![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Jul 12, 2022, 1:35 AM IST
ಸಿದ್ದಾಪುರ: ಮಚ್ಚಟ್ಟು ಗ್ರಾಮದ ಕುಂದ ಬಳಿ ಮೆಸ್ಕಾಂ ವಿಭಾಗದ 4 ಕಂಬಗಳನ್ನು ತುಂಡು ಮಾಡಿ, ಅಲ್ಯೂಮಿನಿಯಂ ವಾಹಕ ಗಳನ್ನು ಹಾಗೂ ಅಲ್ಲಿಯೇ ಶೆಡ್‌ಗಳಲ್ಲಿ ಇದ್ದ ಪಂಪುಸೆಟ್‌ಗಳನ್ನು ಕಳವು ಮಾಡಿದ ಆರೋಪಿಗಳನ್ನು ಆಮಾಸೆಬೈಲು ಪೊಲೀಸರು 24 ಗಂಟೆಯ ಒಳಗೆ ಬಂಧಿಸಿದ್ದಾರೆ.
ಆರೋಪಿಗಳಾದ ಆಶೋಕ ನಾಯ್ಕ (22), ಮೂರ್ತಿ ನಾಯ್ಕ (38), ಮೊಹಿದ್ದಿನ್ ಕೆ.ಎಸ್. (48) ನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ದ್ದಾರೆ. ಆರೋಪಿ ಗಳಿಂದ ಕಳವುಗೈದ ಸೊತ್ತು, ಕಳವಿಗೆ ಬಳಸಿದ 2 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ಮೌಲ್ಯ 90 ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್ ಅವರ ನಿರ್ದೇಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ನೇತೃತ್ವದಲ್ಲಿ ಅಮಾಸೆಬೈಲು ಠಾಣೆಯ ಉಪನಿರೀಕ್ಷಕ ಸುಬ್ಬಣ್ಣ, ಸಹಾಯಕ ಉಪನಿರೀಕ್ಷಕ ಉಮೇಶ ನಾಯ್ಕ, ಗೋವಿಂದರಾಜು, ಹೆಡ್‌ಕಾನ್‌ಸ್ಟೆಬಲ್ ಕೃಷ್ಣ, ಸೂರ ನಾಯ್ಕ, ಅಪರಾಧ ವಿಭಾಗದ ಸಿಬಂದಿ ನವೀನ್, ಶರತ್, ಪ್ರದೀಪ್ ಶೆಟ್ಟಿ, ಚಾಲಕ ಪ್ರಕಾಶ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
You seem to have an Ad Blocker on.
To continue reading, please turn it off or whitelist Udayavani.