ ಚಿಲ್ಲರೆ ನೀಡುವ ವೇಳೆ 100 ರೂ. ನಕಲಿ ನೋಟು ನೀಡಿದ ಘಟನೆ ಶನಿವಾರ ನಡೆದಿದೆ.
ಅಸಲಿ ನೋಟನ್ನೇ ಹೋಲುವ 100 ರೂ. ಕಲರ್ ಜೆರಾಕ್ಸ್ ನೋಟನ್ನು ಅಂಗಡಿಯಿಂದ ಪಡೆದ ಗ್ರಾಹಕ ಬಳಿಕ ಆಟೋದಲ್ಲಿ ಪ್ರಯಾಣಿಸುವಾಗ ಅದನ್ನು ಆಟೋ ಚಾಲಕ ರಾಜೇಶ್ ಅವರಿಗೆ ನೀಡಿದ್ದ. ನೋಟು ನಕಲಿ ಎಂದು ಪತ್ತೆ ಮಾಡಿದ ಆಟೋ ಚಾಲಕ ರಾಜೇಶ್ ಕಡಬ ಪೊಲೀಸರಿಗೆ ನೀಡಿದ ಮಾಹಿತಿಯಂತೆ ಪೊಲೀಸರು ಕೋಳಿ ಮಾಂಸದ ಅಂಗಡಿಗೆ ತೆರಳಿ ಅಂಗಡಿ ಮಾಲಕ ಅಶ್ರಫ್‌ನನ್ನು ವಿಚಾರಣೆಗೊಳಪಡಿಸಿದ್ದಾರೆ.
ಯಾರೋ ಗ್ರಾಹಕರು ನೀಡಿದ ನೋಟನ್ನು ಸರಿಯಾಗಿ ಗಮನಿಸಿದೆ ಅಸಲಿ ಎಂದೇ ತಿಳಿದು ನಾನು ಇನ್ನೋರ್ವ ಗ್ರಾಹಕನಿಗೆ ನೀಡಿದ್ದೆ ಎಂದು ಅಶ್ರಫ್ ವಿವರಣೆ ನೀಡಿದ್ದಾರೆ. ಸಾರ್ವಜನಿಕರು ವ್ಯವಹರಿಸುವಾಗ ನಕಲಿ ನೋಟಿನ ಬಗ್ಗೆ ಎಚ್ಚರಿಕೆ ವಹಿಸುವಂತೆ ಕಡಬ ಎಸ್‌ಐ ಆಂಜನೇಯ ರೆಡ್ಡಿ ತಿಳಿಸಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.