Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು
Team Udayavani, Apr 8, 2024, 9:40 PM IST
ಕಾರು ಢಿಕ್ಕಿ: ಗಾಯಾಳು ಸಾವು
ಪೆರ್ಲ: ಅಡ್ಕಸ್ಥಳ ಕೋಡಿಲ ಬಾಳೆಮೂಲೆಯಲ್ಲಿ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೈಕ್ ಸವಾರ ಕಾಟುಕುಕ್ಕೆ ಮೊಗರು ನಿವಾಸಿ ಅಮ್ಮು ನಾಯ್ಕ ಅವರ ಪುತ್ರ ಸೀತಾರಾಮ (49) ಸಾವಿಗೀಡಾದರು.
ಎ. 7ರಂದು ಸಂಜೆ 4.30ಕ್ಕೆ ಕಾರು ಢಿಕ್ಕಿ ಹೊಡೆದು ಸೀತಾರಾಮ ಗಂಭೀರ ಗಾಯಗೊಂಡಿದ್ದರು. ಅವರನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮುಂಜಾನೆ ಸಾವಿಗೀಡಾದರು. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳವುಗೈದಿದ್ದ ಸ್ಕೂಟರ್ ಅಪಘಾತ: ಬಂಧನ
ಕಾಸರಗೋಡು: ಕಳವುಗೈದು ಸಾಗಿಸುತ್ತಿದ್ದ ಸ್ಕೂಟರ್ ಅಪಘಾತಕ್ಕೀಡಾಗಿ, ಅದನ್ನು ಚಲಾಯಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೆರಿಂಙೊಮ್ ಕೊರಂಙಡ್ ನಿವಾಸಿ ಫಾಸಿಲ್ (26)ನನ್ನು ಬಂಧಿಸಲಾಗಿದೆ.
ತೃಕ್ಕರಿಪುರ ಒಳವರದ ಕೆ. ವಿಜಯನ್ ಅವರ ಸ್ಕೂಟರನ್ನು ತೃಕ್ಕರಿಪುರದ ಕೆ.ವಿ. ಹಾರ್ಡ್‌ವೇರ್ಸ್ ಪರಿಸರದಿಂದ ಕಳೆದ ಡಿಸೆಂಬರ್ ತಿಂಗಳಲ್ಲಿ ಕಳವು ನಡೆಸಲಾಗಿತ್ತು. ಈ ಬಗ್ಗೆ ನೀಡಲಾದ ದೂರಿನಂತೆ ಚಂದೇರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು. ಮಲಪ್ಪುರಂ ಕಲ್ಲಂಜೇರಿಯಲ್ಲಿ ಈ ಸ್ಕೂಟರ್ ಅಪಘಾತಕ್ಕೀಡಾಗಿತ್ತು. ಪೊಲೀಸರು ನಡೆಸಿದ ತನಿಖೆಯಲ್ಲಿ ಈ ಸ್ಕೂಟರ್ ಕಳವಾದ ವಾಹನವಾಗಿತ್ತೆಂದು ತಿಳಿದುಬಂದಿತ್ತು. ಅದರಂತೆ ಆತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮನೆಯಿಂದ ಕಳವು: 9 ಬೆರಳ ಗುರುತು ಪತ್ತೆ
ಕುಂಬಳೆ: ಆರಿಕ್ಕಾಡಿ ನಿವಾಸಿ, ಕೊಲ್ಲಿ ಉದ್ಯೋಗಿ ಸಿದ್ದಿಕ್ ಅವರ ಮನೆಯಿಂದ ಐದು ಪವನ್ ಚಿನ್ನಾಭರಣ ಹಾಗು 10 ಸಾವಿರ ರೂ.ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದು, ಬೆರಳ ಗುರುತು ತಜ್ಞರು 9 ಬೆರಳ ಗುರುತು ಪತ್ತೆ ಹಚ್ಚಿದ್ದಾರೆ. ಅವುಗಳ ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಟಿಎಂ ಹಣ ದರೋಡೆ: ಕಾಸರಗೋಡು
ರೈಲು ನಿಲ್ದಾಣದಲ್ಲಿ ಆರೋಪಿಗಳ ದೃಶ್ಯ ಪತ್ತೆ
ಕಾಸರಗೋಡು: ಮಾರ್ಚ್ 27ರಂದು ಅಪರಾಹ್ನ ಉಪ್ಪಳ ಪೇಟೆಯಲ್ಲಿ ಎಟಿಎಂಗೆ ಹಣ ತುಂಬಿಸಲೆಂದು ಬಂದ ಸುಮಾರು 50 ಲಕ್ಷ ರೂ. ನಗದು ದರೋಡೆ ಮಾಡಿದ ಪ್ರಕರಣದ ಆರೋಪಿಗಳ ಸ್ಪಷ್ಟ ದೃಶ್ಯ ಕಾಸರಗೋಡು ರೈಲು ನಿಲ್ದಾಣದ ಸಿಸಿ ಕೆಮರಾದಿಂದ ಪೊಲೀಸರಿಗೆ ಲಭಿಸಿದೆ.
ದರೋಡೆ ನಡೆಸಿದ ಬಳಿಕ ಆರೋಪಿಗಳು ಕಾಸರಗೋಡು ರೈಲು ನಿಲ್ದಾಣಕ್ಕೆ ಬಂದಿದ್ದರು. ಆ ವೇಳೆ ರೈಲು ನಿಲ್ದಾಣದ ಸಿಸಿ ಟಿವಿ ಕೆಮರಾದಲ್ಲಿ ಅವರ ದೃಶ್ಯ ಮೂಡಿತ್ತು. ಆದರೆ ಈ ನಿಲ್ದಾಣದಿಂದ ಆರೋಪಿಗಳು ಎಲ್ಲಿಗೆ ಹೋಗಿದ್ದಾರೆಂಬ ದೃಶ್ಯ ಸಿಸಿ ಟಿವಿಯಲ್ಲಿ ಕಂಡುಬಂದಿಲ್ಲ.
ಅಕ್ರಮ ಸ್ಫೋಟಕ ವಸ್ತುಗಳು ಪತ್ತೆ: ಇಬ್ಬರ ಬಂಧನ
ಮಂಜೇಶ್ವರ: ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಕಗ್ಗಲ್ಲಿನ ಕೋರೆಯಲ್ಲಿ ಸಂಗ್ರಹಿಸಡಲಾಗಿದ್ದ ಸ್ಫೋಟಕ ವಸ್ತುಗಳನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂಬಂಧ ಕೋರೆಯ ಕಾರ್ಮಿಕರಾದ ಝಾರ್ಖಂಡ್ ಬೆಲ್ಪಹಾದಿ ನಿವಾಸಿ ಸುಜಿತ್ ತಿಗ್ಗ (30) ಮತ್ತು ಮಲಪ್ಪುರಂ ಚೆಲೇಪ್ರ ಚಳಿಪ್ಪಾಡಂ ಪಳ್ಳಿಪರಂಬ್ ದಾರೂಲ್ ನಿಜಾತ್ ಹೌಸ್‌ನ ಅಬ್ದುಲ್ ಖಾದರ್ (29)ನನ್ನು ಪೊಲೀಸರು ಬಂಧಿಸಿದ್ದಾರೆ.
ಪೈವಳಿಕೆ ಪಂಚಾಯತ್‌ನ ದೈಗೋಳಿಯಲ್ಲಿ ಕಾರ್ಯಾಚರಿಸುವ ಕಗ್ಗಲ್ಲಿನ ಕೋರೆಯಿಂದ 33 ಜಿಲ್ಲಾಸ್ಟಿನ್ ಸ್ಟಿಕ್, 25 ಇಲೆಕ್ಟ್ರಿಕಲ್ ಡಿಟಾನೇಟರ್, ಸ್ವಿಚ್ ಬೋರ್ಡ್, ಕಂಪ್ರಸ್ಸರ್ ಅನ್ನು ಪೊಲೀಸರು ವಶಪಡಿಸಿದ್ದಾರೆ. ಕೋರೆಯ ಮಾಲಕ ಹಾಗು ನಡೆಸುತ್ತಿರುವ ವ್ಯಕ್ತಿಯ ಬಗ್ಗೆ ತನಿಖೆ ನಡೆಯುತ್ತಿದೆ. ಕಣ್ಣೂರಿನ ಪಾನೂರಿನಲ್ಲಿ ಕೆಲವು ದಿನಗಳ ಹಿಂದೆ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವ್ಯಾಪಕವಾಗಿ ತಪಾಸಣೆ ನಡೆಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳು ಆದೇಶಿಸಿದ್ದರು. ಅದರಂತೆ ಕೋರೆಗೆ ದಾಳಿ ಮಾಡಿ ಸ್ಫೋಟಕ ವಸ್ತುಗಳನ್ನು ವಶಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Madikeri: ದೇಗುಲದಲ್ಲಿ ಸಮಾನತೆಯೇ ಉದ್ದೇಶ ; ಕಟ್ಟೆಮಾಡಿನ ಶ್ರೀ ಮಹಾ ಮೃತ್ಯುಂಜಯ ವಿವಾದ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Kodagu: ಯೋಧ ದಿವಿನ್ ಪಂಚಭೂತಗಳಲ್ಲಿ ಲೀನ
Kasaragod ಅಪರಾಧ ಸುದ್ದಿಗಳು: ಅಂಗಡಿಗೆ ಲಾರಿ ಢಿಕ್ಕಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.