ಲಾಕ್‌ಡೌನ್‌ನಿಂದ ಕೃಷಿ ನೀರಾವರಿಗೂ ಸಂಕಷ್ಟ
ಕೃಷಿ ಯಂತ್ರೋಪಕರಣಗಳು ಅಲಭ್ಯ ; ಪಂಪ್‌ಸೆಟ್ ಮಾರಾಟ-ದುರಸ್ತಿ ಸ್ಥಗಿತ
Team Udayavani, Apr 5, 2020, 12:32 PM IST
ಬಂಟ್ವಾಳ/ಪುತ್ತೂರು: ಬಿರು ಬೇಸಗೆಯ ಈ ದಿನಗಳಲ್ಲಿ ಕೃಷಿಗೆ ನೀರು ಅತ್ಯಗತ್ಯ. ಆದರೆ ಕೋವಿಡ್ 19 ಲಾಕ್‌ಡೌನ್ ಪರಿಣಾಮ ಕೃಷಿ ಪಂಪುಸೆಟ್‌ಗಳ ಮಾರಾಟ, ದುರಸ್ತಿ ಸೇವೆ, ನೀರಾವರಿ ಪೈಪುಗಳ ಮಳಿಗೆಗಳು ಬಂದ್ ಆಗಿರುವುದರಿಂದ ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಕೃಷಿ ಯಂತ್ರೋಪಕರಣಗಳ ಮಾರಾಟ, ದುರಸ್ತಿ ಮಳಿಗೆಗಳನ್ನು ತೆರೆಯುವಂತೆ ಆದೇಶ ಬಂದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರಾ ದರೂ ಅನುಷ್ಠಾನವಾಗಿಲ್ಲ. ಪಂಪು ಸೆಟ್‌ಗಳಲ್ಲಿ ದೋಷ ಕಂಡುಬಂದು ಬರುವುದು ಸ್ಥಗಿತವಾದರೆ ದುರಸ್ತಿಗೊಳಿಸುವವರು ಸಿಗುತ್ತಿಲ್ಲ. ಇದರಿಂದ ಬಿಸಿಲಿನ ತಾಪಕ್ಕೆ ಸಂಪೂರ್ಣ ಸುಟ್ಟು ಹೋಗುವ ಸಾಧ್ಯತೆಯೇ ಹೆಚ್ಚು ಎಂದು ಕೃಷಿಕರು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಮತ್ತೂಂದೆಡೆ ವಿದ್ಯುತ್ ವೋಲ್ಟೆàಜ್ ಸಮಸ್ಯೆಯೂ ಕಾಡುತ್ತಿರುವುದರಿಂದ ಸ್ಪ್ರಿಂಕ್ಲರ್ ಸರಿಯಾಗಿ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಕೃಷಿಕರು ಹೇಳುತ್ತಿದ್ದಾರೆ.
ನೀರಿನ ಕೊರತೆಯಿಂದ ತೋಟ ಒಮ್ಮೆ ಸುಟ್ಟು ಹೋದರೆ ಮತ್ತೆ ಹಿಂದಿನಂತಾಗಲು ಕನಿಷ್ಠ 8 ವರ್ಷ ಬೇಕು. ಪಂಪು, ಪೈಪ್, ಫಿಟ್ಟಿಂಗ್ ಯಾವುದೂ ಸಿಗುತ್ತಿಲ್ಲ. ತತ್‌ಕ್ಷಣವೇ ಕೃಷಿ ಸಂಬಂಧ ಮಳಿಗೆಗಳನ್ನು ತೆರೆಯುವಂತೆ ಸರಕಾರ ಆದೇಶ ನೀಡಬೇಕು ಎಂದು ಬಡಗಕಜೆಕಾರಿನ ಕೃಷಿಕ ಹರೀಶ್ ಪ್ರಭು ಆಗ್ರಹಿಸಿದ್ದಾರೆ.
ಆದೇಶ ಬಂದಿದೆ;ಕ್ರಮ ಕೈಗೊಳ್ಳುತ್ತೇವೆ
ಕೃಷಿಕರ ತೊಂದರೆಯನ್ನು ಮನಗಂಡಿರುವ ಕೇಂದ್ರ ಗೃಹ ಸಚಿವಾಲಯ ಕೃಷಿ ಯಂತ್ರೋಪಕರಣ ಮಾರಾಟ, ದುರಸ್ತಿ ಮಳಿಗೆಗಳನ್ನು ತೆರೆಯುವಂತೆ ಎ. 3ಕ್ಕೆ ಆದೇಶ ನೀಡಿದೆ. ಅಂತಹ ಮಳಿಗೆಗಳನ್ನು ಗುರುತಿಸಿ ಪ್ರತಿ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರ ಮೂಲಕ ಪಾಸ್ ವಿತರಿಸಲಾಗುತ್ತದೆ. ಪಾಸ್‌ಗಾಗಿ ಅವರೇ ಅರ್ಜಿ ಸಲ್ಲಿಸಬಹುದು, ಇಲ್ಲದೇ ಇದ್ದರೆ ನಾವೇ ಅಂತಹವರನ್ನು ಗುರುತಿಸಿ ಪಾಸ್ ವಿತರಿಸುತ್ತೇವೆ ಎಂದು ದ.ಕ. ಜಿಲ್ಲಾ ಕೃಷಿ ಇಲಾಖೆಯ ಜಂಟಿ ನೀರ್ದೇಶಕಿ ಸೀತಾ ತಿಳಿಸಿದ್ದಾರೆ.
ತರಕಾರಿ ಬೆಳೆದವರು ಕಂಗಾಲು
ಫೆಬ್ರವರಿಯಿಂದ ಎಪ್ರಿಲ್ ತನಕ ಬಹುತೇಕ ರೈತರು ತರಕಾರಿ ಬೆಳೆಯುವುದು ಕ್ರಮ. ಸೌತೆ, ತೊಂಡೆಕಾಯಿ, ಹರಿವೆ, ಬದನೆ ಮೊದಲಾದ ತರಕಾರಿಗಳನ್ನು ಬೆಳೆದ ರೈತರು ಈಗ ಮಾರುಕಟ್ಟೆ ಇಲ್ಲದೆ ಪರದಾಡುತ್ತಿದ್ದಾರೆ. ಕೆಲವು ರೈತರು ಕಡಿಮೆ ಬೆಲೆಗೆ ಅಥವಾ ಉಚಿತವಾಗಿ ಸ್ಥಳೀಯರಿಗೆ ಒದಗಿಸುತ್ತಿದ್ದಾರೆ.
ಮಾರ್ಚ್-ಎಪ್ರಿಲ್‌ನಲ್ಲಿ ಸಹಕಾರಿ ಬ್ಯಾಂಕ್‌ಗಳಿಗೆ ಸಾಲದ ಕಂತು ಮರುಪಾವತಿ ಮಾಡಬೇಕಾದ ರೈತ ಅಡಿಕೆಗೆ ಮಾರುಕಟ್ಟೆ ಇಲ್ಲದ ಕಾರಣ ಸಾಲದ ಕಂತು ಪಾವತಿಸಲು ಸಾಧ್ಯವಿಲ್ಲದಂತಾಗಿದೆ. ರಾಜ್ಯ ಸರಕಾರ ಸಾಲದ ಕಂತು ಮರುಪಾವತಿ ಮಾಡಲು ಅವಧಿ ಮುಂದುವರಿಸಿದ್ದರೂ ಸಹಕಾರಿ ಬ್ಯಾಂಕ್‌ಗಳು ಜನರಿಗೆ ಒತ್ತಡ ಹೇರುವ ಭೀತಿ ಇದೆ.
ಗ್ರೀನ್‌ಪಾಸ್
ಕೃಷಿ ಚಟುವಟಿಕೆ ನಿರಂತರವಾಗಿರಬೇಕು. ಅದಕ್ಕೆ ಯಾವುದೇ ತೊಂದರೆ ನೀಡಬಾರದು ಎಂಬ ಆದೇಶವಿದೆ. ಕಾರ್ಮಿಕರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೃಷಿ ಕೆಲಸ ಮಾಡಿಸುವುದಕ್ಕೂ ಅವಕಾಶವಿದೆ. ಅದಕ್ಕಾಗಿ ಕೃಷಿ ಇಲಾಖೆ ಗ್ರೀನ್‌ಪಾಸ್ ನೀಡುತ್ತಿದೆ.
– ಎಚ್.ಆರ್. ನಾಯಕ್
ಉಪನಿರ್ದೇಶಕರು, ತೋಟಗಾರಿಕಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.