ಆಸ್ತಿ ತಕರಾರು : ಪೆರಾಜೆಯಲ್ಲಿ ಯುವಕನ ಕೊಲೆ
ಪಾನಮತ್ತನಾಗಿ ಮನೆಗೆ ಹೊಕ್ಕ ಮೈದುನನಿಗೆ ಕಡಿದ ಅತ್ತಿಗೆ
Team Udayavani, May 9, 2020, 12:31 PM IST
ಸುಳ್ಯ : ಆಸ್ತಿ ತಕರಾರಿನ ಹಿನ್ನಲೆಯಲ್ಲಿ ತನ್ನ ಮನೆಗೆ ಪಾನಮತ್ತನಾಗಿ ಹೊಕ್ಕ ಮೈದುನನ್ನು ಅತ್ತಿಗೆ ಹಾಗೂ ಆಕೆಯ ಮಗ ಸೇರಿ ಕತ್ತಿಯಿಂದ ಕಡಿದ ಪರಿಣಾಮ ಮೈದುನ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಪೆರಾಜೆಯಲ್ಲಿ ನಡೆದಿದೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದ್ದು, ಕತ್ತಿಯಿಂದ ಕಡಿದ ಅತ್ತಿಗೆ ಮತ್ತು ಆಕೆಯ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೆರಾಜೆ ಗ್ರಾಮದ ಪೀಚೆ ಎಂಬಲ್ಲಿ ಶುಕ್ರವಾರ ಮಧ್ಯರಾತ್ರಿ ಈ ಘಟನೆ ಸಂಭವಿಸಿದೆ. ಪೀಚೆ ಮನೆಯ ಶ್ರೀಮತಿ ತಾರಿಣಿ ಹಾಗೂ ಉತ್ತರಕುಮಾರ ಎಂಬವರ ಜಾಗ ಅಕ್ಕಪಕ್ಕದಲ್ಲಿದ್ದು, ಸಂಬಂಧದಲ್ಲಿ ಇವರು ಅತ್ತಿಗೆ ಮತ್ತು ಮೈದುನ. ಇವರೊಳಗೆ ಆಸ್ತಿ ತಕರಾರು ಇತ್ತು. ನಿನ್ನೆ ಮಧ್ಯರಾತ್ರಿ ಉತ್ತರಕುಮಾರ ಪಾನಮತ್ತನಾಗಿ ತಾರಿಣಿಯವರ ಮನೆಯಂಗಳಕ್ಕೆ ಬಂದು ಬೈಯ್ಯತೊಡಗಿದರೆನ್ನಲಾಗಿದೆ ನಂತರ ಅವರ ಮನೆ ಹೊಕ್ಕಲು ಪ್ರಯತ್ನ ಪಟ್ಟಾಗ ತಾರಿಣಿ ಮತ್ತು ಆಕೆಯ ಪುತ್ರ ಧರಣೀಧರ ಕತ್ತಿಯಿದ ಕಡಿದಿದ್ದಾರೆ ಗಂಭೀರ ಗಾಯಗೊಂಡು ಕುಸಿದು ಬಿದ್ದ ಉತ್ತರಕುಮಾರ ಸ್ಥಳದಲ್ಲಿಯೇ ಸಾವನ್ನಪ್ಪಿದರೆನ್ನಲಾಗಿದೆ.
ಇಂದು ಬೆಳಿಗ್ಗೆ ಮಡಿಕೇರಿಯಿಂದ ಪೊಲೀಸ್ ಅಧಿಕಾರಿಗಳು ಆಗಮಿಸಿ ತನಿಖೆ ಆರಂಭಿಸಿದ್ದಾರೆ. ತಾರಿಣಿ ಮತ್ತು ಧರಣೀಧರ ಅವರನ್ನು ವಶಕ್ಕೆ ಪಡೆದಿದ್ದಾರೆ.
ಆಸ್ತಿ ವೈಷಮ್ಯ
ಪೀಚೆ ಮನೆಯ ದಿ.ಸಣ್ಣಯ್ಯ ಮತ್ತು ದಿ.ಮುದ್ದಯ್ಯ ಸಹೋದರರು. ಸಣ್ಣಯ್ಯ ಗೌಡರ ಪುತ್ರ ದಿ.ಕೇಶವ, ಇವರ ಪತ್ನಿ ತಾರಿಣಿ. ಮುದ್ದಯ್ಯರವರ ಪುತ್ರ ಉತ್ತರಕುಮಾರ. ಆಸ್ತಿ ವಿಂಗಡಣೆಗೆ ಸಂಬಂಧಿಸಿ ತಾರಿಣಿ ಹಾಗೂ ಉತ್ತರಕುಮಾರರ ಮಧ್ಯೆ ವಿವಾದವಿತ್ತು. ಅವರ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಕೆಲವು ತಿಂಗಳ ಹಿಂದೆ ತಾರಿಣಿಯವರ ಮನೆಗೆ ಸಂಬಂಧಿಕರೊಬ್ಬರು ಬಂದಿದ್ದಾಗ ಇವರು ಮಾಡಿಕೊಟ್ಟ ಚಹಾದಲ್ಲಿ ವಿಷ ಬೆರೆಸಿದ ಆರೋಪವನ್ನು ಉತ್ತರ ಮತ್ತು ಭವಾನಿಶಂಕರರ ಮೇಲೆ ತಾರಿಣಿಯವರು ಹೊರಿಸಿದ್ದರು. ಈ ಬಗ್ಗೆ ತಾರಿಣಿಯವರು ಪೊಲೀಸರಿಗೆ ದೂರನ್ನು ಕೂಡಾ ನೀಡಿದ್ದರು. ಆದರೆ ಅದು ತನಿಖೆಯಾಗಿಲ್ಲವೆನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.