ಎರಡು ಕೋಟಿ ಮೌಲ್ಯದ ಡ್ರಗ್ಸ್‌ ವಶ; ಇಬ್ಬರ ಬಂಧನ

ಕೇಂದ್ರ ಅಪರಾಧ ವಿಭಾಗ ‌ ಪೊಲೀಸರಿಂದ ಜಾರ್ಖಂಡ್‌ ಮೂಲದ ಇಬ್ಬರ ಬಂಧನ

Team Udayavani, Sep 4, 2021, 3:34 PM IST

Crime

ಬೆಂಗಳೂರು: ಗ್ರಾಹಕರ ಬೇಡಿಕೆಗೆ ತಕ್ಕಂತೆ ಮನೆ ಬಾಗಿಲಿಗೆ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ ಜಾರ್ಖಂಡ್‌ ಮೂಲದ ಇಬ್ಬರು ಆರೋಪಿಗಳನ್ನು
ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಜಾರ್ಖಂಡ್‌ ಮೂಲದ ವಿಕಾಸ್‌ ಕುಮಾರ್‌ ಸಿಂಗ್‌(25) ಮತ್ತು ಶಿವಂ ಸಿಂಗ್‌(27) ಬಂಧಿತರು. ಅವರಿಂದ ಎರಡು ಕೋಟಿ ರೂ. ಮೌಲ್ಯದ 150 ಎಂಡಿಎಂಎ,  ಮಾತ್ರೆಗಳು, 400 ಗ್ರಾಂ ಚರಸ್‌, 180 ಎಲ್‌ಎಸ್‌ಡಿ ಮಾತ್ರೆಗಳು, 3,520 ಗ್ರಾಂ ಹ್ಯಾಶಿಷ್‌ ಆಯಿಲ್‌, 50 ಗ್ರಾಂ ಹೈಡ್ರೋ ಗಾಂಜಾ, 30 ಕೆ.ಜಿ. ಗಾಂಜಾ, 2 ಮೊಬೈಲ್‌ಗ‌ಳು, ಎರಡು ಎಲೆಕ್ಟ್ರಾನಿಕ್‌ ತೂಕದ ಯಂತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ರೋಹಿತ್‌, ರವಿ, ಸೈಯದ್‌, ಅಕ್ಷಯ್‌ ಕುಮಾರ್‌ ಎಂಬುವರು ತಲೆಮರೆಸಿಕೊಂಡಿದ್ದು, ಹುಡು ಕಾಟ ನಡೆಯುತ್ತಿದೆ ಎಂದು ಪೊಲೀಸರುಹೇಳಿದರು.

ಆರೋಪಿಗಳು ಬಿಹಾರ ಮೂಲದ ದೆಹಲಿಯಲ್ಲಿರುವ ಅಕ್ಷಯ್‌ ಕುಮಾರ್‌, ಡಾರ್ಕ್‌ ವೆಬ್‌ ಸೈಟ್‌ನ ಟಾರ್‌ ಬ್ರೌಸರ್‌ ಬಳಸಿಕೊಂಡು ವಿಕರ್‌- ಮಿ-ವೆಬ್‌ಸೈ ಟ್‌ನಿಂದ ವಿದೇಶಿ ಮಾರಾಟಗಾರನಿಗೆ ಬಿಟ್‌ಕಾಯಿನ್‌ ಮೂಲಕ ಹಣ ಕಳುಹಿಸಿ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಬುಕ್‌ ಮಾಡು ತ್ತಿದ್ದ. ಆತ ಗಾಂಜಾ, ಹ್ಯಾಶಿಷ್‌ ಆಯಿಲ್‌, ಮಾತ್ರೆಗಳು, ಚರಸ್‌, ಎಲ್‌ಎಸ್‌ಡಿ ಮಾತ್ರೆಗಳು, ಹೈಡ್ರೋಗಾಂಜಾ ಕಳುಹಿಸುತ್ತಿದ್ದ. ಅಕ್ಷಯ್‌ ಕುಮಾರ್‌ ಅವುಗಳನ್ನು ಬೆಂಗಳೂರಿನ ಆರೋಪಿಗಳಿಗೆಕಳುಹಿಸಿ ನಿರ್ದಿಷ್ಟ ಗ್ರಾಹಕರಿಗೆ ಮನೆ ಬಾಗಿಲಿಗೆ ಡೆಲಿವರಿ ಮಾಡಿಸುತ್ತಿದ್ದ ಎಂದು ಸಿಸಿಬಿ ಪೊಲೀಸರು ಹೇಳಿದರು.

ಮನೆ ಬಾಗಿಲಿಗೆ ಡ್ರಗ್ಸ್‌
ವಿಕಾಸ್‌ಕುಮಾರ್‌, ಶಿವಂ, ರೋಹಿತ್‌, ರವಿ, ಸೈಯದ್‌ಗೆ ಮಾಸಿಕ ಇಂತಿಷ್ಟು ಸಂಬಳ ನಿಗದಿ ಪಡಿಸಿ ವೈಟ್‌ಫೀಲ್ಡ್‌ನಲ್ಲಿ ಬಾಡಿಗೆ ಮನೆ ಮಾಡಿ, ಆ
ಬಾಡಿಗೆ ಮೊತ್ತವನ್ನು ಅಕ್ಷಯ್‌ಕುಮಾರ್‌ ಪಾವತಿಸುತ್ತಿದ್ದ. ಬಳಿಕ ನಿರ್ದಿಷ್ಟ ಗ್ರಾಹಕರು ಆರೋಪಿಗಳಿಗೆ ವಾಟ್ಸ್‌ಆ್ಯಪ್‌ ಮೂಲಕ ಸಂದೇಶ ಅಥವಾಕರೆ ಮಾಡಿ ಇಂತಹ ಡ್ರಗ್ಸ್‌ ಬೇಕೆಂದು ಮನವಿ ಮಾಡುತ್ತಿದ್ದರು. ಅದರಂತೆ ಅವರಿಗೆ ಸಣ್ಣ-ಸಣ್ಣ ಪ್ಯಾಕೆಟ್‌ ಗಳ ಮೂಲಕ ಮನೆ ಬಾಗಿಲಿಗೆ ಪೂರೈಕೆ ಮಾಡುತ್ತಿದ್ದರು. ಇತ್ತೀಚೆಗೆ ವೈಟ್‌ಫೀಲ್ಡ್‌ ಠಾಣಾ ವ್ಯಾಪ್ತಿಯಲ್ಲಿ ಮಾರಾಟ ಮಾಡುವಾಗ ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ. ಬಳಿಕ ಅವರನ್ನು ಮನೆಗೆಕರೆದೊಯ್ದು ಪರಿಶೀಲಿಸಿದಾಗ ಸಾಕಷ್ಟು ನಾನಾ ರೀತಿಯ ಡ್ರಗ್ಸ್‌ಗಳು ಪತ್ತೆಯಾಗಿವೆ. ಇನ್ನು ತಲೆಮರೆಸಿಕೊಂಡಿರುವ ರೋಹಿತ್‌, ರವಿ, ಸೈಯದ್‌ ಮೂಲಕ ಐಟಿ-ಬಿಟಿ ಕಂಪನಿಯ ಉದ್ಯೋಗಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ:ಗಡಿ ಜಿಲ್ಲೆಗಳ ಡಿಸಿಗಳ ಜೊತೆ ಸಿಎಂ ಸಭೆ: ಕೋವಿಡ್ ಪರೀಕ್ಷೆ ಹೆಚ್ಚಿಸಲು ಸೂಚನೆ

ಡ್ರಗ್ಸ್‌ ಪ್ರಕರಣ: ಮತ್ತೊಬ್ಬ ಪೆಡ್ಲರ್‌ಬಂಧನ
ಬೆಂಗಳೂರು: ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೊಳಗಾದ ರೂಪದರ್ಶಿ ಮತ್ತು ಆಕೆಯ ಸ್ನೇಹಿತ ನೀಡಿದ ಮಾಹಿತಿ ಮೇರೆಗೆ ಫ‌ುಡ್‌ ಡೆಲಿವರಿ ಬಾಯ್‌ ಸೋಗಿನಲ್ಲಿ ಸೆಲೆಬ್ರಿಟಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಮತ್ತೊಬ್ಬ ಡ್ರಗ್ಸ್‌ ಪೆಡ್ಲರ್‌ನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.

ಬಿಟಿಎಂ ಲೇಔಟ್‌ನ ಹೈದರ್‌ ಅಬ್ದುಲ್‌ ಖಾದರ್‌(29) ಬಂಧಿತ. ಆರೋಪಿಯಿಂದ22 ಸಾವಿರ ರೂ. ಮೌಲ್ಯದ ಐದು ಮಾತ್ರೆ ಗಳು, ಮೊಬೈಲ್‌, ರೆಡಿಮೇಡ್‌ ಶೆರ್ಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಖಾದರ್‌ ಹೊಸ ಬಟ್ಟೆಗಳನ್ನು ಮಾರಾಟ ಮಾಡುವ ಸೋಗಿನಲ್ಲಿ ಆ ಬಟ್ಟೆಗಳಲ್ಲಿ ಮಾದಕ ವಸ್ತು ಇಟ್ಟು ಗ್ರಾಹಕರಿಗೆ ಪೂರೈಕೆಮಾಡುತ್ತಿದ್ದ.ಫುಡ್‌ಡೆಲಿವರ್‌ ಬಾಯ್‌ ನೆಪದಲ್ಲೂ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಕೇರಳ ಮೂಲದ ಹೈದರ್‌ ಅಬ್ದುಲ್‌ ಖಾದರ್‌, ಪ್ರಕರಣದಲ್ಲಿ ಬಂಧನಕ್ಕೊಳಗಾದ ರೂಪದರ್ಶಿ ಸೋನಿಯಾ ಅಗರ್‌ವಾಲ್‌ ಮತ್ತು ಆಕೆಯ ಗೆಳೆಯ
ದಿಲೀಪ್‌ಗೆ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ.ಪೊಲೀಸರಿಂದ ತಪ್ಪಿಸಿಕೊಳ್ಳಲು ಫ‌ುಡ್‌ಡೆಲಿವರಿ ಬಾಯ್‌ ಸೋಗಿನಲ್ಲಿ ಸರಬ ರಾಜು ಮಾಡುತ್ತಿದ್ದ.
ಅಲ್ಲದೆ, ಸೆಲೆಬ್ರಿಟಿಗಳು, ಉದ್ಯಮಿಗಳು, ರಾಜಕೀಯ ಮುಖಂಡರ ಮಕ್ಕಳು ಪಾಲ್ಗೊಳ್ಳುತ್ತಿದ್ದಹೈ-ಫೈ ಪಾರ್ಟಿಗಳಲ್ಲಿ ಈತ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಸ್ಮೈಲಿ ಚೆಹ್ನೆಬಳಕೆ: ಡ್ರಗ್ಸ್‌ ಬೇಕೆಂದರೆ ಖಾದರ್‌ಗೆ ವಾಟ್ಸ್‌ಆ್ಯಪ್‌ನಲ್ಲಿ ಸ್ಮೈಲಿ ಚೆಹ್ನೆ ಕಳುಹಿಸಬೇಕು. ಈ ಚಿಹ್ನೆ ಕಳುಹಿಸಿದರೆ ಮಾದಕ ವಸ್ತು
ಬೇಕೆಂದು ಅರ್ಥ. ವಿಚಾರಣೆ ವೇಳೆ ಮಾದಕ ವಸ್ತುಮಾರಾಟಕ್ಕೆ ಸ್ಮೈಲಿ ಚಿಹ್ನೆಯನ್ನುಕೋಡ್‌ ವರ್ಡ್‌ ಆಗಿ ಬಳಸಲಾಗುತ್ತಿತ್ತು ಎಂದು ಆರೋಪಿ ಹೇಳಿಕೆ ನೀಡಿದ್ದಾನೆ. ಬಳಿಕ ಆರೋಪಿ ಕಡಿಮೆ ದರದಲ್ಲಿ ರೆಡಿಮೆಡ್‌ ಶರ್ಟ್‌, ಪ್ಯಾಂಟ್‌ಗಳನ್ನು ಖರೀದಿಸಿ ಆ ಬಟ್ಟೆಗಳೊಳಗೆ  ಮಾತ್ರೆಗಳನ್ನು ಇಟ್ಟು
ಸಾಗಿಸುತ್ತಿದ್ದ. ಶರ್ಟ್‌ನ ತೋಳಿನ ಭಾಗ, ಪ್ಯಾಂಟ್‌ನ ಕಾಲಿನ ಭಾಗದಲ್ಲಿ ಮಾದಕ ವಸ್ತು ಇಟ್ಟು ಕಳುಹಿಸುತ್ತಿದ್ದ.ಈ ರೀತಿ ಬಟ್ಟೆ ಸಾಗಿಸುವಾಗ ಗೋವಿಂದಪುರ ಠಾಣೆಯ ಇನ್‌ಸ್ಪೆಕ್ಟರ್‌ ಆರ್‌. ಪ್ರಕಾಶ್‌ ಅವರ ನೇತೃತ್ವದ ತಂಡ ದಾಳಿ ನಡೆಸಿ ಮಾಲು ಸಮೇತ ಬಂಧಿಸಿತ್ತು.

ದುರುಗುಟ್ಟಿ ನೋಡಿದ್ದಕ್ಕೆ ಕೊಲೆ: ಇಬ್ಬರಬಂಧನ
ಬೆಂಗಳೂರು: ಬಾರ್‌ವೊಂದರಲ್ಲಿ ದುರುಗುಟ್ಟಿ ನೋಡಿದ್ದಕ್ಕೆ ಇಬ್ಬರ ನಡುವಿನ ಜಗಳದಲ್ಲಿ ಒಬ್ಬನಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬಸವೇಶ್ವರ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಬಸವೇಶ್ವರ ನಗರ ಬೆಮೆಲ್‌ ಲೇಔಟ್‌ ನಿವಾಸಿ ಬಾಲಾಜಿ (49) ಕೊಲೆಯಾದವ. ಈ ಸಂಬಂಧ ಕೃತ್ಯ ಎಸಗಿದ ಸಣ್ಣಕ್ಕಿ ಬಯಲು ನಿವಾಸಿ ಮಹೇಶ್‌(40) ಹಾಗೂ ಪುಟ್ಟಯ್ಯನಪಾಳ್ಯದ ನಾಗರಾಜ್‌ (36) ಬಂಧಿತರು. ಮಹೇಶ್‌ ಬಿಬಿಎಂಪಿ ಸಿಬ್ಬಂದಿಯಾಗಿದ್ದು, ನಾಗರಾಜ್‌ ಫ್ಲವರ್‌ ಡೆಕೋರೆಟರ್‌ ಆಗಿದ್ದ. ಆರೋಪಿಗಳು ಗುರುವಾರ ರಾತ್ರಿ ಬಸವೇಶ್ವರನಗರದ ಬಾರ್‌ವೊಂದಕ್ಕೆ ಕುಡಿಯಲು ಬಂದಾಗದುರುಗುಟ್ಟಿ ನೋಡಿದಕ್ಕೆ ಬಾಲಾಜಿಯನ್ನು ಹತ್ಯೆಗೈದಿದ್ದರು ಎಂದು ಪೊಲೀಸರು ಹೇಳಿದರು.

ಕೊಲೆಯಾದ ಬಾಲಾಜಿ ತನ್ನ ಸ್ನೇಹಿತರಾದ ಸುರೇಶ್‌ ಹಾಗೂ ಚಿಕ್ಕಣ್ಣ ಎಂಬುವರ ಜತೆ ಪವಿತ್ರ ಪ್ಯಾರಡೈಸ್‌ ಸಮೀಪದ ಬಾರ್‌ವೊಂದಕ್ಕೆ ಮದ್ಯ ಸೇವಿಸಲು ಹೋಗಿದ್ದರು. ಅದೇ ವೇಳೆ ಆರೋಪಿಗಳು ಕೂಡ ಮದ್ಯ ಸೇವಿಸುತ್ತಿದ್ದರು. ನೈಟ್‌ ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ 9 ಗಂಟೆ ಬಾಗಿಲು ಹಾಕಬೇಕು ಎಲ್ಲರೂ ಹೊರಡುವಂತೆ ಬಾರ್‌ ಸಿಬ್ಬಂದಿ ಹೇಳಿದ್ದಾರೆ. ಹೀಗಾಗಿ ಬಾಲಾಜಿ ಮತ್ತು ಮಹೇಶ್‌ ಹಣ ಪಾವತಿಸಲು ಬಾರ್‌ ಕ್ಯಾಷಿಯರ್‌ ಕೌಂಟರ್‌ ಬಳಿ ಬಂದಿದ್ದಾರೆ. ಈ ವೇಳೆ ಇಬ್ಬರು ಪರಸ್ಪರ ದುರುಗುಟ್ಟಿ ನೋಡಿದ್ದಾರೆ. ಅದೇ ವಿಚಾರಕ್ಕೆ ಮಹೇಶ್‌ ಮತ್ತು ಬಾಲಾಜಿ ನಡುವೆ ಜಗಳ ನಡೆದಿದೆ. ಬಳಿಕಬಾರ್‌ ಸಿಬ್ಬಂದಿ ಇಬ್ಬರನ್ನು ಹೊರಗಡೆಕಳುಹಿಸಿದ್ದಾರೆ. ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಬಾಲಾಜಿ ಸಮೀಪದ ಹೋಟೆಲ್‌ವೊಂದರ ಬಳಿ ನಿಂತಿದ್ದರು. ಅಲ್ಲಿಗೆ ಬಂದ ಆರೋಪಿಗಳು ಬಾಲಾಜಿಗೆ ಹೆಲ್ಮೆಟ್‌ನಿಂದ ತಲೆಗೆ ಹೊಡೆದು ರಕ್ತಗಾಯಗೊಳಿಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಕೆಳಗೆ ಬಿದ್ದಿದ್ದ ಬಾಲಾಜಿಯನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ಆರೋಪಿ ಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ:‘ಇಡಾ’ ಚಂಡಮಾರುತಕ್ಕೆ ಮುಳುಗಿದ ನ್ಯೂಯಾರ್ಕ್‌

ಸಿರಾಜುದ್ದೀನ್‌ವಿರುದ್ಧ ಆರೋಪಪಟ್ಟಿ ಸಲ್ಲಿಕ
ಬೆಂಗಳೂರು: ಹಿಂದೂ ಮುಖಂಡರು ಮತ್ತು ಪೊಲೀಸ್‌ ಅಧಿಕಾರಿಗಳಹತ್ಯೆಗೆ ಸಂಚು ರೂಪಿಸಿದಲ್ಲದೆ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಆರೋಪದಡಿ ಬಂಧನಕ್ಕೊಳಾಗದ ಐಸಿಸ್‌ ಪ್ರೇರಿತ ಅಲ್‌-ಹಿಂದ್‌ ಸಂಘಟನೆಯ ಶಿಹಾಬುದ್ದೀನ್‌ ಅಲಿ ಯಾಸ್‌ ಸಿರಾಜುದ್ದೀನ್‌ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಶುಕ್ರವಾರ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಿದೆ.

ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಮೆಹಬೂಬ್‌ ಪಾಶಾ ಅಲಿಯಾಸ್‌ ಅಬ್ದುಲ್ಲಾ ಸೇರಿ 17 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಗುರಪ್ಪನಪಾಳ್ಯ ನಿವಾಸಿಯಾದ ಮೆಹಬೂಬ್‌ ಪಾಷಾ ಐಸಿಸ್‌ ಪ್ರೇರಿತ ಅಲ್‌-ಹಿಂದ್‌ ಸಂಘಟನೆ ದಕ್ಷಿಣ ಭಾರತದ ಮುಖ್ಯಸ್ಥನಾಗಿದ್ದ ಕ್ವಾಜಾಮೊಹಿದ್ದೀನ್‌ ಜತೆ ಸೇರಿ ಕೊಂಡು ದೆಹಲಿ, ಮುಂಬೈನ ತನ್ನ ಸಹಚರರ ಮೂಲಕ ತರಿಸಿದ್ದ ಶಸ್ತ್ರಾಸ್ತ್ರಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ. ಈ ಮಾಹಿತಿ ಮೇರೆಗೆ ಸಿಸಿಬಿ, ಸ್ಥಳೀಯ ಪೊಲೀಸರು ಮತ್ತು ತಮಿಳುನಾಡಿನ ಕ್ಯೂ ಬ್ರ್ಯಾಂಚ್‌ ಪೊಲೀಸರು ದಾಳಿ ನಡೆಸಿ ಕೆಲವು ಆರೋಪಿಗಳನ್ನು ಬಂಧಿಸಿದ್ದರು.

ದಕ್ಷಿಣ ಭಾರತದ ಐಸಿಸ್‌ ಸಂಘಟನೆ ಮುಖ್ಯಸ್ಥ ಕ್ವಾಜಾ ಮೊಯಿದ್ದೀನ್‌ ಅಲಿಯಾಸ್‌ ಜಲಾಲ್‌, ಕ್ವಾಜಾ ಮೊಹಿದ್ದೀನ್‌ ತಮ್ಮ ಸಹಚರರ ಜತೆ ಸೇರಿ
ಕೊಂಡು 2019ರಲ್ಲಿ ತಮಿಳುನಾಡಿನ ಹಿಂದು ಪರ ಸಂಘಟನೆ ಮುಖಂಡ ಸುರೇಶ್‌ ಹತ್ಯೆಗೈದಿದ್ದರು. ಆನಂತರ ಗುರಪ್ಪನ ಪಾಳ್ಯದಲ್ಲಿ ಕ್ವಾಜಾಮೊಹಿದ್ದೀನ್‌ ಆಶ್ರಯ ಪಡೆದು ನಗರದ ಮೆಹಬೂಬ್‌ ಪಾಷ, ಕೋಲಾರದ ಸಲೀಂ, ಮಂಡ್ಯದ ಇಮ್ರಾನ್‌ ಖಾನ್‌ ತಮಿಳುನಾಡಿನ
ತೌಫಿಕ್‌, ಸೈಯದ್‌ ಅಲಿ ನವಾಜ್‌, ಜಾಫ‌ರ್‌ ಹಾಗೂ ಅಬ್ದುಲ್‌ ಶಮೀನ್‌ ಸೇರಿ ನಿರ್ದಿಷ್ಟ ಸಮುದಾಯದ ಯುವಕರನ್ನು ತಮ್ಮ ಸಂಘಟನೆಗೆ ಸೇರಿಸಿಕೊಳ್ಳವ ಕೆಲಸದಲ್ಲಿ ನಿರತರಾಗಿದ್ದರು.

ಮಹಿಳಾ ಟೆಕ್ಕಿ ಮೇಲೆ ಅತ್ಯಾಚಾರ: ನೈಜೀರಿಯಾ ಪ್ರಜೆಗಳ ಬಂಧನ
ಬೆಂಗಳೂರು: ಮದ್ಯದ ಅಮಲಿನಲ್ಲಿ ಮಹಿಳಾ ಟೆಕ್ಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.ಬಾಣಸವಾಡಿ ನಿವಾಸಿ ಟೋನಿ (35) ಮತ್ತು ಉಬಾಕಾ (36)ಬಂಧಿತರು. ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕಲಬುರಗಿ ಮೂಲದ ಸಂತ್ರಸ್ತೆ ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್ವೇರ್‌ ಉದ್ಯೋಗಿಯಾಗಿದ್ದಾರೆ. ಯುವತಿಗೆ ಹಲವು ವರ್ಷಗಳಿಂದ ನೈಜಿರಿಯಾ ಪ್ರಜೆ ಟೋನಿ ಪರಿಚಯಸ್ಥನಾಗಿದ್ದ. ಉಬಾಕಾ ಹಲವು ಬಾರಿ ಯುವತಿಯನ್ನು ಪರಿಚಯ ಮಾಡಿಕೊಳ್ಳಲು ಯತ್ನಿಸಿದ್ದ. ಆದರೆ, ಸಂತ್ರಸ್ತೆ ನಿರಾಕರಿಸಿದ್ದರು.

ಈ ಮಧ್ಯೆ ಆ.29ರಂದು ಟೋನಿ ಸಂತ್ರಸ್ತೆಯನ್ನು ಸ್ನೇಹಿತರೊಬ್ಬರ ಮನೆಗೆ ಹೋಗೋಣ ಎಂದು ಉಬಾಕಾ ಮನೆಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ಉಬಾಕಾನನ್ನು ನೋಡಿದ ಸಂತ್ರಸ್ತೆ ಟೋನಿ ಮೇಲೆ ಸಿಟ್ಟಾಗಿದ್ದರು. ಬಳಿಕ ಟೋನಿ, ಯುವತಿಯನ್ನು ಸಮಾಧಾನಪಡಿಸಿದ್ದ. ನಂತರ ಮೂವರು ಒಟ್ಟಿಗೆ ಕುಳಿತು ಮದ್ಯ ಸೇವಿಸಿದ್ದಾರೆ. ಮದ್ಯ ಸೇವಿಸಿದ ಬಳಿಕ ಸಂತ್ರಸ್ತೆ ಅರೆಪ್ರಜ್ಞಾಸ್ಥಿತಿಗೆ ತಲುಪಿದ್ದಾರೆ. ಈ ವೇಳೆ ಅತ್ಯಾಚಾರ ಎಸಗಲಾಗಿದೆ. ಪ್ರಜ್ಞೆ ಬಂದ ಬಳಿಕ ನನ್ನ ಜತೆ ಉಬಾಕ ಬೆತ್ತಲೆಯಾಗಿದ್ದ ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದರು. ಈ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಟಾಪ್ ನ್ಯೂಸ್

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

25-kota

CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parcel: ಮಹಿಳೆಯ ಮನೆಗೆ ಬಂದ ಪಾರ್ಸೆಲ್ ನಲ್ಲಿತ್ತು ಮೃತದೇಹ… 1.3 ಕೋಟಿ ರೂ.ಗೆ ಬೇಡಿಕೆ

Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

25-kota

CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.