Crime News ಕಾಸರಗೋಡು ಅಪರಾಧ ಸುದ್ದಿಗಳು
Team Udayavani, Nov 22, 2023, 12:55 AM IST
ಉಪ್ಪಳ: ಕಾರು ತಡೆದು ನಿಲ್ಲಿಸಿ ಹಲ್ಲೆ
ಕುಂಬಳೆ: ಉಪ್ಪಳದಲ್ಲಿ ನ. 20ರಂದು ಸಂಜೆ ಕಾರು ತಡೆದು ನಿಲ್ಲಿಸಿ ನವದಂಪತಿ ಹಾಗೂ ವರನ ಸಹೋದರನಿಗೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಗಂಭೀರ ಗಾಯಗೊಂಡಿರುವ ಬಂಬ್ರಾಣ ದಿನೇಶ್ ಬೀಡಿ ಕಂಪೆನಿ ಸಮೀಪದ ಅಬ್ದುಲ್ ಲತೀಫ್, ಸಹೋದರ ಮುಹಮ್ಮದ್ ಅಲ್ತಾಫ್ (22) ಮತ್ತು ಪತ್ನಿ ಡಿ.ಎಂ. ಶಮ್ನಾ (20) ಅವರನ್ನು ಕುಂಬಳೆಯ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲ್ಲಿ ಉದ್ಯೋಗಿಯಾದ ಮುಹಮ್ಮದ್ ಅಲ್ತಾಫ್ ಹಾಗು ಚೌಕಿ ನಿವಾಸಿಯಾದ ಶಮ್ನಾ ಅವರ ವಿವಾಹ ಮೂರು ತಿಂಗಳ ಹಿಂದೆ ನಡೆದಿತ್ತು. ಕಾಸರಗೋಡಿನಲ್ಲಿ ನಡೆದ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ವಾಪಸಾಗುತ್ತಿದ್ದಾಗ ಆಟೋ ರಿಕ್ಷಾದಲ್ಲಿ ಬಂದ ತಂಡವೊಂದು ಕಬ್ಬಿಣದ ಸರಳಿನಿಂದ ಹಲ್ಲೆ ಮಾಡಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಬೊಬ್ಬೆ ಕೇಳಿ ಜನರು ಅಲ್ಲಿ ಸೇರಿದಾಗ ಆಟೋದಲ್ಲಿ ಬಂದ ತಂಡ ಪರಾರಿಯಾಯಿತು. ಮಂಜೇಶ್ವರ ಪೊಲೀಸರು ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.
ಬಾಲಕಿಗೆ ಕಿರುಕುಳ : ಪ್ರಕರಣ ದಾಖಲು
ಕುಂಬಳೆ: ತಾಯಿ ಯೊಂದಿಗೆ ವೈದ್ಯರನ್ನು ಕಾಣಲು ಹೋದ 10ರ ಹರೆಯದ ಬಾಲಕಿಗೆ ಆಸ್ಪತ್ರೆಯ ಲಿಫ್ಟ್‌ನೊಳಗೆ ಕಿರುಕುಳ ನೀಡಲು ಯತ್ನಿಸಿದ ಘಟನೆ ನಡೆದಿದೆ. ಘಟನೆ ಸಂಬಂಧಿಸಿ ಕುಂಬಳೆ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ತಾಯಿ ಔಷಧ ಖರೀದಿಸಲೆಂದು ಹೋದ ಸಂದರ್ಭದಲ್ಲಿ ಬಾಲಕಿಯ ಸಮೀಪಕ್ಕೆ ಬಂದ ಯುವಕನೋರ್ವ ಲಿಫ್ಟ್ ತೋರಿಸಿಕೊಡುವುದಾಗಿ ತಿಳಿಸಿ ಆಕೆಯನ್ನು ಕರೆದೊಯ್ದು ಕಿರುಕುಳ ನೀಡಲೆತ್ನಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ತಾಯಿ ಮರಳಿ ಬಂದಾಗ ಮಗಳನ್ನು ಕಾಣದೆ ಹುಡುಕಾಡಿದಾಗ ಲಿಫ್ಟ್‌ನ ಸಮೀಪದಲ್ಲಿ ಪತ್ತೆಯಾದಳು. ವಿಚಾರಿಸಿದಾಗ ಬಾಲಕಿ ನಡೆದ ಘಟನೆಯ ಕುರಿತು ತಿಳಿಸಿದಳು. ಈ ಬಗ್ಗೆ ಕೂಡಲೇ ಪೊಲೀಸರಿಗೆ ದೂರು ನೀಡಲಾಯಿತು.
ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಕೆಮರಾ ದೃಶ್ಯಗಳನ್ನು ಪರಿ ಶೀಲಿಸುತ್ತಿದ್ದಾರೆ.
ಮೀನು ಕಾರ್ಮಿಕ ನಿಗೂಢ ನಾಪತ್ತೆ
ಮಂಜೇಶ್ವರ: ಮೀನು ಕಾರ್ಮಿಕ ಮಂಜೇಶ್ವರ ಚರ್ಚ್ ಬೀಚ್ ರಸ್ತೆ ಬಳಿಯ ನಿವಾಸಿ ದಿ| ಫೆಲಿಕ್ಸ್ ಮೊಂತೆರೋ ಅವರ ಪುತ್ರ ರೋಷನ್ ಮೊಂತೆರೋ (42) ಕಳೆದ ಮೂರು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆಂದು ಮಂಜೇ ಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.
ಕಳೆದ ಶನಿವಾರ ರಾತ್ರಿ 11.45ರ ಅನಂತರ ಇವರು ನಾಪತ್ತೆ ಯಾಗಿದ್ದಾರೆ. ಅವರ ಮೊಬೈಲ್ ಮತ್ತು ಪಾದರಕ್ಷೆ ಮನೆಯಲ್ಲೇ ಬಿಟ್ಟು ಹೋಗಿದ್ದಾರೆ. ವಿವಿಧೆಡೆ ಹುಡುಕಾಡಿದರೂ ಪತ್ತೆಯಾಗಿಲ್ಲ. ಕರಾವಳಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಬೈಕ್ ಕಳವು
ಉಪ್ಪಳ: ಕುಂಜತ್ತೂರು ಪಳ್ಳ ನಿವಾಸಿ, ನಿವೃತ್ತ ಪೋಸ್ಟ್ ಮೆನ್ ಭಾಸ್ಕರ ಅವರ ಪಲ್ಸರ್ ಬೈಕ್ ನ. 14ರಂದು ರಾತ್ರಿ ಕಳವಾಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ವ್ಯಕ್ತಿಯೋರ್ವ ಮನೆಯ ಸಿಸಿ ಕೆಮರಾದಲ್ಲಿ ಮನೆಯ ಬಳಿಯಿಂದ ಬೈಕ್ ದೂಡಿಕೊಂಡು ಹೋಗುವ ದೃಶ್ಯ ಕಂಡು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.